ನ.22ರಿಂದ ಬೆಂಗಳೂರು ವಿವಿ ಅಂತರ ಕಾಲೇಜು ಅಥ್ಲೆಟಿಕ್ಸ್

0 Min Read
ನ.22ರಿಂದ ಬೆಂಗಳೂರು ವಿವಿ ಅಂತರ ಕಾಲೇಜು ಅಥ್ಲೆಟಿಕ್ಸ್

ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯವು 2023-24ನೇ ಸಾಲಿನ ಅಂತರ ಕಾಲೇಜು ಮಹಿಳಾ ಮತ್ತು ಪುರುಷರ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ ಅನ್ನು ನ.22ರಿಂದ 24ರ ವರೆಗೆ ನಡೆಸಲಿದೆ.
ಜ್ಞಾನಭಾರತಿ ಆವರಣದಲ್ಲಿ ಅಥ್ಲೆಟಿಕ್ಸ್ ನಡೆಯಲಿದೆ. ವಿವಿ ಮಾನ್ಯತೆ ಪಡೆದಿರುವ 294 ಕಾಲೇಜುಗಳ 2,500ಕ್ಕೂ ಹೆಚ್ಚಿನ ಅಥ್ಲೀಟ್‌ಗಳು ಭಾಗವಹಿಸಲಿದ್ದಾರೆ. ಎರಡೂ ವಿಭಾಗದಲ್ಲಿ ವಿವಿಧ 46 ಸ್ಪರ್ಧೆಗಳನ್ನು ನಡೆಸಲಾಗುತ್ತಿದೆ. ಇಲ್ಲಿ ಆಯ್ಕೆಯಾಗುವ ಅಥ್ಲೀಟ್‌ಗಳನ್ನು ದಕ್ಷಿಣ ಭಾರತದ ವಲಯ ಅಂತರ ವಿಶ್ವವಿದ್ಯಾಲಯ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ಗೆ ಆಯ್ಕೆ ಮಾಡಲಾಗುತ್ತಿದೆ ಎಂದು ಬೆಂಗಳೂರು ವಿವಿ ತಿಳಿಸಿದೆ.

See also  ವಿದ್ಯಾರ್ಥಿಗಳ ಬಹುಕಾಲದ ಬೇಡಿಕೆ ಈಡೇರಿಸಿದ ಬೆಂಗಳೂರು ವಿವಿ: ಗ್ರಂಥಾಲಯ ಸಮಯ ವಿಸ್ತರಣೆ, ಏನೆಲ್ಲಾ ಲಾಭ?
Share This Article