ಕೇಂದ್ರ ಸಚಿವ ಅನಂತಕುಮಾರ್​ ಮಣಿಸಲು ಕಾಂಗ್ರೆಸ್​ ರಣತಂತ್ರ

ಬೆಂಗಳೂರು: ಮುಂಬರುವ ಲೋಕಸಭಾ ಚುನಾವಣೆಗೆ ರಾಜ್ಯ ರಾಜಕೀಯ ವಲಯದಲ್ಲಿ ಭಾರಿ ಕಸರತ್ತು ಶುರುವಾಗಿದ್ದು, ರಾಜ್ಯದಲ್ಲಿ ಬಿಜೆಪಿಯನ್ನು ಕಟ್ಟಿಹಾಕಲು ಜೆಡಿಎಸ್​- ಕಾಂಗ್ರೆಸ್​ ಮೈತ್ರಿ ಸರ್ಕಾರ ರಣತಂತ್ರ ರೂಪಿಸುತ್ತಿದೆ.

ಬೆಂಗಳೂರು ದಕ್ಷಿಣ ಕ್ಷೇತ್ರವನ್ನು ಗೆಲ್ಲಲು ಮೈತ್ರಿ ಸರ್ಕಾರ ಭರ್ಜರಿ ತಯಾರಿ ಮಾಡಿದ್ದು, ಕೇಂದ್ರ ಸಚಿವ ಅನಂತಕುಮಾರ್​ ಎದುರು ಮಾಜಿ ಶಾಸಕ ಪ್ರಿಯಕೃಷ್ಣರನ್ನು ಕಣಕ್ಕಿಳಿಸಲು ಕಾಂಗ್ರೆಸ್​ನಲ್ಲಿ ಪ್ರಯತ್ನ ನಡೆದಿದೆ.

ಜಾತಿ ಬಲ, ಹೊಸ ಮುಖ, ಯುವಕ, ಆರ್ಥಿಕ ಬಲ ಹಾಗೂ ತಂದೆಯ ವರ್ಚಸ್ಸಿನ ಲೆಕ್ಕಾಚಾರದಲ್ಲಿ ಅನಂತ್​ಕುಮಾರ್ ಮಣಿಸಲು ಪ್ರಿಯಕೃಷ್ಣ ಸೂಕ್ತ ಎಂಬ ಮಾತುಗಳು ಕಾಂಗ್ರೆಸ್​ ಪಾಳಯದಲ್ಲಿ ಕೇಳಿಬರುತ್ತಿದೆ.

ಕಳೆದ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಪ್ರಿಯಕೃಷ್ಣ ಗೋವಿಂದರಾಜ ನಗರ ಕ್ಷೇತ್ರದಿಂದ ಕಣಕ್ಕಿಳಿದು ಬಿಜೆಪಿಯ ವಿ. ಸೋಮಣ್ಣ ವಿರುದ್ಧ ಪರಾಜಿತಗೊಂಡಿದ್ದರು. ಪ್ರಿಯಕೃಷ್ಣ ಮಾಜಿ ಸಚಿವ ಹಾಗೂ ಹಾಲಿ ಶಾಸಕ ಕೃಷ್ಣಪ್ಪ ಅವರ ಮಗ. (ದಿಗ್ವಿಜಯ ನ್ಯೂಸ್​)