ಎರಡನೇ ಸಲ ಚಿತ್ರದ ನಟಿ ಸಂಗೀತಾ ಭಟ್ ಚಿತ್ರರಂಗ ಬಿಡೋ ನಿರ್ಧಾರ ಮಾಡಿದ್ದೇಕೆ?

ಬೆಂಗಳೂರು: ದೇಶದ ಎಲ್ಲಾ ಕ್ಷೇತ್ರಗಳಲ್ಲು ಮೀ ಟೂ ಅಭಿಯಾನ ಜೋರಾಗುತ್ತಿದ್ದು, ಇದರಲ್ಲಿ ಸ್ಯಾಂಡಲ್​ವುಡ್​ ಕೂಡ ಹೊರತಾಗಿಲ್ಲ. ಇತ್ತೀಚೆಗೆ ಗಾಯಕ ರಘು ದೀಕ್ಷಿತ್ ವಿರುದ್ಧ ಆರೋಪ ಕೇಳಿ ಬಂದಿತ್ತು. ಇದೀಗ ನಟಿ ಸಂಗೀತಾ ಭಟ್ ಕೂಡ ಧ್ವನಿ ಎತ್ತಿದ್ದು, ಲೈಂಗಿಕ ಕಿರುಕುಳಕ್ಕೆ ಬೇಸತ್ತು ಚಿತ್ರರಂಗಕ್ಕೆ ಗುಡ್ ಬೈ ಹೇಳಿದ್ದಾರೆ.

ಈ ಕುರಿತಂತೆ ತಮ್ಮ ಫೇಸ್​ಬುಕ್ ಪೇಜ್​ನಲ್ಲಿ ಸಂಗೀತಾ ನೋವು ತೋಡಿಕೊಂಡಿದ್ದಾರೆ. ನಿರ್ದೇಶಕರು, ನಟರು ಸೇರಿ ಹಲವರಿಂದ ನಾನು ಲೈಂಗಿಕ ಕಿರುಕುಳ ಅನುಭವಿಸಿದ್ದೆ. ಅವಕಾಶಗಳು ಸಿಗುವುದಿಲ್ಲ ಎಂಬ ಕಾರಣಕ್ಕೆ ಮದುವೆಯಾದ ವಿಷಯ ಕೂಡ ಮುಚ್ಚಿಟ್ಟಿದ್ದೆ ಎಂಬ ಸತ್ಯವನ್ನು ಮೂರು ಪುಟದ ಪತ್ರದಲ್ಲಿ ಸಮಗ್ರವಾಗಿ ಉಲ್ಲೇಖಿಸಿದ್ದಾರೆ. ಆದರೆ, ಕಿರುಕುಳ ಕೊಟ್ಟವರ ಹೆಸರು ಪ್ರಸ್ತಾಪಿಸದೆ, ನೊಂದು ಚಿತ್ರರಂಗಕ್ಕೆ ಗುಡ್​ಬೈ ಹೇಳುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ.

ಹತ್ತನೇ ತರಗತಿ ಓದುತ್ತಿದ್ದಾಗಲೇ ತಂದೆ ಕಳೆದುಕೊಂಡ ಸಂಗೀತಾ, ಹೊಟ್ಟೆಪಾಡಿಗಾಗಿ ಚಿತ್ರರಂಗಕ್ಕೆ ಬಂದರು. ಹತ್ತು ವರ್ಷಗಳಲ್ಲಿ ಹಲವು ಚಿತ್ರಗಳಲ್ಲಿ ನಟಿಸಿದರೂ ಹೇಳಿಕೊಳ್ಳುವಂತಹ ಯಶಸ್ಸು ಸಿಗಲಿಲ್ಲ. ಆದರೆ, ಆಮಿಷಗಳಿಗೆ ಬಲಿಯಾಗದೆ ಪ್ರತಿಭೆಯನ್ನೇ ನಂಬಿ ಕೂತಿದ್ದ ಅವರಿಗೆ ಹೇಳಿಕೊಳ್ಳುವಷ್ಟು ಅವಕಾಶಗಳು ಸಿಗಲಿಲ್ಲ. ಇದೀಗ ಮೀ ಟೂ ಅಭಿಯಾನದಲ್ಲಿ ತಮ್ಮ ನೋವನ್ನು ತೋಡಿಕೊಂಡಿರುವ ಅವರು ಬಣ್ಣದ ಜಗತ್ತಿನ ಭಯಾನಕ ಸತ್ಯ ಹೊರಗೆಳೆದು ಚಿತ್ರರಂಗಕ್ಕೆ ಗುಡ್ ಬೈ ಹೇಳಿದ್ದಾರೆ. (ದಿಗ್ವಿಜಯ ನ್ಯೂಸ್​)

Sangeetha Bhat ಅವರಿಂದ ಈ ದಿನದಂದು ಪೋಸ್ಟ್ ಮಾಡಲಾಗಿದೆ ಭಾನುವಾರ, ಅಕ್ಟೋಬರ್ 14, 2018

Sangeetha Bhat ಅವರಿಂದ ಈ ದಿನದಂದು ಪೋಸ್ಟ್ ಮಾಡಲಾಗಿದೆ ಭಾನುವಾರ, ಅಕ್ಟೋಬರ್ 14, 2018

Sangeetha Bhat ಅವರಿಂದ ಈ ದಿನದಂದು ಪೋಸ್ಟ್ ಮಾಡಲಾಗಿದೆ ಭಾನುವಾರ, ಅಕ್ಟೋಬರ್ 14, 2018