ಗ್ರಾಹಕರ ಸೋಗಿನಲ್ಲಿ ಬಂದು ದುಬಾರಿ ಸೀರೆಗಳನ್ನು ಕದ್ದೊಯ್ದ ದಂಪತಿ!

ಬೆಂಗಳೂರು: ಗ್ರಾಹಕರ ಸೋಗಿನಲ್ಲಿ ಬಂದ ದಂಪತಿ ದುಬಾರಿ ಸೀರೆಗಳನ್ನು ಕಳ್ಳತನ ಮಾಡಿರುವ ಘಟನೆ ನಗರದ ವಿದ್ಯಾರಣ್ಯಪುರದ ಅಂಗಡಿಯೊಂದರಲ್ಲಿ ನಡೆದಿದೆ.

ನಂಜಪ್ಪ ಸರ್ಕಲ್ ಬಳಿಯ ಶ್ರೀ ಸಾಯಿ ಸ್ಯಾರಿ ಪ್ಯಾಲೇಸ್​ನಲ್ಲಿ​ ಭಾನುವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಗ್ರಾಹಕರ ಸೋಗಿನಲ್ಲಿ ಸೀರೆ ಖರೀದಿಸಲು ಬಂದಿದ್ದ ದಂಪತಿ ಸಿಬ್ಬಂದಿಯ ಗಮನವನ್ನು ಬೇರೆಡೆ ಸೆಳೆದು 20 ದುಬಾರಿ ಸೀರೆಗಳನ್ನು ಕಳವು ಮಾಡಿದ್ದಾರೆ.

3 ಲಕ್ಷ ಮೌಲ್ಯದ 20 ಸೀರೆಗಳನ್ನು ಕದ್ದು ದಂಪತಿ ಪರಾರಿಯಾಗಿದ್ದಾರೆ. ಆರೋಪಿಗಳು ಆಂಧ್ರಪ್ರದೇಶ ನೋಂದಣಿಯ ಬೈಕ್​ನಲ್ಲಿ ಬಂದಿದ್ದರು. ದಂಪತಿಯ ಕೈಚಳಕ ಸಿಸಿಕ್ಯಾಮರಾದಲ್ಲಿ ಸೆರೆಯಾಗಿದ್ದು, ದಿಗ್ವಿಜಯ ನ್ಯೂಸ್​ಗೆ ಸಿಸಿಟಿವಿ ದೃಶ್ಯಾವಳಿ ಲಭ್ಯವಾಗಿದೆ. ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.