ರಾಜಧಾನಿಯಲ್ಲಿ ವರುಣನ ರೌದ್ರವತಾರ! ರಸ್ತೆಗಳು ಜಲಾವೃತ, ತಪ್ಪದ ವಾಹನ ಸವಾರರ ಪರದಾಟ

ಬೆಂಗಳೂರು: ಇಂದು ಮುಂಜಾನೆ ಸುರಿದ ಭಾರಿ ಮಳೆಯಿಂದಾಗಿ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದ್ದು, ರಾಜಧಾನಿಯ ಹಲವು ಪ್ರದೇಶಗಳು ಮಳೆಯಿಂದ ಜಲಾವೃತಗೊಂಡಿವೆ. ರಸ್ತೆ ಪೂರ ಮಳೆ ನೀರು ತುಂಬಿದ ಕಾರಣ ಸಂಚಾರಕ್ಕೆ ತೀವ್ರ ತೊಂದರೆ ಉಂಟಾಗಿದ್ದು, ವಾಹನ ಸವಾರರ ಗೋಳಾಟ ಮುಂದುವರೆದಿದೆ.

ಇದನ್ನೂ ಓದಿ: ಗುಲಬರ್ಗಾ ವಿಶ್ವವಿದ್ಯಾಲಯ ಘಟಿಕೋತ್ಸವದಲ್ಲಿ ಲಿಂಗರಾಜಅಪ್ಪ, ತಿವಾರಿ, ದಸ್ತಿ ಅವರಿಗೆ ಗೌರವ ಡಾಕ್ಟರೇಟ್ ಪದವಿ ಪ್ರದಾನ

ನಿನ್ನೆಯವರೆಗೂ ಬೆಂಗಳೂರಿನಲ್ಲಿ ಮಳೆಯ ಮುನ್ಸೂಚನೆಯೇ ಇರಲಿಲ್ಲ. ಆದ್ರೆ, ಇಂದು ಬೆಳಗ್ಗೆ ನಿರಂತವಾಗಿ ಸುರಿದ ಗುಡುಗು ಸಹಿತ ಮಳೆ, ಸುಮಾರು ಮೂರ್ನಾಲ್ಕು ಗಂಟೆ ಎಡಬಿಡದೆ ಸುರಿದಿದೆ. ಇದರ ಪರಿಣಾಮ ರಾಜಧಾನಿಯಲ್ಲಿ ಜನ-ಜೀವನ ಅಸ್ತವ್ಯಸ್ತಗೊಂಡಿದೆ. ನಗರದ ಕೆ.ಆರ್.ಮಾರುಕಟ್ಟೆ ರಸ್ತೆಗಳು ಕೆಸರು ಗದ್ದೆಯಂತಾಗಿದ್ದು, ಜಕ್ಕೂರು ಅಂಡರ್ ಪಾಸ್ ನೀರಿನಿಂದ ಮುಳುಗಡೆಯಾಗಿದೆ. ನಾಗಾವಾರ ಜಂಕ್ಷನ್​, ವರ್ತೂರು, ಹೆಬ್ಬಾಳ ನಡುವಿನ ಹೊರ ವರ್ತುಲ ರಸ್ತೆಯಲ್ಲಿ ಭಾರಿ ನೀರು ನಿಂತಿದ್ದು, ಎರಡೂ ಕಡೆ ವಾಹನ ಸಂಚಾರ ಮಂದಗತಿಯಲ್ಲಿ ಸಾಗುತ್ತಿದೆ. ಸಂಚಾರಿ ಪೊಲೀಸರು ನೀರು ನಿಂತ ಸ್ಥಳದಲ್ಲಿ ವಾಹನ ಸವಾರರಿಗೆ ಸಹಾಯ ಮಾಡುವಲ್ಲಿ ನಿರತರಾಗಿದ್ದಾರೆ.

ಇನ್ನು ಮಳೆಯ ಆರ್ಭಟಕ್ಕೆ ತತ್ತರಿಸಿರುವ ಸಿಲಿಕಾನ್ ಸಿಟಿ ಜನರು ಬಿಬಿಎಂಪಿಗೆ ಹಿಡಿಶಾಪ ಹಾಕಿದ್ದು, ಒಳಚರಂಡಿ ವ್ಯವಸ್ಥೆಗಳು ಏನಾಗಿದೆ? ನೀರು ನಿಲ್ಲುವಂತ ಪರಿಸ್ಥಿತಿ ಏಕೆ? ಎಂದು ಅಧಿಕಾರಿಗಳನ್ನು ಹಿಗ್ಗಾಮುಗ್ಗಾ ತರಾಟೆ ತೆಗೆದುಕೊಂಡಿದ್ದಾರೆ. ಇನ್ನು ಎಲೆಕ್ಟ್ರಾನಿಕ್​ ಸಿಟಿಯ ಫ್ಲೈಓವರ್​ ಮಳೆ ನೀರಿನಿಂದ ಮುಚ್ಚಿಹೋಗಿದ್ದು, ಸದ್ಯ ಅದನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಹವಾಮಾನ ವರದಿಯ ಪ್ರಕಾರ, ಇನ್ನು ಮೂರು ದಿನಗಳ ಕಾಲ ಬೆಂಗಳೂರಿನಲ್ಲಿ ವರುಣನ ಆರ್ಭಟ ಮುಂದುವರೆಯಲಿದೆ.

ಕಷ್ಟದ ದಿನಗಳಲ್ಲಿ ಇದೊಂದು ಚಿತ್ರವನ್ನು ಪದೇ ಪದೇ ನೋಡ್ತಿದ್ದೆ: ವಿಜಯ್ ಸೇತುಪತಿ ಹೇಳಿದ ಆ ಸಿನಿಮಾ ಯಾರದ್ದು?

Share This Article

ಪುರುಷರೇ ಎಡಗೈ, ಮಹಿಳೆಯರ ಬಲ ಅಂಗೈ ತುರಿಕೆಯಾದ್ರೆ ಕಾದಿದೆ ಈ ಗಂಡಾಂತರ!

ಬೆಂಗಳೂರು: ಅಂಗೈ ತುರಿಕೆಯಾಗಿದೆ ಎಂದರೆ ಹಣ ಬರುತ್ತದೆ ಎಂದು ಹಲವರು ಹೇಳುತ್ತಾರೆ. ಕೆಲವರು ಹಣ ಕಳೆದುಕೊಳ್ಳುತ್ತಿದ್ದಾರೆ…

ಈ ದಿನಾಂಕದಂದು ಜನಿಸಿದವರು ಜೀವನದಲ್ಲಿ ರಾಜರಂತೆ ಬದುಕುತ್ತಾರೆ… ನೀವೂ ಇದೇ ದಿನ ಹುಟ್ಟಿದ್ದೀರಾ ನೋಡಿ!

ಜ್ಯೋತಿಷ್ಯಶಾಸ್ತ್ರದಲ್ಲಿ ಸಂಖ್ಯಾಶಾಸ್ತ್ರವೂ ಒಂದು. ಇದರ ಪ್ರಕಾರ ವ್ಯಕ್ತಿಯ ಜನ್ಮ ದಿನಾಂಕವು ಅವನ ವ್ಯಕ್ತಿತ್ವದ ಬಗ್ಗೆ ಮತ್ತು…

ಈ ಮೂರು ಕೆಲಸಗಳನ್ನು ಮಾಡಿದ ನಂತರ ಹಲ್ಲುಜ್ಜಬೇಡಿ! ಅನಾರೋಗ್ಯಕ್ಕೊಳಗಾಗುವುದು ಖಂಡಿತ..

ಬೆಂಗಳೂರು: ಬಾಯಿಯನ್ನು ಸುರಕ್ಷಿತವಾಗಿಟ್ಟುಕೊಳ್ಳುವುದು ಆರೋಗ್ಯಕ್ಕೆ ಬಹಳ ಮುಖ್ಯ. ಸೂಕ್ಷ್ಮಜೀವಿಗಳು ಬಾಯಿಯ ಮೂಲಕ ಹೊಟ್ಟೆಯನ್ನು ಪ್ರವೇಶಿಸುತ್ತವೆ. ಇದು…