ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ವ್ಯವಸ್ಥೆ ಸದ್ಯಕ್ಕಿಲ್ಲ: ಸಾರಿಗೆ ಸಚಿವ

ಬೆಂಗಳೂರು: ರಾಜ್ಯದ ಎಲ್ಲ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ವ್ಯವಸ್ಥೆ ಸದ್ಯಕ್ಕೆ ಜಾರಿ ಇಲ್ಲ ಎಂದು ಸಾರಿಗೆ ಸಚಿವ ಡಿ.ಸಿ. ತಮ್ಮಣ್ಣ ತಿಳಿಸಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಬುಧವಾರ ಮಾತನಾಡಿದ ಅವರು ಉಚಿತ ಬಸ್​ ಪಾಸ್​ ನೀಡುವುದಾಗಿ ಈ ಹಿಂದೆ ಸಿದ್ದರಾಮಯ್ಯನವರು ಬಜೆಟ್​ನಲ್ಲಿ ಘೋಷಿಸಿದ್ದರು. ಆದರೆ, ಉಚಿತ ಬಸ್ ಪಾಸ್ ಜಾರಿಗೊಳಿಸಿದರೆ ನಿಗಮಗಳಿಗೆ 629 ಕೋಟಿ ರೂ. ಹೊರೆಯಾಗುತ್ತದೆ. ಹೀಗಾಗಿ ಉಚಿತ ಬಸ್ ಪಾಸ್ ವ್ಯವಸ್ಥೆ ಬಗ್ಗೆ ಮತ್ತೊಮ್ಮೆ ಚರ್ಚೆ ಮಾಡಿ ನಿರ್ಧರಿಸುತ್ತೇವೆ ಎಂದು ತಿಳಿಸಿದ್ದಾರೆ.

ಶಾಲಾ-ಕಾಲೇಜುಗಳಲ್ಲೇ ಪಾಸ್​ ವಿತರಣೆ
ವಿದ್ಯಾರ್ಥಿಗಳು ಈವರೆಗೆ ಬಿಎಂಟಿಸಿ ಕಚೇರಿಯ ಕೌಂಟರ್​ನಲ್ಲಿ ಪಾಸ್ ಪಡೆಯುತಿದ್ದರು. ಇದರಿಂದ ವಿದ್ಯಾರ್ಥಿಗಳಿಗೆ ತೊಂದರೆ ಆಗುತ್ತಿತ್ತು. ಅದನ್ನು ತಪ್ಪಿಸಲು ಈ ವರ್ಷದಿಂದ ಶಾಲಾ ಕಾಲೇಜುಗಳಲ್ಲೇ ಪಾಸ್ ವಿತರಿಸಲಿದ್ದೇವೆ. ಮೊಬೈಲ್ ಆ್ಯಪ್ ಮೂಲಕ ವಿದ್ಯಾರ್ಥಿಗಳು ಪಾಸ್​ಗೆ ಅರ್ಜಿ ಹಾಕಬಹುದು. ಅವರ ಶಾಲಾ-ಕಾಲೇಜು ಅಥವಾ ಮನೆಯ ವಿಳಾಸಕ್ಕೆ ಪಾಸ್ ವಿತರಣೆ ಆಗಲಿದೆ ಎಂದು ಸಾರಿಗೆ ಸಚಿವರು ಹೇಳಿದರು. (ದಿಗ್ವಿಜಯ ನ್ಯೂಸ್​)

Leave a Reply

Your email address will not be published. Required fields are marked *