ಅಮ್ಮನ ನಗುಮುಖ ನೋಡಲು ಅಪ್ಪನೊಂದಿಗಿನ ಘಟನೆ ಸ್ಮರಿಸಿದ ಪುತ್ರ ಅಭಿಷೇಕ್​

ಬೆಂಗಳೂರು: ಒಮ್ಮೆ ನನ್ನ ಅಪ್ಪನಿಗೆ ನಾನು ಕಾಟ ಕೊಟ್ಟಿದ್ದೆ. ಆದರೆ, ಅಪ್ಪ ನನ್ನ ಮೇಲೆ ರೇಗದೆ ಎಲ್ಲ ಕೆಲಸವನ್ನು ಮಾಡಿ ಮುಗಿಸಿದ್ದರು ಎಂದು ನಟ ಅಂಬರೀಷ್​ ಪುತ್ರ ಅಭಿಷೇಕ್​​ ತಂದೆಯನ್ನು ಸ್ಮರಿಸಿದರು.

ಕನ್ನಡ ಚಿತ್ರರಂಗ ವತಿಯಿಂದ ಶುಕ್ರವಾರ ವಸಂತನಗರದ ಅಂಬೇಡ್ಕರ್ ಭವನದಲ್ಲಿ ನಡೆದ ಅಂಬಿ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಒಮ್ಮೆ ಅಮ್ಮ ನನ್ನನ್ನು ಅಪ್ಪನ ಜತೆ ಬಿಟ್ಟು ಶಾಪಿಂಗ್ ಹೊರಟುಬಿಟ್ಟಿದ್ದರು. ನಾನು ಎದ್ದು ಅಮ್ಮನಿಗಾಗಿ ಹುಡುಕಾಡಿದೆ. ಆಗ ಅಮ್ಮ ಇರಲಿಲ್ಲ. ಆಮೇಲೆ ನಾನು ಅಪ್ಪನಿಗೆ‌ ಕಾಟ ಕೊಟ್ಟಿದ್ದೆ. ಆಗ ನನ್ನ‌ ಎಲ್ಲ ಕೆಲಸವನ್ನು ಅಪ್ಪನೇ ಮಾಡಿ ಮುಗಿಸಿದ್ದರು. ಅದೊಂದು‌‌ ಫನ್ನಿ‌ ಇನ್ಸಿಡೆಂಟ್ ಎಂದರು.

ಅಮ್ಮ‌ ಅವಾಗಿನಿಂದ ಅಳುತ್ತಿದ್ದಾರೆ. ಅವರ ಮುಖದಲ್ಲಿ‌ ನಗು ಬರಲಿ ಎಂದು ಇದನ್ನು ಹೇಳಿದೆ ಎಂದು ಪುತ್ರ ಅಭಿಷೇಕ್ ಘಟನೆಯೊಂದನ್ನು ಸ್ಮರಿಸಿದರು.

ಧನ್ಯವಾದ ಅರ್ಪಣೆ
ಅಭಿಷೇಕ್​ ಕೊನೆಯಲ್ಲಿ ಅಪ್ಪನ ಅಂತ್ಯಕ್ರಿಯೆಗೆ ಸಹಕಾರ ನೀಡಿದ ಸಿಎಂ ಕುಮಾರಸ್ವಾಮಿ, ಪೋಲೀಸ್ ಇಲಾಖೆ, ನಾಡಿನ ಜನತೆ, ಕಲಾವಿದರ ಕುಟುಂಬ, ಅಭಿಮಾನಿಗಳು ಹಾಗೂ ಮಂಡ್ಯ ಜನತೆಗೆ ಧನ್ಯವಾದ ಅರ್ಪಿಸಿದರು. ಅದರಲ್ಲೂ ವಿಶೇಷವಾಗಿ ಅಪ್ಪ ವಿಧಿವಶವಾದ ದಿನದಿಂದ ತಮ್ಮ ಜತೆಯಲ್ಲೇ ನಿಂತು ಎಲ್ಲ ಕಾರ್ಯವನ್ನು ನೋಡಿಕೊಂಡ ನಿರ್ಮಾಪಕ ರಾಕ್​ಲೈನ್​ ವೆಂಕಟೇಶ್​ ಅವರಿಗೆ ಕೃತಜ್ಞತೆ ಸಲ್ಲಿಸಿದರು. (ದಿಗ್ವಿಜಯ ನ್ಯೂಸ್​)