ಬಸ್​ನಲ್ಲಿ ಮಿನಿ ಉದ್ಯಾನವನ ನಿರ್ಮಿಸಿದ ಚಾಲಕನನ್ನು ಪ್ರಶಂಶಿಸಿದ ಪರಿಸರ ಪ್ರೇಮಿಗಳು

ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಚಾಲಕ ಬಸ್​​ನಲ್ಲಿಯೇ ಮಿನಿ ಉದ್ಯಾನವನ ಸೃಷ್ಟಿಸಿ ಪರಿಸರ ಪ್ರೇಮಿಗಳ ಗಮನ ಸೆಳೆದಿದ್ದಾರೆ.

ಗಾರ್ಡನ್​​ ಸಿಟಿ ಎಂದೇ ಹೆಸರಾಗಿರುವ ಬೆಂಗಳೂರಿನಲ್ಲಿ ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಪರಿಸರ ಮಾಲಿನ್ಯವಾಗುತ್ತಿದೆ. ಪ್ರಯಾಣಿಕರಲ್ಲಿ ಪರಿಸರ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಚಾಲಕ ಬಸ್​ನಲ್ಲಿ ಗಿಡದ ಕುಂಡಗಳನ್ನು ಬೆಳೆಸಿ ಎಲ್ಲರ ಗಮನ ಸೆಳೆದಿದ್ದಾರೆ.

ನಾರಾಯಣಪ್ಪ ಎಂಬ ಚಾಲಕ ಕಳೆದ ಮೂರ್ನಾಲ್ಕು ವರ್ಷಗಳಿಂದ ಬಸ್​ನಲ್ಲಿ ಗಿಡಗಳನ್ನು ಬೆಳೆಸುವ ಮೂಲಕ ಮಿನಿ ಗಾರ್ಡನ್​​ ಸೃಷ್ಟಿಮಾಡಿದ್ದಾರೆ. ಕಾವಲ ಬೈರಸಂದ್ರ ಮತ್ತು ಯಶವಂತಪುರ ಮಾರ್ಗದಲ್ಲಿ ಚಲಿಸುವ ಬಸ್​ನಲ್ಲಿ ಮಿನಿ ಗಾರ್ಡನ್​​​ ಕಂಡ ಅನೇಕ ಪ್ರಯಾಣಿಕರು ಅಚ್ಚರಿಗೊಂಡಿದ್ದಾರೆ.

ಪ್ರಸ್ತುತ ದಿನಗಳಲ್ಲಿ ಪರಿಸರ ನಾಶವಾಗಿತ್ತಿದೆ. ಜನರಲ್ಲಿ ಪರಿಸರ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ 3-4 ವರ್ಷಗಳಿಂದ ಈ ರೀತಿಯ ಕೆಲಸ ಮಾಡುತ್ತಿದ್ದೇನೆ ಎಂದು ಚಾಲಕ ನಾರಾಯಣಪ್ಪ ತಿಳಿಸಿದ್ದಾರೆ.

ಚಾಲಕನ ಪರಿಸರ ಜಾಗೃತಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಪ್ರಯಾಣಿಕರು ಮಿನಿ ಗಾರ್ಡನ್​​ ಪೋಟೊಗಳನ್ನು ಟ್ವಿಟರ್​​ನಲ್ಲಿ ಪೋಸ್ಟ್​​ ಮಾಡಿದ್ದು, ಸಾಕಷ್ಟು ವೈರಲ್​​​​ ಆಗಿವೆ. ಅನೇಕ ಪರಿಸರ ಪ್ರೇಮಿಗಳು ಚಾಲಕನ ಪರಿಸರ ಕಾಳಜಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಹಲವು ದಿನಗಳ ಹಿಂದೆ ಕೋಲ್ಕತದಲ್ಲಿ ಆಟೋ ಚಾಲಕ ತನ್ನ ಆಟೋ ಮೇಲೆ ಮಿನಿ ಗಾರ್ಡನ್​​​ ನಿರ್ಮಾಣ ಮಾಡಿದ್ದ ಪೋಟೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​​​ ಆಗಿತ್ತು. (ಏಜನ್ಸೀಸ್​)

Leave a Reply

Your email address will not be published. Required fields are marked *