ಬೆಂಗಳೂರಲ್ಲೇ ಇದ್ದಾರೆ ವಿಧ್ವಂಸಕಾರಿ ಭಯೋತ್ಪಾದಕರು?

ಬೆಂಗಳೂರು: ಬಂಧಿತ ಜೆಎಂಬಿ ಮುಖ್ಯಸ್ಥ ಕೌಸರ್ ವಿಚಾರಣೆ ವೇಳೆ​ ಅಧಿಕಾರಿಗಳ ಮುಂದೆ ಸ್ಫೋಟಕ ಮಾಹಿತಿಯನ್ನು ಬಿಚ್ಚಿಟ್ಟಿದ್ದಾನೆ.

ಆಗಸ್ಟ್​​ 7ರಂದು ರಾಮನಗರದಲ್ಲಿ ಜೆಎಂಬಿ(ಜಮಾತ್ ಉಲ್ ಮುಜಾಹಿದ್ ಬಾಂಗ್ಲಾದೇಶ) ಮುಖ್ಯಸ್ಥ ಕೌಸರ್​ ಬಂಧನವಾಗಿತ್ತು. ಈ ಸಂಬಂಧ ವಿಚಾರಣೆ ನಡೆಸಿದ ಅಧಿಕಾರಿಗಳ ಮುಂದೆ ಉಗ್ರ ಕೌಸರ್​ ಬೆಂಗಳೂರಿನಲ್ಲಿ 9 ಮಂದಿಗೆ ತರಬೇತಿ ನೀಡುತ್ತಿದ್ದರ ಬಗ್ಗೆ ಹೇಳಿಕೆ ನೀಡಿದ್ದಾನೆ ಎನ್ನಲಾಗಿದೆ.

ಮೊಹಮ್ಮದ್ ಜಹೀದುಲ್ ಆಲಿಯಾಸ್ ಕೌಸರ್ ಐಇಡಿ ಬಾಂಬ್ ತಯಾರಿಕೆ ಮಾಡುವ ಕುರಿತಾದ ತರಬೇತಿ ನೀಡುತ್ತಿದ್ದ ಎನ್ನಲಾಗಿದೆ. ತರಬೇತಿ ನೀಡಲೆಂದೇ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಬಾಡಿಗೆ ಮನೆಯನ್ನು ಪಡೆದಿದ್ದ ಎನ್ನಲಾಗಿದ್ದು, ತರಬೇತಿ ಪಡೆದ 9 ಜನರಲ್ಲಿ ನಾಲ್ವರನ್ನು ಈಗಾಗಲೇ ಬಂಧಿಸಲಾಗಿದೆ. ಇನ್ನುಳಿದ ಐವರಿಗಾಗಿ ಎನ್‌ಐಎ ಅಧಿಕಾರಿಗಳಿಂದ ಶೋಧ ನಡೆಯುತ್ತಿದೆ. (ದಿಗ್ವಿಯ ನ್ಯೂಸ್​)