More

    IPL ನೋಡೋದು ಟೈಂ ವೇಸ್ಟ್​ ಎಂದ ಬೆಂಗಳೂರು ಉದ್ಯಮಿಗೆ ನೆಟ್ಟಿಗರು ಕೊಟ್ಟ ಪ್ರತಿಕ್ರಿಯೆ ವೈರಲ್!

    ಬೆಂಗಳೂರು: ಇತ್ತೀಚೆಗಷ್ಟೇ ಮುಕ್ತಾಯಗೊಂಡ 16ನೇ ಆವೃತ್ತಿಯ ಐಪಿಎಲ್ ಟೂರ್ನಿಯ ಬಗ್ಗೆ ಬೆಂಗಳೂರು ಮೂಲದ ಉದ್ಯಮಿ ತನಯ್ ಪ್ರತಾಪ್ ಅವರು ಟ್ವೀಟ್​ ಮೂಲಕ ವ್ಯಕ್ತಪಡಿಸಿರುವ ಅಭಿಪ್ರಾಯ ಭಾರೀ ವೈರಲ್​ ಆಗಿದ್ದು, ಪರ-ವಿರೋಧ ಚರ್ಚೆಗೆ ಎಡೆಮಾಡಿಕೊಟ್ಟಿದೆ.

    ಅತ್ಯಮೂಲ್ಯ ಸಮಯ ವ್ಯರ್ಥ

    ಐಪಿಎಲ್​ನ ಒಂದೂ ಪಂದ್ಯವನ್ನು ಮಿಸ್​ ಮಾಡಿಕೊಳ್ಳದ ಕಟ್ಟಾ ಅಭಿಮಾನಿಗಳಿಗೆ ತನಯ್​ ಅವರು ತಮ್ಮ ಟ್ವೀಟ್​ ಅನ್ನು ಸಮರ್ಪಿಸಿದ್ದಾರೆ. ಜನರು ನನ್ನ ಬಳಿ ಸಮಯ ಇಲ್ಲ ಎಂದು ಹೇಳುತ್ತಾರೆ. ಆದರೆ, ಐಪಿಎಲ್​ ಪಂದ್ಯದ ವೇಳೆ ಟಿವಿ ಅಥವಾ ಮೊಬೈಲ್​ ಮುಂದೆ ಅಂಟಿಕೊಂಡಿರುತ್ತಾರೆ. ಒಂದು ದಿನಕ್ಕೆ 4 ಗಂಟೆ ಐಪಿಎಲ್​ ಪಂದ್ಯಕ್ಕಾಗಿ ವ್ಯಯಿಸಲಾಗುತ್ತಿದೆ. 30 ದಿನಕ್ಕೆ 120 ಗಂಟೆಯಾಗುತ್ತಿದೆ. ನಮ್ಮ ಜೀವನದ ಈ ಅತ್ಯಮೂಲ್ಯ ಸಮಯವನ್ನು ವ್ಯರ್ಥ ಮಾಡಲಾಗುತ್ತಿದೆ. ಇದೇ ಸಮಯವನ್ನು ಹೊಸ ಕೌಶಲಗಳನ್ನು ಕಲಿಯುವ ಕಡೆ ವ್ಯಯಿಸಿದರೆ ಅದರಿಂದಾಗು ಪ್ರಯೋಜನಗಳನ್ನು ಕಲ್ಪಿಸಿಕೊಳ್ಳಿ. ಸಮಯವನ್ನು ಹೇಗೆ ಬಳಸಿಕೊಳ್ಳಬೇಕು ಎಂಬ ಜಾಣತನವನ್ನು ಆಯ್ಕೆ ಮಾಡಿಕೊಳ್ಳಿ ಎಂದು ತನಯ್​ ಪ್ರತಾಪ್​ ಟ್ವೀಟ್​ ಮಾಡಿದ್ದಾರೆ.

    ಎಂಜಾಯ್​ ಮಾಡಲು ಬಿಡಬೇಕು

    ಇದೀಗ ತನಯ್​ ಅವರ ಟ್ವೀಟ್​ ಭಾರೀ ಚರ್ಚೆಯಾಗುತ್ತಿದೆ. ಆದರೆ, ಅನೇಕರು ತನಯ್​ ಅವರ ಅಭಿಪ್ರಾಯವನ್ನು ಒಪ್ಪಿಕೊಂಡಿಲ್ಲ. ಎಲ್ಲ ಸಮಯವನ್ನು ಕಲಿಯುವುದಕ್ಕೆ ಮೀಸಲಿಡಲು ಸಾಧ್ಯವಿಲ್ಲ ಎಂದಿದ್ದಾರೆ. ತಮ್ಮಷ್ಟಕ್ಕೆ ತಾವು ಎಂಜಾಯ್​ ಮಾಡಲು ಮತ್ತು ವಿಶ್ರಾಂತಿ ಪಡೆಯಲು ಸಮಯವನ್ನು ಮೀಸಲಿಡಬೇಕಾಗುತ್ತದೆ. ಸ್ವಲ್ಪವಾದರೂ ಎಂಜಾಯ್​ ಮಾಡಲು ಜನರನ್ನು ಬಿಡಬೇಕು ಎಂದು ನೆಟ್ಟಿಗರೊಬ್ಬರು ಕಾಮೆಂಟ್​ ಮಾಡಿದ್ದಾರೆ.

    ಯಾರಾದರೂ ಹೊಸ ಕೌಶಲ್ಯವನ್ನು ಕಲಿಯಲು ದಿನವಿಡಿ ಸಮಯ ವ್ಯಯಿಸಿ, ರಾತ್ರಿಯಲ್ಲಿ ಪಂದ್ಯವನ್ನು ವೀಕ್ಷಿಸಿದರೆ ಏನು? ಸಂತೋಷವಿಲ್ಲದ ಜೀವನವು ಕೆಲಸ ಮಾಡಲು ಪ್ರೇರಣೆಯಿಲ್ಲದ ಕೌಶಲ್ಯದಂತೆಯೇ ಇರುತ್ತದೆ ಎಂದು ಇನ್ನೊಬ್ಬ ನೆಟ್ಟಿಗ ತನಯ್​ ಅವರಿಗೆ ಉತ್ತರ ನೀಡಿದ್ದಾರೆ. ಐಪಿಎಲ್​ ವರ್ಷಕ್ಕೆ ಒಮ್ಮೆ ಬರುತ್ತದೆ. ಸ್ವಲ್ಪ ಎಂಜಾಯ್​ಗಾಗಿ ನೋಡಿದರೆ ತಪ್ಪೇನಿಲ್ಲ. ಆದರೆ, ಐಪಿಎಲ್​ ಹೆಸರಿನಲ್ಲಿ ನಡೆಯುವ ಜೂಜಾಟಗಳಲ್ಲಿ ಭಾಗಿಯಾಗಬಾರದು ಎಂಬ ಅಭಿಪ್ರಾಯಗಳು ಕೇಳಿಬಂದಿವೆ.

    ತನಯ್​ ಪ್ರತಾಪ್​ ಅವರ ಟ್ವೀಟ್​ ನೋಡಿ ನಿಮಗೆ ಏನನಿಸಿತು ಎಂಬುದನ್ನು ಕಾಮೆಂಟ್​ ಮೂಲಕ ನಮಗೆ ತಿಳಿಸಿ. (ಏಜೆನ್ಸೀಸ್​)

    ಉಚಿತ ಶಿಕ್ಷಣ ಕೊಡಿಸುವ ನೆಪದಲ್ಲಿ ಸಾಲ ಪಡೆದು ಕೋಟಿ ಕೋಟಿ ವಂಚನೆ!

    ಇಂದು ವಿಶ್ವ ಕ್ಷೀರ ದಿನ 2023; ಈ ದಿನದ ಮಹತ್ವ, ಉದ್ದೇಶವೇನು ಗೊತ್ತಾ?

    ಭೋಗಾಪುರದಲ್ಲಿ ಜೆಟ್ ವಿಮಾನ ಪತನ; ಪ್ಯಾರಾಚೂಟ್ ಬಳಸಿ ಇಬ್ಬರು ಪೈಲಟ್​ಗಳು ಪ್ರಾಣಾಪಾಯದಿಂದ ಪಾರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts