ಬಾಡಿಗೆ ಕಟ್ಟಿ, ಇಲ್ಲವೇ ಮನೆ ಖಾಲಿ ಮಾಡಿ; ನಟ ಯಶ್ ತಾಯಿಗೆ ಹೈಕೋರ್ಟ್​ ತಾಕೀತು​

ಬೆಂಗಳೂರು: ಬಾಡಿಗೆ ಮನೆ ವಿಚಾರವಾಗಿ ಸ್ಯಾಂಡಲ್​ವುಡ್​ ನಟ ಯಶ್ ಅವರ​ ತಾಯಿಗೆ ಹೈಕೋರ್ಟ್​ನಲ್ಲಿಯೂ ಭಾರಿ ಹಿನ್ನೆಡೆಯಾಗಿದೆ.

ಕೆಳ ನ್ಯಾಯಾಲಯದ ಆದೇಶ ಎತ್ತಿಹಿಡಿದ ಹೈಕೋರ್ಟ್​ ಬಾಡಿಗೆ ಪಾವತಿಸಿ, ಇಲ್ಲವೇ ಮನೆ ಖಾಲಿ ಮಾಡಿ ಎಂದು ನಟ ಯಶ್​ ತಾಯಿಗೆ ಸೂಚಿಸಿದೆ. 23.27 ಲಕ್ಷ ರೂ. ಬಾಡಿಗೆ ಪಾವತಿಸುವಂತೆ ಸೂಚನೆ ನೀಡಿರುವ ನ್ಯಾಯಾಲಯ​​ ತಕ್ಷಣ ಪಾವತಿಸಿದರೆ ಮುಂದಿನ ಮಾರ್ಚ್​ 31ರ ವರೆಗೆ ಇರಬಹುದು. ಇಲ್ಲವಾದಲ್ಲಿ ಡಿಸೆಂಬರ್​​ಗೆ ಖಾಲಿ ಮಾಡುವಂತೆ ತಾಕೀತು ಮಾಡಿದೆ.

ನ್ಯಾಯಮೂರ್ತಿಗಳಾದ ಬೋಪಣ್ಣ, ಶ್ರೀನಿವಾಸ್ ಹರೀಶ್‌ಕುಮಾರ್ ಅವರನ್ನೊಳಗೊಂಡ ದ್ವಿಸದಸ್ಯ ಪೀಠ ಆದೇಶಿಸಿದೆ. ಸೆಷನ್ಸ್ ಕೋರ್ಟ್ ಆದೇಶವನ್ನು ಪ್ರಶ್ನಿಸಿ ಯಶ್ ತಾಯಿ ಪುಷ್ಪಾ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು.

ಮುನಿ ಪ್ರಸಾದ್​ ಹಾಗೂ ಡಾ. ವನಜಾ ಅವರಿಗೆ ಸೇರಿದ ಮನೆಯಾಗಿದ್ದು, ಕತ್ರಿಗುಪ್ಪೆಯಲ್ಲಿದೆ. ಇದೇ ಮನೆಯಲ್ಲಿದ್ದಾಗ ಯಶ್​ ಸಾಕಷ್ಟು ಹಿಟ್ ಮೂವಿ ಕೊಟ್ಟಿದ್ದರು. ಹೀಗಾಗಿ ಅದೃಷ್ಟದ ಮನೆ ಎಂಬ ಕಾರಣಕ್ಕೆ ಮನೆ ಖಾಲಿ ಮಾಡಲು ನಿರಾಕರಿಸಿದ್ದರು. (ದಿಗ್ವಿಜಯ ನ್ಯೂಸ್​)