ಬೆಂಗಳೂರಿನಲ್ಲಿ ಪ್ರಧಾನಿ ಮೋದಿ ಭಾಷಣಕ್ಕೆ 4 ಸಾವಿರ ಟೆಕ್ಕಿಗಳಿಗೆ ಆಮಂತ್ರಣ

<< ಮೂರು ಡ್ರೋನ್ ಕ್ಯಾಮರಾದಲ್ಲಿ ಸಮಾರಂಭ ಚಿತ್ರೀಕರಣ >>

ಬೆಂಗಳೂರು: ಫೆ.4ರಂದು ಬಿಜೆಪಿ ಪರಿವರ್ತನಾ ಯಾತ್ರೆ ಸಮಾರೋಪ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸುತ್ತಿರುವ ಹಿನ್ನೆಲೆ 4 ಸಾವಿರ ಟೆಕ್ಕಿಗಳಿಗೆ ವಿಶೇಷ ಆಮಂತ್ರಣ ನೀಡಲಾಗಿದೆ.

‘ಮೋದಿ ಭಾಷಣ ಬೆಂಗಳೂರಿನಲ್ಲಿ’ ಎಂಬ ಹೆಸರಿನಲ್ಲಿ ಆಮಂತ್ರಣ ಪತ್ರದ ಮೂಲಕ ಟೆಕ್ಕಿಗಳಿಗೆ ವಿಐಪಿ ಪಾಸ್‌ ನೀಡಲಾಗಿದೆ. ರಾಜಧಾನಿಯ ಪ್ರತಿಷ್ಠಿತ ಕಂಪನಿಗಳಲ್ಲಿರುವ ಟೆಕ್ಕಿಗಳಿಗೆ ಆಹ್ವಾನ ನೀಡಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಸಹಿ ಇರುವ ಪಾಸ್ ನೀಡಲಾಗಿದೆ.

ಮಧ್ಯಾಹ್ನ ಎರಡು ಗಂಟೆಗೆ ಕಾರ್ಯಕ್ರಮಕ್ಕೆ ಬರುವಂತೆ ಪಾಸ್‌ನಲ್ಲಿ ತಿಳಿಸಲಾಗಿದೆ. ಸಮಾವೇಶ ನಡೆಯುವ ಸ್ಥಳದಲ್ಲಿ ಟೆಕ್ಕಿಗಳಿಗೆ ಪ್ರತ್ಯೇಕ ಆಸನ ವ್ಯವಸ್ಥೆ ಮಾಡಿರುವುದು ವಿಶೇಷ.

ಸಮಾರಂಭವನ್ನು ಮೂರು ಡ್ರೋನ್ ಕ್ಯಾಮರಾ ಮೂಲಕ ಸಂಪೂರ್ಣ ದೃಶ್ಯಾವಳಿ ಚಿತ್ರೀಕರಣಕ್ಕೆ ವ್ಯವಸ್ಥೆ ಮಾಡಲಾಗಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಎನ್‌ಆರ್‌ಐಗಳಿಗೆ ಮೋದಿ ಭಾಷಣ ತಲುಪಿಸಲು ಸಿದ್ಧತೆ ಮಾಡಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಪ್ರಚಾರಕ್ಕೆ 200 ಕಾಯರ್ಕರ್ತರ ತಂಡ ಸನ್ನದ್ಧವಾಗಿದೆ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *