14.5 ಕಿಮೀ ದೂರ ಆಟೋದಲ್ಲಿ ಹೋದ ಟೆಕ್ಕಿ; ಇಳಿಯುವ ಸ್ಥಳಕ್ಕೆ ಹೋಗುತ್ತಿದ್ದಂತೆ ಫುಲ್​ ಶಾಕ್​, ಆಟೋ ಚಾಲಕ ಬೀಸಿದ ಚಾಟಿ ಏನು?

ಪುಣೆ: ನಮ್ಮ ರಾಜ್ಯದಲ್ಲಿ ಆಟೋ ಚಾರ್ಜ್​ 10 ರೂಪಾಯಿ ಹೆಚ್ಚಿಗೆ ಕೊಡಿ ಎಂದು ಹೇಳಿದರೆ ಚಾಲಕನಿಗೆ ಕ್ಲಾಸ್​ ತಗೋತಿವಿ. ಅದ್ರಲ್ಲೂ ಮೀಟರ್​ ಸಿಕ್ಕಾಪಟ್ಟೆ ಚಾರ್ಜ್​ ತೋರಿಸುತ್ತಿದ್ದರಂತೂ ನಾವು ಹೋಗೋ ಜಾಗ ತಲುಪುವವರೆಗೂ ಆಟೋ ಚಾಲಕನ ಜತೆ ಜಗಳವೋ ಜಗಳ.

ಆದರೆ,ಇಲ್ಲೋರ್ವ ಬೆಂಗಳೂರು ಮೂಲದ ಟೆಕಿ ಪುಣೆಯಲ್ಲಿ 14.5 ಕಿ.ಮೀ. ದೂರ ಆಟೋದಲ್ಲಿ ಕ್ರಮಿಸಿದ್ದಕ್ಕೆ ಕೊಟ್ಟ ಹಣದ ಮೊತ್ತ ಕೇಳಿದರೆ ಒಂದ್ಸಲ ಹುಬ್ಬುಗಂಟಿಕ್ಕುವುದು ಗ್ಯಾರಂಟಿ.

ಈ ಇಂಜಿನಿಯರ್​ ಮೂಲತಃ ಬೆಂಗಳೂರಿನವರು. ಕಚೇರಿ ಕೆಲಸದ ನಿಮಿತ್ತ ಪುಣೆಗೆ ಬಸ್​ನಲ್ಲಿ ತೆರಳಿದ್ದಾರೆ. ಮುಂಜಾನೆ 5 ಗಂಟೆಯಷ್ಟೊತ್ತಿಗೆ ಕಟ್ರಾಜ್​ನಲ್ಲಿ ಬಸ್​ ಇಳಿದ ಅವರು ಯೆರಾವಾಡಕ್ಕೆ ಹೋಗಬೇಕಿತ್ತು. ಈ ಎರಡು ಏರಿಯಾಗಳ ನಡುವಿನ ದೂರ 14.5 ಕಿ.ಮೀ. ಮೊದಲು ಟೆಕಿ ಕ್ಯಾಬ್​ ಬುಕ್​ ಮಾಡಲು ಯತ್ನಿಸಿದರು. ಆದರೆ, ಯಾವುದೇ ಟ್ಯಾಕ್ಸಿ ಸಿಗದ ಕಾರಣ ಆಟೋದಲ್ಲಿ ಹೋಗಬೇಕಾಯಿತು.

ಯೆರವಾಡದಲ್ಲಿ ಅವರ ಆಫೀಸ್​ನವರೇ ವಸತಿಗೆ ವ್ಯವಸ್ಥೆ ಮಾಡಿದ್ದರು. ಅಂತೂ ಆಟೋ ಹಿಡಿದು ಮನೆ ತಲುಪಿದ ಟೆಕಿಗೆ ಭರ್ಜರಿ ಶಾಕ್​ ಕಾದಿತ್ತು. ಕಾರಣ ಆಟೋ ಚಾಲಕ 4,300 ರೂಪಾಯಿ ನೀಡುವಂತೆ ಕೇಳಿದ್ದ. ಅಲ್ಲದೆ, ಮೀಟರ್​ ಕೂಡ ಅದೇ ಅಮೌಂಟ್​ ತೋರಿಸುತ್ತಿತ್ತು. ಅದನ್ನು ವಿರೋಧಿಸಿದ ಇಂಜಿನಿಯರ್​ ನಾನು ಅಷ್ಟು ಹಣ ಕೊಡಲು ಸಾಧ್ಯವೇ ಇಲ್ಲ ಎಂದಿದ್ದಾನೆ. ಆದರೆ, ಆಟೋ ಚಾಲಕ ಹೇಳಿದ ಉತ್ತರ ವಿಚಿತ್ರವಾಗಿತ್ತು. ಈ ನಗರಕ್ಕೆ ಬರಲು ಹಾಗೂ ಇಲ್ಲಿಂದ ಹೊರಹೋಗುವ ಕಾರಣಕ್ಕೆ 600 ರೂಪಾಯಿಯನ್ನು ನೀಡಬೇಕು. ಉಳಿದ 3,700 ರೂಪಾಯಿ ನಿಜವಾದ ಚಾರ್ಜ್​ ಎಂದಿದ್ದಾನೆ.

ಆ ಕ್ಷಣಕ್ಕೆ ಇಂಜಿನಿಯರ್​ ಅಷ್ಟೂ ಹಣವನ್ನು ಆಟೋ ಚಾಲಕನಿಗೆ ಪಾವತಿಸಿದ್ದರೂ ನಂತರ ಪೊಲೀಸ್​ ಠಾಣೆಗೆ ಹೋಗಿ ದೂರು ನೀಡಿದ್ದಾನೆ.

One Reply to “14.5 ಕಿಮೀ ದೂರ ಆಟೋದಲ್ಲಿ ಹೋದ ಟೆಕ್ಕಿ; ಇಳಿಯುವ ಸ್ಥಳಕ್ಕೆ ಹೋಗುತ್ತಿದ್ದಂತೆ ಫುಲ್​ ಶಾಕ್​, ಆಟೋ ಚಾಲಕ ಬೀಸಿದ ಚಾಟಿ ಏನು?”

  1. Did the passenger not check the metre, as soon as he got into the auto rickshaw and confirm the metre switched on at that time? We should always do that. Since 5am, hw should be paying one and a half times of the meyre charge.

Leave a Reply

Your email address will not be published. Required fields are marked *