ವೃದ್ಧೆಯನ್ನು ಹತ್ಯೆ ಮಾಡಿ ಶೆಡ್‌ನಲ್ಲಿಟ್ಟು ಬೀಗ ಹಾಕಿದ ದುಷ್ಕರ್ಮಿಗಳು!

ಬೆಂಗಳೂರು: ವೃದ್ಧೆಯ ಕತ್ತು ಸೀಳಿ ಕೊಲೆ ಮಾಡಿ, ಹತ್ಯೆ ಬಳಿಕ ಮೃತದೇಹವನ್ನು ಶೆಡ್‌ನಲ್ಲಿ ಇಟ್ಟು ಬೀಗ ಹಾಕಿ ಹೋಗಿದ್ದ ಘಟನೆ ಬೆಳಕಿಗೆ ಬಂದಿದೆ.

ನಗರದ ‌ಕೆಂಗೇರಿ‌ ರಾಜಕಾಲುವೆ ಬಳಿಕ ತೆಂಗಿನ ತೋಟವೊಂದರಲ್ಲಿ ಗೌರಮ್ಮ(65) ಎಂಬಾಕೆಯನ್ನು ಕೊಲೆ ಮಾಡಲಾಗಿದೆ.

ನಿನ್ನೆ ‌ತಡ ರಾತ್ರಿ ಮಾರಕಾಸ್ತ್ರಗಳಿಂದ ಕೊಚ್ಚಿ‌ ಕೊಲೆಗೈದಿರುವ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.

16 ವರ್ಷಗಳ ಹಿಂದೆ ಗೌರಮ್ಮಳ ಪತಿ‌ ತೀರಿಹೋಗಿದ್ದರು. ಮಕ್ಕಳಿಲ್ಲದ ಗೌರಮ್ಮ ವ್ಯಕ್ತಿಯೊಬ್ಬರ ತೆಂಗಿನ ತೋಟದಲ್ಲಿ‌ ಶೆಡ್‌ನಲ್ಲಿ‌ ವಾಸವಿದ್ದಳು. ಹತ್ಯೆಗೆ ಕಾರಣ ತಿಳಿದುಬಂದಿಲ್ಲ.

ಸ್ಥಳಕ್ಕೆ ಕೆಂಗೇರಿ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. (ದಿಗ್ವಿಜಯ ನ್ಯೂಸ್)

Leave a Reply

Your email address will not be published. Required fields are marked *