ಸ್ಟಾರ್ ವಾರ್​ಗೆ ಬ್ರೆಕ್ ಹಾಕಲು ಮುಂದಾದ್ರು ಡಿ ಬಾಸ್!

ಬೆಂಗಳೂರು: ದಿನೇ ದಿನೇ ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿರುವ ಸ್ಟಾರ್ ವಾರ್​ಗೆ ಕಡಿವಾಣ ಹಾಕಲು ಚಾಲೆಂಜಿಂಗ್​ ಸ್ಟಾರ್​ ದರ್ಶನ್​ ತೂಗುದೀಪ್​ ಮುಂದಾಗಿದ್ದಾರೆ.

ಇತ್ತೀಚೆಗೆ ಹಲವು ಜಿಲ್ಲೆಗಳಿಂದ ಅಭಿಮಾನಿಗಳ ಸಂಘದ ಅಧ್ಯಕ್ಷರನ್ನು ಕರೆಸಿ ಮಾತನಾಡಿರುವ ದರ್ಶನ್​, ಇನ್ನು ಮುಂದೆ ಸ್ಟಾರ್​ವಾರ್​ ಕುರಿತಾದ ಯಾವುದೇ ಟ್ರೋಲ್​ಗಳಲ್ಲಿ ಭಾಗಿಯಾಗದಿರಲು ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ. ದರ್ಶನ ಸಮ್ಮಖದಲ್ಲೇ ನಡೆದ ಅಧಿಕೃತ ಫೇಸ್​ಬುಕ್​ ಪೇಜ್​ ಅಡ್ಮಿನ್​ಗಳ ಸಭೆಯಲ್ಲಿ 29 ಜನ ಭಾಗಿಯಾಗಿದ್ದರು.

ದರ್ಶನ್​ ಫ್ಯಾನ್ಸ್​ ಮನವಿ
ಇತರ ನಟರ ಅಭಿಮಾನಿಗಳಗೂ ಮನವಿ ಮಾಡಿಕೊಂಡಿರುವ ದರ್ಶನ್ ಫ್ಯಾನ್ಸ್, ನಮ್ಮ ನಟನ ಬಗ್ಗೆ ನೀವೂ ಕೆಟ್ಟದಾಗಿ ಮಾತನಾಡ ಬೇಡಿ ಎಂದು ತಿಳಿಸಿದ್ದಾರೆ. ಬೇರೆ ನಟರ ಬಗ್ಗೆ ಕಮೆಂಟ್​ ಮಾಡಿದರೆ ಕಠಿಣ ಕ್ರಮವನ್ನು ಎದುರಿಸಬೇಕಾಗುತ್ತದೆ ಎಂದು ದರ್ಶನ್​ ಅಭಿಮಾನಿಗಳಿಗೆ ಸಂಘದ ಅಧ್ಯಕ್ಷರು ಎಚ್ಚರಿಕೆ ನೀಡಿದ್ದಾರೆ.

ಇತ್ತೀಚೆಗಷ್ಟೆ ಸ್ಯಾಂಡಲ್​ವುಡ್​ನ ಬಾಸ್​ ಯಾರು ಎಂಬುದಕ್ಕೆ ಫೇಸ್​ಬುಕ್​ನಲ್ಲಿ ನಟರ ಅಭಿಮಾನಿಗಳು ಹಗ್ಗ ಜಗ್ಗಾಟ ನಡೆಸಿದ್ದರು. ತಮ್ಮ ನೆಚ್ಚಿನ ನಟರನ್ನು ಮೆಚ್ಚಿಸುವ ಭರದಲ್ಲಿ ಇತರೆ ನಟರ ಬಗ್ಗೆ ಕೆಟ್ಟದಾಗಿ ಕಾಮೆಂಟ್​ಗಳನ್ನು ಮಾಡುತ್ತಿದ್ದರು. ಈ ಎಲ್ಲಾ ಬೆಳವಣಿಗೆಗಳಿಂದ ಎಚ್ಚೆತ್ತಿರುವ ದರ್ಶನ್​ ಫ್ಯಾನ್ಸ್​ ಈ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಆದರೆ, ಯಾವ ಮಟ್ಟಿಗೆ ಸ್ಪಂದನೆ ವ್ಯಕ್ತವಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ. (ದಿಗ್ವಿಜಯ ನ್ಯೂಸ್​)