ಮೋರಿಯಲ್ಲಿ ಬಿದ್ದು ವ್ಯಕ್ತಿ ಸಾವು ಪ್ರಕರಣ: ದಿಗ್ವಿಜಯ ನ್ಯೂಸ್​ ವರದಿ ಬೆನ್ನಲ್ಲೆ ಎಚ್ಚೆತ್ತ ಅಧಿಕಾರಿಗಳು

ಬೆಂಗಳೂರು: ಮೋರಿಯಲ್ಲಿ ಬಿದ್ದು ವ್ಯಕ್ತಿ ಸಾವು ಪ್ರಕರಣ ಕುರಿತು ದಿಗ್ವಿಜಯ ನ್ಯೂಸ್ ಪ್ರಸಾರ ಮಾಡಿದ್ದ​ ವರದಿಯಿಂದ ಎಚ್ಚೆತ್ತ ಪಾಲಿಕೆ ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ಧಾವಿಸಿ ಸ್ಥಳಿಯರಿಂದಲೇ ಮೋರಿಗೆ ಸ್ಲ್ಯಾಬ್‌ ಹಾಕಿಸಿದ್ದಾರೆ.

ಶೇಖರ್​ ಎಂಬಾತ ಕಳೆದ 15 ದಿನಗಳ ಹಿಂದೆ ರಾತ್ರಿ ವೇಳೆ ಹೆಣ್ಣೂರು ಬಂಡೆ ಬಸ್ ನಿಲ್ದಾಣದ ಬಳಿ ನಡೆದುಕೊಂಡು ಹೋಗುತ್ತಿದ್ದ. ಈ ವೇಳೆ ಕಾಂಕ್ರೀಟ್ ಸ್ಲಾಬ್ ಹಾಕದೇ ತೆರೆದುಕೊಂಡಿದ್ದ ಮೋರಿಯ ಒಳಗೆ ಬಿದ್ದು ಸಾವಿಗೀಡಾಗಿದ್ದ. ಮೃತದೇಹದ ದುರ್ವಾಸನೆಯಿಂದ ಪ್ರಕರಣ ಬೆಳಕಿಗೆ ಬಂದಿತ್ತು.

ಈ ಬಗ್ಗೆ ದಿಗ್ವಿಜಯ ನ್ಯೂಸ್​ ಫುಟ್​​ಪಾತ್​ನಲ್ಲಿ ನಡೆಯೋ ಜನರೇ ಹುಷಾರ್ ಎಂಬ ಟ್ಯಾಗ್​ಲೈನ್​ನೊಂದಿಗೆ ವರದಿ ಪ್ರಸಾರ ಮಾಡಿತ್ತು. ಇದರ ಬೆನ್ನಲ್ಲೆ ಎಚ್ಚೆತ್ತ ಪಾಲಿಕೆ ಅಧಿಕಾರಿಗಳು ಸ್ಥಳಕ್ಕೆ ಬಂದು ಮೋರಿಗೆ ಸ್ಲ್ಯಾಬ್‌ ಹಾಕಿಸಿದ್ದಾರೆ. (ದಿಗ್ವಿಜಯ ನ್ಯೂಸ್​)