ಬೆಂಗಳೂರು ದಕ್ಷಿಣದಲ್ಲಿ ಮಧ್ಯರಾತ್ರಿ ಉದಯಿಸಿದ ತೇಜಸ್ವಿ ಸೂರ್ಯ: ತೇಜಸ್ವಿನಿ ಅನಂತಕುಮಾರ್​ ಬೆಂಬಲಿಗರ ಆಕ್ರೋಶ

ಬೆಂಗಳೂರು: ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಆಕಾಂಕ್ಷಿಯಾಗಿದ್ದ ತೇಜಸ್ವಿನಿ ಅನಂತಕುಮಾರ್​ಗೆ ಕೊನೆಗೂ ಟಿಕೆಟ್ ಕೈತಪ್ಪಿದ್ದು, ಕೊನೆ ಗಳಿಗೆಯಲ್ಲಿ ಬಿಜೆಪಿ ಹೈಕಮಾಂಡ್ ತೇಜಸ್ವಿ ಸೂರ್ಯ ಅವರ ಹೆಸರನ್ನು ಅಂತಿಮಗೊಳಿಸಿದೆ.

ತೇಜಸ್ವಿನಿ ಅನಂತ್​ಕುಮಾರ್​ಗೆ ಟಿಕೆಟ್​​ ಕೈತಪ್ಪಿದ್ದಕ್ಕೆ ಅವರ ಅಭಿಮಾನಿಗಳು, ಬೆಂಬಲಿಗರು, ರಾತ್ರಿ ತೇಜಸ್ವಿನಿ ಅನಂತಕುಮಾರ್‌ ಮನೆ ಮುಂದೆ ಜಮಾಯಿಸಿ ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ರವಿಸುಬ್ರಹ್ಮಣ್ಯ ಬೆಂಗಳೂರು ದಕ್ಷಿಣದಿಂದ ಸ್ಪರ್ಧಿಸಲಿದ್ದಾರೆ ಎಂಬ ವದಂತಿಗಳು ಹರಿದಾಡಿದ್ದರಿಂದ ಬಸವನಗುಡಿ ಶಾಸಕನ ವಿರುದ್ಧವೂ ಘೋಷಣೆ ಕೂಗಲಾಯಿತು. ಈ ಮಧ್ಯೆ ಬಿಜೆಪಿ ಹೈಕಮಾಂಡ್‌, ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರಕ್ಕೆ ತೇಜಸ್ವಿ ಸೂರ್ಯ ಅವರ ಹೆಸರಿಗೆ ಅಂತಿಮ ಮುದ್ರೆ ಒತ್ತಿದೆ. ಇನ್ನು ಬೆಂಗಳೂರು ಗ್ರಾಮಾಂತರದಿಂದ ಅಶ್ವಥ್​ನಾರಾಯಣ್​ ಅವರು ಕಣಕ್ಕಿಳಿಯಲಿದ್ದಾರೆ. (ದಿಗ್ವಿಜಯ ನ್ಯೂಸ್​​)