Friday, 16th November 2018  

Vijayavani

Breaking News

ಸಮುದಾಯ ನಾಯಕತ್ವ ವಹಿಸುವಷ್ಟು ಜಮೀರ್, ಖಾದರ್ ಅರ್ಹರಲ್ಲ: ತನ್ವೀರ್​ ಸೇಠ್​

Thursday, 14.06.2018, 10:54 AM       No Comments

ಬೆಂಗಳೂರು: ರಾಜ್ಯದಲ್ಲಿ ಮುಸ್ಲಿಂ ಸಮುದಾಯ ನಾಯಕತ್ವ ಮುಗಿಸುವ ಕೆಲಸ ನಡೆಯುತ್ತಿದ್ದು, ನಮ್ಮ‌ ಸಮುದಾಯದ ಅರ್ಹರಲ್ಲದ ಶಾಸಕರಿಗೆ ಸಚಿವ ಸ್ಥಾನ ನೀಡಿದ್ದಾರೆ ಎಂದು ಮಾಜಿ ಸಚಿವ ತನ್ವೀರ್​ ಸೇಠ್​ ಪಕ್ಷದ ವಿರುದ್ಧ ಕಿಡಿಕಾರಿದರು.

ವೇಣುಗೋಪಾಲ್ ಭೇಟಿ ಬಳಿಕ ಮಾತನಾಡಿದ ಅವರು ಯು.ಟಿ. ಖಾದರ್ ಮತ್ತು ಜಮೀರ್​ ಅಹಮದ್​ಗೆ ನಮ್ಮ‌ಸಮುದಾಯ ಪ್ರತಿನಿಧಿಸುವ ನಾಯಕತ್ವ ಗುಣ ಇಲ್ಲ. ಜಮೀರ್ ನನ್ನ ಸೋಲಿಗೆ ಪ್ರಯತ್ನ ಮಾಡಿದವರು. ಬೇರೆ ಕಡೆಯಿಂದ ಬಂದ ಅವರಿಗೆ ಮಣೆ ಹಾಕಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಇದರ ಬಗ್ಗೆ ವೇಣುಗೋಪಾಲ್ ಹಾಗೂ ವರಿಷ್ಠರ ಗಮನಕ್ಕೂ ತಂದಿದ್ದೇನೆ. ನನ್ನ ವಿರುದ್ಧ ಕೆಲಸ ಮಾಡಿದ್ದ ಬಗ್ಗೆ ದೂರು ಹೇಳಿದ್ದೇನೆ. ಸಮುದಾಯ ನಾಯಕತ್ವ ವಹಿಸುವಷ್ಟು ಜಮೀರ್ ಮತ್ತು ಖಾದರ್ ಅರ್ಹರಲ್ಲ ಎಂದು ತಿಳಿಸಿದ್ದಾರೆ. (ದಿಗ್ವಿಜಯ ನ್ಯೂಸ್​)

Leave a Reply

Your email address will not be published. Required fields are marked *

Back To Top