ಕೃಷಿ ಮೇಳದಲ್ಲಿ ಆವಿಷ್ಕಾರಗಳ ಆಕರ್ಷಣೆ

ಬೆಂಗಳೂರಿನ ಜಿಕೆವಿಕೆಯಲ್ಲಿ ಆಯೋಜಿಸಿರುವ 4 ದಿನಗಳ (ನ.15ರಿಂದ18) ಕೃಷಿ ಮೇಳಕ್ಕೆ ಗುರುವಾರ ಚಾಲನೆ ಸಿಕ್ಕಿದೆ. ಕೃಷಿಕರಿಗೆ ಆಧುನಿಕ-ಸಾಂಪ್ರದಾಯಿಕ ಕೃಷಿ ಪದ್ಧತಿ ಪರಿಚಯಿಸಲು ಹಾಗೂ ಹೊಸ ತಂತ್ರಜ್ಞಾನಗಳ ಬಳಕೆ ಬಗ್ಗೆ ಅರಿವು ಮೂಡಿಸಲು ಖಡಕ್​ನಾಥ್ ಕೋಳಿ, ಹಳ್ಳಿಕಾರ್ ಎತ್ತು, ವ್ಯವಸಾಯಕ್ಕೆ ಡ್ರೋನ್ ಕ್ಯಾಮರಾ ಬಳಕೆ ಸೇರಿ ಹಲವು ಆವಿಷ್ಕಾರಗಳು ಇಲ್ಲಿ ತೆರೆದುಕೊಂಡಿವೆ. ಕೃಷಿ ಮೇಳದ ವಿಶೇಷತೆಯ ಝುಲಕ್ ಇಲ್ಲಿದೆ.

ಹಳ್ಳಿಕಾರ್ ಎತ್ತು, ಬಂಡೂರು ಕುರಿ

ತಮಿಳುನಾಡು ಜಲ್ಲಿಕಟ್ಟು ಕ್ರೀಡೆಗೆ ಹೆಚ್ಚಾಗಿ ಬಳಸುವ ಹಳ್ಳಿಕಾರ್ ಎತ್ತುಗಳು ಮೇಳದಲ್ಲಿವೆ. ನಶಿಸುತ್ತಿರುವ ಹಳ್ಳಿಕಾರ್ ಬಗ್ಗೆ ರೈತರಲ್ಲಿ ಅರಿವು ಮೂಡಿಸಲಾಗುತ್ತಿದೆ. ಬಂಡೂರು ಕುರಿಗಳು, 24 ಲಕ್ಷ ರೂ. ಮೊತ್ತದ ಗೀರ್ ಎತ್ತು, ಜಮುನಾಪಾರಿ, ಬೋಯರ್ ತಳಿ ಮೇಕೆಗಳು, ಬಣ್ಣದ ಗಿರಿರಾಜ ಕೋಳಿಗಳು ಮೇಳದ ಆಕರ್ಷಣೆ.

ಡ್ರೋನ್ ಮೂಲಕ ಔಷಧ ಸಿಂಪಡಣೆ

ಡ್ರೋನ್ ಕ್ಯಾಮರಾ ಬಳಸಿ ಬೆಳೆಗಳಿಗೆ ಔಷಧ ಸಿಂಪಡಿಸುವ ತಂತ್ರಜ್ಞಾನವನ್ನು ಖಾಸಗಿ ಸಂಸ್ಥೆಯೊಂದು ಕಂಡುಹಿಡಿದಿದ್ದು, ಅದೂ ಮೇಳದಲ್ಲಿ ಪ್ರದರ್ಶನವಾಗುತ್ತಿದೆ. ಜತೆಗೆ ಭೂಮಿ ಸಮತಟ್ಟು ಮಾಡಲು ಸೆನ್ಸಾರ್ ಆಧಾರದಲ್ಲಿ ಕೆಲಸ ಮಾಡುವ ಲೇಸರ್ ಲ್ಯಾಂಡ್ ಲೆವೆಲ್ಲರ್ ಯಂತ್ರವೂ ಇಲ್ಲಿದೆ. ‘ಎಬಿಸಿ4ಡಿ’ ಎಂಬ ಮೊಬೈಲ್ ಅಪ್ಲಿಕೇಷನ್​ನಲ್ಲಿ ಯಂತ್ರಗಳ ಬಗ್ಗೆ ಮಾಹಿತಿ ಪಡೆದು, ಬಾಡಿಗೆಗೂ ಪಡೆಯಬಹುದು.

ರೈತರಿಗೆ ಪ್ರಶಸ್ತಿ ಪ್ರದಾನ

ಕೃಷಿ ಕ್ಷೇತ್ರದಲ್ಲಿ ಉತ್ತಮ ಸಾಧನೆ ತೋರಿದ ಮತ್ತು ಹೊಸ ಬಗೆಯ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡ ರೈತರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹೆಸರಿನಲ್ಲಿ ಅತ್ಯುತ್ತಮ ರೈತ, ರೈತ ಮಹಿಳೆ ಪ್ರಶಸ್ತಿ, ಸಿ. ಬೈರೇಗೌಡ ರಾಜ್ಯಮಟ್ಟದ ರೈತ ಪ್ರಶಸ್ತಿ, ಡಾ.ಎಂ.ಎಚ್.ಮರಿಗೌಡ ರಾಜ್ಯ ಮಟ್ಟದ ಅತ್ಯುತ್ತಮ ತೋಟಗಾರಿಕಾ ರೈತ ಪ್ರಶಸ್ತಿ, ಡಾ. ಆರ್.ದ್ವಾರಕೀನಾಥ್ ಅತ್ಯುತ್ತಮ ರೈತ ಪ್ರಶಸ್ತಿ ಹಾಗೂ ಅತ್ಯುತ್ತಮ ವಿಸ್ತರಣಾ ಕಾರ್ಯಕರ್ತ ಪ್ರಶಸ್ತಿ ಹಾಗೂ ಕೆನರಾ ಬ್ಯಾಂಕ್ ಪ್ರಾಯೋಜಿತ ಅತ್ಯುತ್ತಮ ರೈತ ಹಾಗೂ ರೈತ ಮಹಿಳಾ ಪ್ರಶಸ್ತಿ ನೀಡಲಾಯಿತು. ಅದರ ಜತೆಗೆ ವಿವಿ ವ್ಯಾಪ್ತಿಯ 10 ಜಿಲ್ಲೆಗಳಲ್ಲಿ ಒಟ್ಟು 10 ಅತ್ಯುತ್ತಮ ರೈತ ಹಾಗೂ 10 ಅತ್ಯುತ್ತಮ ರೈತ ಮಹಿಳಾ ಪ್ರಶಸ್ತಿ, ತಾಲೂಕು ಮಟ್ಟದಲ್ಲಿ 60 ಯುವ ರೈತ ಹಾಗೂ 60 ಯುವ ರೈತ ಮಹಿಳಾ ಪ್ರಶಸ್ತಿಗಳನ್ನು ನೀಡಲಾಗುತ್ತಿದೆ.

4 ಹೊಸ ತಳಿ ಲೋಕಾರ್ಪಣೆ

ಕೃಷಿ ಮೇಳದಲ್ಲಿ ಕಡಿಮೆ ಅವಧಿಯಲ್ಲಿ ಹೆಚ್ಚು ಇಳುವರಿ ನೀಡುವ ರಾಗಿ, ಸೂರ್ಯಕಾಂತಿ, ಸೋಯಾ ಅವರೆ, ಅಕ್ಕಿ ಅವರೆಯ ಹೊಸ ತಳಿಗಳನ್ನು ಲೋಕಾರ್ಪಣೆ ಮಾಡಲಾಯಿತು.

ಬೆಳಕಿನಿಂದಲೇ ಕೀಟನಾಶ

ಬೆಳೆಗಳ ಕೀಟ ಬಾಧೆ ಅಥವಾ ರೋಗಕ್ಕೆ ರಾಸಾಯನಿಕ ಸಿಂಪಡಿಸುವ ಬದಲು ಸೌರಶಕ್ತಿ ಮೂಲಕ ಪರಿಹಾರ ಕಂಡುಕೊಳ್ಳುವ ವಿಧಾನವನ್ನು ದಾವಣಗೆರೆ ರೈತ ಎಂ.ಜಿ. ಕರಿಬಸಪ್ಪ ಕಂಡು ಹಿಡಿದಿದ್ದಾರೆ. ಈ ಯಂತ್ರಕ್ಕೆ ‘ಸೋಲಾರ್ ಪೆಸ್ಟ್ ಕಂಟ್ರೋಲ್ ಟ್ರಾ್ಯಪ್’ ಎಂದು ಹೆಸರಿಡಲಾಗಿದೆ. ಸಂಜೆ ವೇಳೆ ಯಂತ್ರದಲ್ಲಿನ ನೀಲಿ ಬಣ್ಣದ ಎಲ್​ಇಡಿ ಬಲ್ಬ್ ಹೊತ್ತಿಕೊಳ್ಳುತ್ತದೆ. ಅದರಿಂದ ಆಕರ್ಷಿತವಾಗುವ ಕೀಟಗಳು ಯಂತ್ರದ ಬಳಿಗೆ ಬಂದಾಗ, ಯಂತ್ರದ ಕೆಳಗೆ ಇಡಲಾಗುವ ನೀರಿನ ಪಾತ್ರೆಗೆ ಬಿದ್ದು ಸಾಯುತ್ತವೆ.

ಕೃಷಿಗೆ ಸಂಬಂಧಿಸಿದ ಎಲ್ಲ ವಿಶ್ವವಿದ್ಯಾಲಯಗಳಲ್ಲಿನ ಶಿಕ್ಷಣ ವ್ಯವಸ್ಥೆಯಲ್ಲಿನ ಲೋಪಗಳ ಬಗ್ಗೆ ತಿಳಿಯಲು ಇನ್ನೊಂದು ವಾರದಲ್ಲಿ ತಜ್ಞರ ಸಮಿತಿ ರಚಿಸಲಾಗುತ್ತಿದೆ. ಕೃಷಿ, ತೋಟಗಾರಿಕೆ, ರೇಷ್ಮೆ, ಮೀನುಗಾರಿಕೆ ಸೇರಿ ಕೃಷಿ ಸಂಬಂಧಿತ ವಿವಿಗಳಲ್ಲಿನ ವ್ಯವಸ್ಥೆ, ಲೋಪಗಳ ತಿಳಿಯಲು ಸರ್ಕಾರ ನಿರ್ಧರಿಸಿದೆ.

| ಎನ್.ಎಚ್.ಶಿವಶಂಕರರೆಡ್ಡಿ ಕೃಷಿ ಸಚಿವ

ಮೇಳಕ್ಕಾಗಿ ವಿಶೇಷ ಆಪ್

‘ಕೃಷಿಮೇಳ 2018 ಬೆಂಗಳೂರು’ ಹೆಸರಿನ ಆಪ್​ನಲ್ಲಿ, ಮೇಳದಲ್ಲಿರುವ ಮಳಿಗೆ, ಹೊಸ ಆವಿಷ್ಕಾರ, ಮೇಳದ ವಿಶೇಷತೆ ತಿಳಿದುಕೊಳ್ಳಬಹುದು.

ಚಿಕ್ಕ ಸಸಿ ದೊಡ್ಡ ಫಸಲು

ಮೇಳದಲ್ಲಿ ರೈತರೊಬ್ಬರು ಹೈಬ್ರಿಡ್ ಈ ್ಡ ಖ ಹೆಸರಿನ ತೆಂಗಿನ ಸಸಿ ಪರಿಚಯಿಸಿದ್ದು, ಇದು 3ನೇ ವರ್ಷಕ್ಕೆ ಹೂವು ಬಿಡಲಾರಂಭಿಸಿ, ಎಳನೀರು ಸಿಗುವಂತಾಗಲಿದೆ. ಒಂದು ಸಸಿ ವಾರ್ಷಿಕ 350 ಎಳನೀರು ಅಥವಾ 250 ಕೊಬ್ಬರಿ ಇಳುವರಿ ನೀಡುವ ಸಾಮರ್ಥ್ಯ ಹೊಂದಿದೆ. ಜತೆಗೆ ಈ ಸಸಿಗಳು ಎತ್ತರಕ್ಕೆ ಬೆಳೆಯದೆ ಚಿಕ್ಕದಾಗಿಯೇ ಇರಲಿವೆ.

ಖಡಕ್​ನಾಥ್ ಕರಾಮತ್

ಸಾಮಾನ್ಯ ಕೋಳಿಯಂತೆ ಕಂಡರೂ ಖಡಕ್​ನಾಥ್ ವೈಶಿಷ್ಟ್ಯತೆ ಜನರನ್ನು ಆಕರ್ಷಿಸಿದೆ. ಕಪು್ಪ ಬಣ್ಣದ ಈ ಕೋಳಿಯ ರಕ್ತವೂ ಕಪು್ಪ ಎಂಬುದು ವಿಶೇಷ. ಕಬ್ಬಿಣದ ಅಂಶ ಹೆಚ್ಚಿರುವ ಈ ಕೋಳಿಯ ಪ್ರತಿ ಕೆ.ಜಿ. ಮಾಂಸದ ಬೆಲೆ 1,500 ರೂ. ಇದ್ದು, ಹೃದಯ ಸಂಬಂಧಿ ಕಾಯಿಲೆಗೆ ಈ ಕೋಳಿ ರಾಮಬಾಣ ಎಂಬುದು ಹಾಸನ ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಡಾ. ರಾಜೇಗೌಡ ಅಭಿಪ್ರಾಯ.

ಹೈಬ್ರಿಡ್ ವಿಂಡ್​ವಿುಲ್

ಪವರ್ ಕಟ್ ಸಮಸ್ಯೆ ಪರಿಹಾರಕ್ಕೆ ಮಾರುತಿ ಕೃಷಿ ಉದ್ಯೋಗ್​ನ ಅರುಣ್ ಹೈಬ್ರಿಡ್ ವಿಂಡ್​ವಿುಲ್ ಸಿದ್ಧಪಡಿಸಿ ದ್ದಾರೆ. ಅದರಿಂದ ಪ್ರತಿದಿನ 1,500 ಕಿ.ಲೋ. ವಾಟ್ ವಿದ್ಯುತ್ ಉತ್ಪಾದಿಸಿ, ಇರ್ನÌರ್​ನಲ್ಲಿ ಶೇಖರಿಸಿಕೊಂಡು ಮನೆಗಳಿಗೆ ಬಳಸಿಕೊಳ್ಳಬಹುದು.