Thursday, 13th December 2018  

Vijayavani

ಕಬ್ಬು ದರ ಬಾಕಿ ನೀಡಲು ರೈತರ ಆಗ್ರಹ -ಸುವರ್ಣ ಸೌಧದಕ್ಕೆ ಮುತ್ತಿಗೆ ಯತ್ನ - ಪೊಲೀಸರೊಂದಿಗೆ ಅನ್ನದಾತರ ಜಟಾಪಟಿ        ರಾಜಸ್ಥಾನ ಸಿಎಂ ಆಗಿ ಗೆಹ್ಲೋಟ್ ಹೆಸರು ಫೈನಲ್ - ರಾಹುಲ್ ಆಪ್ತ ಸಚಿನ್ ಪೈಲಟ್​ಗೆ ಡಿಸಿಎಂ ಪಟ್ಟ - ಅಧಿಕೃತ ಘೋಷಣೆ ಬಾಕಿ        ಬಳ್ಳಾರಿಯ ಮೈಲಾರದಲ್ಲಿ ಗೊರವಯ್ಯನ ಗಲಾಟೆ - ಸಣ್ಣಪ್ಪ ಮಲ್ಲಪ್ಪನವರಿಗೆ ಗೊರವಯ್ಯನ ದೀಕ್ಷೆ ಕೊಟ್ಟಿದ್ದಕ್ಕೆ ವಿರೋಧ         ಟ್ರಿನಿಟಿ ಸರ್ಕಲ್​​ನಲ್ಲಿ ಮೆಟ್ರೋ ಪಿಲ್ಲರ್ ಬಿರುಕು - ಜೀವದ ಜತೆ ಚೆಲ್ಲಾಟ ಬೇಡ - ದಿಗ್ವಿಜಯ ನ್ಯೂಸ್ ಜತೆ ಎಕ್ಸ್​​ಪರ್ಟ್​​ಗಳ ಮಾತು        ತಿರುವನಂತಪುರದಲ್ಲಿ ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ -ಹಿಂಸಾಚಾರಕ್ಕೆ ಯತ್ನ, ಪೊಲೀಸರಿಂದ ಲಾಠಿಚಾರ್ಜ್       
Breaking News

ಮೊಟ್ಟೆಯ ಸಿಪ್ಪೆಯಲ್ಲಿ ನೆಲೆಯಾದ ಕಲೆ: ಕಲಾವಿದನ ಕೈಚಳಕಕ್ಕೊಂದು ಸಲಾಂ!

Friday, 08.06.2018, 6:50 AM       No Comments

ಬೆಂಗಳೂರು: ಏಕಾಗ್ರತೆ, ಸಾಧಿಸೋ ಛಲ ಇದ್ರೆ ಕಸದಲ್ಲೂ ಕಲೆಯರಳಿಸಬಹುದು ಎಂಬುದನ್ನು ಇಲ್ಲೊಬ್ಬರು ಸಾಧಿಸಿದ್ದಾರೆ. ಎಲ್ಲರೂ ಹಣ್ಣು, ತರಕಾರಿ ಬಿದಿರು ಹಾಗೂ ಪ್ಲಾಸ್ಟಿಕ್​ಗಳಲ್ಲಿ ಕಲೆಯರಳಿಸಿ, ಸೈ ಅನ್ನಿಸಿಕೊಂಡಿದ್ದನ್ನ ನಾವೆಲ್ಲ ಕಂಡಿದ್ದೇವೆ. ಆದರೆ, ಇಲ್ಲೊಬ್ಬರು ಮೊಟ್ಟೆಯಲ್ಲಿ ಕಲೆಯರಳಿಸಿ ಎಲ್ಲರನ್ನು ಮಂತ್ರಮುಗ್ಧರನ್ನಾಗಿಸಿದ್ದಾರೆ.

ಹೌದು, ಮಲ್ಲೇಶ್ವರಂನ ನಿವಾಸಿ ಅಭಿಷೇಕ್ ಅವರು ಮೊಟ್ಟೆಯಲ್ಲಿ ಚಿತ್ತಾರ ಬಿಡಿಸುವ ಕಲಾಚಾತುರ್ಯವನ್ನು ಹೊಂದಿದ್ದಾರೆ. ಅಭಿಷೇಕ್​​ ಅವರ ತಂದೆ ಕೊಬ್ಬರಿಯಲ್ಲಿ ಕಲಾಗಾರಿಕೆ ತೋರುತ್ತಿದ್ದರಂತೆ. ತಾವೂ ಏನಾದರೂ ವಿಭಿನ್ನವಾಗಿ ಮಾಡಬೇಕೆಂದುಕೊಂಡ ಅಭಿಷೇಕ್​ಗೆ ಹೊಳೆದಿದ್ದೇ ಈ ಮೊಟ್ಟೆ ಕಲೆಗಾರಿಕೆ.

ಅಭಿಷೇಕ್ ಕಳೆದ 2 ವರ್ಷಗಳಿಂದ ಮೊಟ್ಟೆಯ ಸಿಪ್ಪೆಗಳಿಗೆ ಜೀವ ತುಂಬ್ತಿದ್ದಾರೆ. ಇದುವರೆಗೂ ಸುಮಾರು 50ಕ್ಕೂ ಹೆಚ್ಚು ಮೊಟ್ಟೆಯ ಸಿಪ್ಪೆಗಳಿಗೆ ಅದ್ಭುತ ರೂಪವನ್ನ ನೀಡಿದ್ದಾರೆ.

ಸಾಧಿಸೋ ಭರದಲ್ಲಿ ಅಭಿಷೇಕ್ ಮನೆಗೆ ಕ್ರೇಟ್ ಗಟ್ಟಲೇ ಮೊಟ್ಟೆಯನ್ನ ತಂದಿಟ್ಟರಂತೆ. ಆಗ ಅವರ ಪೋಷಕರು, ನಾವು ಮೊದಲೇ ಬ್ರಾಹ್ಮಣರು ಮನೇಲಿ ಮೊಟ್ಟೆ ತಂದ್ರೆ ಜನ ಏನು ಅಂದುಕೊಳ್ತಾರೆ, ಮೊದಲು ಅದನ್ನ ಹೊರಗೆ ಹಾಕು ಇಲ್ಲಾಂದ್ರೆ ನಿನ್ನನ್ನ ನಾವು ಹೊರಗೆ ಹಾಕ್ತೀವಿ ಅಂದಿದ್ರಂತೆ. ಆದರೆ, ದಿನ ಕಳೆದಂತೆ ಇವರ ಕಲೆಯನ್ನ ನೋಡಿ, ಅಭಿಷೇಕ್​​ ಬೆನ್ನು ತಟ್ಟಿದ್ದಾರೆ.

ಕುರಾನ್​​, ಬೈಬಲ್​​​​​ ಹಾಗೂ ಪ್ರಾಣಿ ಪಕ್ಷಿಗಳೆಲ್ಲವನ್ನೂ ಮೊಟ್ಟೆ ಸಿಪ್ಪೆಯಲ್ಲಿ ಮೂಡಿಸುತ್ತಿರೋ ಅಭಿಷೇಕ್​ ಅವರ ಕೈಚಳಕ ಅದ್ಭುತವೇ ಸರಿ. (ದಿಗ್ವಿಜಯ ನ್ಯೂಸ್​​)

Leave a Reply

Your email address will not be published. Required fields are marked *

Back To Top