‘ಪಂಚಾಯ್ತಿ ಕಟ್ಟೆ’ಗೂ ತಲುಪಿದ ವಿಜಯವಾಣಿ ಜನತಾ ದರ್ಶನ; ರಾಮೋಹಳ್ಳಿ ಗ್ರಾಪಂನಲ್ಲಿ ಅಹವಾಲು ಸ್ವೀಕಾರ

ಬೆಂಗಳೂರು: ವಿಜಯವಾಣಿ ಹಾಗೂ ದಿಗ್ವಿಜಯ ನ್ಯೂಸ್​ ಚಾನಲ್​, ಬೆಂಗಳೂರಿನ ಎಲ್ಲ ವಾರ್ಡ್​ಗಳಲ್ಲಿ ನಾಗರಿಕರ ಕುಂದು ಕೊರತೆಗಳ ನಿವಾರಣೆಗಾಗಿ ‘ವಿಜಯವಾಣಿ ಜನತಾ ದರ್ಶನ’ ಕಾರ್ಯಕ್ರಮವನ್ನು ನಡೆಸಿಕೊಂಡು ಬರುತ್ತಿದ್ದು, ಕಾರ್ಯಕ್ರಮಕ್ಕೆ ಅಭೂತಪೂರ್ವ ಬೆಂಬಲ ವ್ಯಕ್ತವಾದ ಹಿನ್ನೆಲೆಯಲ್ಲಿ ಇದೀಗ ಗ್ರಾಮ ಪಂಚಾಯಿತಿ ವ್ಯಾಪ್ತಿಗೂ ಈ ಕಾರ್ಯಕ್ರಮವನ್ನು ವಿಸ್ತರಿಸಲಾಗಿದೆ.

‘ವಿಜಯವಾಣಿ ಪಂಚಾಯ್ತಿ ಕಟ್ಟೆ’ ಎಂಬ ಹೆಸರಿನಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದ್ದು, ಗ್ರಾ.ಪಂ ವ್ಯಾಪ್ತಿಯ ಶಾಸಕರು, ಪಂಚಾಯಿತಿ ಅಧ್ಯಕ್ಷರು, ಸದಸ್ಯರು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಒಂದೇ ವೇದಿಕೆಯಲ್ಲಿ ಹಾಜರಿದ್ದು, ಜನರ ಅಹವಾಲು ಕೇಳಿ ಸ್ಥಳದಲ್ಲೇ ಪರಿಹಾರ ಸೂಚಿಸಬೇಕೆಂಬುದು ಪತ್ರಿಕೆಯ ಆಶಯವಾಗಿದೆ.

ಜನತಾ ದರ್ಶನವೆಂಬ ದಾರಿ ದೀಪ
ಜನರು ತಮ್ಮ ಕುಂದು ಕೊರತೆಗಳನ್ನು ತಿಳಿಸಲು ಜನಪ್ರತಿನಿಧಿಗಳ ಬಳಿ ಅಲೆದಲೆದು ಹೈರಾಣಾಗುತ್ತಿದ್ದರು. ಎಷ್ಟು ಬಾರಿ ಸಮಸ್ಯೆ ಹೇಳಿಕೊಂಡರು ಬಗೆಹರಿಯುವ ಲಕ್ಷಣಗಳೇ ಕಾಣದಿದ್ದಾಗ ಜನರಿಗೆ ಹತ್ತಿರವಾದದ್ದು ವಿಜಯವಾಣಿಯ ಜನತಾ ದರ್ಶನ ಕಾರ್ಯಕ್ರಮ. ಜನಪ್ರತಿನಿಧಿಗಳಿಂದ ಹಿಡಿದು ಅಧಿಕಾರಿ ವರ್ಗಗಳನ್ನು ಒಂದೇ ಸೂರಿನಡಿ ಸೇರಿಸಿ ಜನರಿಂದ ಅಹವಾಲುಗಳು ನೇರವಾಗಿ ಸಂಬಂಧಪಟ್ಟ ಜನಪ್ರತಿನಿಧಿಗಳ ಮೂಲಕ ಅಧಿಕಾರಿಗಳಿಗೆ ಮುಟ್ಟಿಸಿ ಸಮಸ್ಯೆಯನ್ನು ಬಗೆಹರಿಸುವುದೇ ಈ ಕಾರ್ಯಕ್ರಮದ ಉದ್ದೇಶ. ಇದು ಇನ್ನಷ್ಟು ಜನರಿಗೆ ಸದ್ಬಳಕೆ ಆಗಲಿ ಎಂಬ ಉದ್ದೇಶದಿಂದ ವಿಜಯವಾಣಿ ಗ್ರಾ.ಪಂ. ಮಟ್ಟದಲ್ಲಿ ಕಾರ್ಯಕ್ರಮವನ್ನು ಆಯೋಜಿಸುತ್ತಿದ್ದು ಜನರ ನಾಡಿ ಮಿಡಿತಗಳಿಗೆ ಸ್ಪಂದಿಸುವ ಕೆಲಸ ಮಾಡುತ್ತಿದೆ.

ಈ ಬಾರಿಯ ಪಂಚಾಯ್ತಿ ಕಟ್ಟೆ ಎಲ್ಲಿ?
ಪಂಚಾಯ್ತಿ ಕಟ್ಟೆ ಸರಣಿಯ ಈ ವಾರದ ಕಾರ್ಯಕ್ರಮವನ್ನು ಯಶವಂತಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ರಾಮೋಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ನ.24 ಶನಿವಾರ ಬೆಳಗ್ಗೆ 10ಕ್ಕೆ ಆಯೋಜಿಸಲಾಗಿದ್ದು, ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳ ಜನರು ಪಾಲ್ಗೊಂಡು ಕಾರ್ಯಕ್ರಮದ ಸದುಪಯೋಗ ಮಾಡಿಕೊಳ್ಳಬೇಕೆಂಬುದು ಪತ್ರಿಕೆಯ ಆಶಯವಾಗಿದೆ.

ಬೇಗೂರು ವಾರ್ಡ್​ನಲ್ಲಿಂದು ಜನತಾದರ್ಶನ

ಛಲವಾದಿಪಾಳ್ಯ ವಾರ್ಡ್​ನಲ್ಲಿಂದು ಜನತಾದರ್ಶನ