ಪೊಲೀಸರಿಗೆ ಕಗ್ಗಂಟಾದ ಬೆಂಗಳೂರಿನಲ್ಲಿ ಟೆಕ್ಕಿ ನಾಪತ್ತೆ ಪ್ರಕರಣ

ಬೆಂಗಳೂರು: ಬೆಂಗಳೂರಿನಲ್ಲಿ ಟೆಕ್ಕಿ ಅಜಿತಾಬ್ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣವನ್ನು ಭೇದಿಸಲು ಪೊಲೀಸರು ಹರಸಾಹಸ ಪಡುವಂತಾಗಿದೆ.

ಡಿಸೆಂಬರ್ 18ರಂದು ಸಂಜೆ ಕಿಡ್ನಾಪ್ ಆಗಿದ್ದ ಅಜಿತಾಬ್ ಪ್ರಕರಣವನ್ನು ತನಿಖೆ ನಡೆಸುತ್ತಿರುವ ಪೊಲೀಸರಿಗೆ ತಾಂತ್ರಿಕ ತನಿಖೆಯಲ್ಲೂ ಯಾವುದೇ ಮಾಹಿತಿ ಸಿಕ್ಕಿಲ್ಲ. ನಾಳೆ ಹೈಕೋರ್ಟ್‌ನಲ್ಲಿ ಪ್ರಕರಣದ ವಿಚಾರಣೆ ನಡೆಯಲಿದ್ದು, ಬಹುತೇಕ ಪ್ರಕರಣವನ್ನು ಸಿಬಿಐ ತನಿಖೆಗೆ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ.

ಆರೋಪಿ ರೂಪಿಸಿದ್ದ ಪ್ಲ್ಯಾನ್‌ ಏನು..?

ಕಿಡ್ನಾಪ್‌ಗೂ ಮೊದಲು ಪೊಲೀಸರಿಗೆ ಸಣ್ಣ ಸುಳಿವು ಸಿಗದ ರೀತಿಯಲ್ಲಿ ಆರೋಪಿ ಪ್ಲ್ಯಾನ್‌ ರೂಪಿಸಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಕೋರಮಂಗಲದಲ್ಲಿ ನವೆಂಬರ್ ಮೊದಲ ವಾರದಲ್ಲಿ ಎಂಐ ಮೊಬೈಲ್ ಖರೀದಿ ಮಾಡಿದ್ದ ಆರೋಪಿ, ಖರೀದಿ ವೇಳೆ ಅಂಗಡಿ ಸಿಸಿಟಿವಿ ಗಮನಿಸಿ ಸಿಸಿಟಿವಿ ಡಾಟಾ ಬ್ಯಾಕ್‌ಅಪ್ ಬಗ್ಗೆ ವಿಚಾರಿಸಿದ್ದಾನೆ. 1 ತಿಂಗಳ ಬ್ಯಾಕ್‌ಅಪ್ ಇರುತ್ತೆ ಎಂದು ತಿಳಿದ ನಂತರ ಮೊಬೈಲ್‌ ಖರೀದಿಗೆ ನಕಲಿ ವಿಳಾಸ ನೀಡಿದ್ದಾನೆ.

OLXನಲ್ಲಿ ಕಾರು ಮಾರಲು ಹೋದ ಟೆಕ್ಕಿ ತಾನೇ ಕಣ್ಮರೆಯಾದ!

ಖರೀದಿ ಬಳಿಕ 1 ತಿಂಗಳು 10 ದಿನದ ನಂತರ ಮೊಬೈಲ್‌ಗೆ ಸಿಮ್ ಹಾಕಿ ಅದೇ ಮೊಬೈಲ್‌ನಿಂದ ಅಜಿತಾಬ್‌ನನ್ನು ಸಂಪರ್ಕಿಸಿದ್ದಾನೆ. ಡಿಸೆಂಬರ್‌ 18 ರಂದು ಸಂಜೆ ಅಜಿತಾಬ್‌ ನಂಬರ್‌ಗೆ ಕೊನೆ ಕರೆ ಮಾಡಿರುವ ಆರೋಪಿ ಗುಂಜೂರು ಬಳಿ ಸ್ವಿಚ್ ಆಫ್ ಮಾಡಿದ್ದಾನೆ.

ವಾರದ ಬಳಿಕ ಲಾರಿ ಚಾಲಕನ ಬಳಿಯಿದ್ದ ಇದೇ ಮೊಬೈಲ್‌ನ್ನು ಪೊಲೀಸರು ಜಪ್ತಿ ಮಾಡಿದ್ದರು. ನಂತರ ತನಿಖೆ ಮುಂದುವರಿಸಿದ ಪೊಲೀಸರಿಗೆ ಮೊಬೈಲ್ ಖರೀದಿ ಮಾಡಿದ್ದ ಕುರಿತು ಮಾಹಿತಿ ದೊರಕಿದೆ. ಶಾಪ್‌ಗೆ ಹೋಗಿ ವಿಚಾರಿಸಿದಾಗ ಆರೋಪಿ ಕುರಿತು ಮಾಹಿತಿ ಬಹಿರಂಗವಾಗಿದ್ದು, ಸಿಸಿಟಿವಿ ದೃಶ್ಯ ಸಿಗದ ಹಿನ್ನೆಲೆಯಲ್ಲಿ ತನಿಖೆಗೆ ಮತ್ತೆ ಸಂಪೂರ್ಣ ಹಿನ್ನಡೆಯಾಗಿದೆ. (ದಿಗ್ವಿಜಯ ನ್ಯೂಸ್)

Leave a Reply

Your email address will not be published. Required fields are marked *