ನಾನೇನು ದೊಡ್ಡ ಮನುಷ್ಯನಲ್ಲ ಸಾಮಾನ್ಯ ಕಾರ್ಯಕರ್ತನಾಗಿ ಪಕ್ಷ ಹೇಳಿದ ಹಾಗೆ ಕೇಳುತ್ತೇನೆಂದ ಸಿ.ಪಿ.ಯೋಗೇಶ್ವರ್​

ರಾಮನಗರ: ಬೆಂಗಳೂರು ಗ್ರಾಮಾಂತರದ ಲೋಕಸಭಾ ಕ್ಷೇತ್ರದ ಬಿಜೆಪಿಯ ಸಂಭಾವ್ಯ ಅಭ್ಯರ್ಥಿಯಾಗಿ ಸಿ.ಪಿ. ಯೋಗೇಶ್ವರ್​ ಅವರ ಹೆಸರು ಕೇಳಿಬರುತ್ತಿದ್ದು, ಈ ಬಗ್ಗೆ ಯೋಗೇಶ್ವರ್ ದಿಗ್ವಿಜಯ ನ್ಯೂಸ್​ಗೆ ಸ್ಪಷ್ಟನೆ ನೀಡಿದ್ದಾರೆ.

ಶುಕ್ರವಾರ ದೂರವಾಣಿ ಕರೆ ಮೂಲಕ ದಿಗ್ವಿಜಯ ನ್ಯೂಸ್​ನೊಂದಿಗೆ ಮಾತನಾಡಿದ ಅವರು ನಾನೇನು ಚುನಾವಣೆಗೆ ತಯರಾಗಿಲ್ಲ. ಲೋಕಸಭೆ ಚುನಾವಣೆಗೂ ಯಾವುದೇ ಸಿದ್ಧತೆ ಮಾಡಿಕೊಂಡಿಲ್ಲ. ವಿಧಾನಸಭೆ‌ ಚುನಾವಣೆ ಸೋತಾಗಿನಿಂದ ಮುಂಬರುವ ಎಂಎಲ್ಎ ಚುನಾವಣೆವರೆಗೂ ಕಾಯುತ್ತಿದ್ದೆ. ಆದರೆ, ಈ ಬಾರಿ ಲೋಕಸಭಾ ಚುನಾವಣೆಗೆ ಆಕಸ್ಮಿಕವಾಗಿ ನನ್ನ ಹೆಸರು‌ ಕೇಳಿಬಂದಿದೆ ಎಂದು ತಿಳಿಸಿದರು.

ಬರುವ ಎಲ್ಲಾ ಚುನಾವಣೆಯಲ್ಲೂ ನಾನು ಸ್ಪರ್ಧೆ ಮಾಡಬೇಕು ಎಂದುಕೊಂಡಿಲ್ಲ. ಚನ್ನಪಟ್ಟಣ ಜನ‌ ಈ ಬಾರಿ ನನ್ನನ್ನು ಸೋಲಿಸಿದ್ದಾರೆ. ಹೀಗಾಗಿ ಮುಂದೆ ಅವಕಾಶ ಬರುವವರೆಗೂ ನಾನು‌ ಕಾಯುತ್ತೇನೆ. ನಾನು ಯಾವುದೇ ದೊಡ್ಡ ಮನುಷ್ಯ ಅಲ್ಲ. ಅಧಿಕೃತವಾಗಿ ಘೋಷಣೆಯಾದರೆ ನಾನೊಬ್ಬ ಸಾಮಾನ್ಯ ಕಾರ್ಯಕರ್ತನಾಗಿ ಪಕ್ಷ ಹೇಳಿದ ಹಾಗೆ ಕೇಳುತ್ತೇನೆ. ಪಕ್ಷದ ತೀರ್ಮಾನಕ್ಕೆ ತಲೆಬಾಗಿ ನಾನು ಚುನಾವಣೆ ಸ್ಪರ್ಧೆಗೆ ಇಳಿಯುತ್ತೇನೆ ಎಂದು ಹೇಳಿದ್ದಾರೆ. (ದಿಗ್ವಿಜಯ ನ್ಯೂಸ್​)