ಸಚಿವ ದೇಶಪಾಂಡೆ ಪುತ್ರನ ಮನೆಯಲ್ಲಿ ಕಳ್ಳರ ಕೈಚಳಕ

ಬೆಂಗಳೂರು: ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಪುತ್ರನ ಮನೆಯಲ್ಲಿ ಕಳ್ಳತನ ನಡೆದಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ಪ್ರಶಾಂತ್ ಆರ್.ದೇಶಪಾಂಡೆ ವಾಸವಿರುವ ಸದಾಶಿವನಗರದ 10ನೇ ಮುಖ್ಯರಸ್ತೆಯ ಬಾಡಿಗೆ ಮನೆಯಲ್ಲಿ ಕಳ್ಳರು ಕೈಚಳಕ ತೋರಿಸಿದ್ದಾರೆ. 1 ಲ್ಯಾಪ್​ಟಾಪ್, 500 ಗ್ರಾಂ ಬೆಳ್ಳಿ ವಿಗ್ರಹ ಹಾಗೂ 2 ಮೊಬೈಲ್ ಫೋನ್ ಕಳುವು ಮಾಡಲಾಗಿದೆ. ಕಳೆದ ಶುಕ್ರವಾರ ಕಳ್ಳತನ ನಡೆದಿತ್ತು.

ಮನೆಯ ಹಿಂಬಾಗಿಲಿನಿಂದ ಪ್ರವೇಶಿಸಿ ಕಳ್ಳತನ ಮಾಡಿ ಕಳ್ಳರು ಪರಾರಿಯಾಗಿದ್ದಾರೆ. ಈ ಸಂಬಂಧ ಸದಾಶಿವನಗರ ಠಾಣೆಯಲ್ಲಿ ಕೇಸ್ ದಾಖಲಾಗಿದ್ದು, ಪ್ರಶಾಂತ ದೇಶಪಾಂಡೆ ಮನೆಯ ಅಕ್ಕಪಕ್ಕದ ರಸ್ತೆಗಳ ಸಿಸಿಟಿವಿ ಪರಿಶೀಲಿಸುತ್ತಿರುವ ಪೊಲೀಸರು, ಆರೋಪಿಗಳ ಪತ್ತೆಗೆ ಬಲೆಬೀಸಿದ್ದಾರೆ. (ದಿಗ್ವಿಜಯ ನ್ಯೂಸ್​)