ಕಾಣೆಯಾಗಿರೋ ಪತಿಯನ್ನು ಹುಡುಕಿ‌ ಕೊಡದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳೋದಾಗಿ ಗೃಹಿಣಿ ಬೆದರಿಕೆ

ಬೆಂಗಳೂರು: ನಾಪತ್ತೆಯಾಗಿರುವ ಪತಿಯನ್ನು ಹುಡುಕಿ‌ ಕೊಡದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಗೃಹಿಣಿಯೊಬ್ಬಳು ಬೆಂಗಳೂರು ಪೊಲೀಸರಿಗೆ ಬೆದರಿಕೆಯೊಡ್ಡಿರುವ ಘಟನೆ ವರದಿಯಾಗಿದೆ.

ಮಹಾರಾಷ್ಟ್ರದ ನಾಗಪುರ ಮೂಲದವರಾದ ಜೈ ಮತ್ತು ಜಿನಿಶಾ ಎರಡೂವರೆ ವರ್ಷದ ಹಿಂದೆ ಮದುವೆಯಾಗಿ, ಬೆಂಗಳೂರಿನಲ್ಲಿ ನೆಲೆಸಿದ್ದರು. ಕಳೆದ ಒಂದು ವಾರದಿಂದ ಪತಿ ಜೈ ಕಾಣೆಯಾಗಿದ್ದು, ಎಚ್​ಎಸ್​ಆರ್​ ಲೇಔಟ್​ ದೂರು ನೀಡಿದ್ದರೂ ಕೂಡ ಪ್ರಯೋಜನವಾಗಿಲ್ಲ ಎಂದು ಜಿನಿಶಾ, ಅಸಮಾಧಾನ ಹೊರಹಾಕಿದ್ದಾರೆ.

ನನಗೆ ಒಂದು ವರ್ಷದ ಮಗು ಇದ್ದು, ನಾನು ಬೆಂಗಳೂರಿನಲ್ಲಿ ಒಬ್ಬಳೇ ವಾಸಿಸುತ್ತಿದ್ದೇನೆ. ಆರ್ಥಿಕ ಪರಿಸ್ಥಿತಿಯೂ ಉತ್ತಮವಾಗಿಲ್ಲ. ಸಾಕಷ್ಟ ನೊಂದಿದ್ದೇನೆ. ಒಂದು ವೇಳೆ ನಾನು ಆತ್ಮಹತ್ಯೆ ಮಾಡಿಕೊಂಡರೆ, ಅದಕ್ಕೆ ಬೆಂಗಳೂರು ಪೊಲೀಸರೇ ಹೊಣೆ ಎಂದು ಸಾಮಾಜಿಕ ಜಾಲತಾಣದ ಮೂಲಕ ಬೆದರಿಕೆ ಹಾಕಿದ್ದಾರೆ.