ಬೆಂಗಳೂರು: ಅಪರೂಪದ ಸಮಸ್ಯೆಯಿಂದ ಬಳಲುತ್ತಿದ್ದ ಪಾಕಿಸ್ತಾನದ ಮಗುವಿಗೆ ಬೆಂಗಳೂರು ವೈದ್ಯರು ಮರುಜೀವ ನೀಡಿದ್ದಾರೆ. ಆಸ್ಟಿಯೋಪೆಟ್ರೋಸಿಸ್ ಎಂಬ ಅಣುವಂಶಿಕ ಕಾಯಿಲೆಯಿಂದ ಬಳಲುತ್ತಿದ್ದ ಮಗು ಮಾರಣಾಂತಿಕ ಸ್ಥಿತಿಗೆ ತಲುಪಿತ್ತು.
ಮಗುವಿನಲ್ಲಿ ಕಂಡು ಬಂದ ಕಾಯಿಲೆ ಇನ್ಫಾನ್ಟೈಲ್ ಅಸ್ಟಿಯೋಪೆಟ್ರೆಸಿಸ್ ಎಂಬುದು ಮಾರ್ಬಲ್ ಮೂಳೆ ರೋಗವಾಗಿದೆ. ಈ ಸಮಸ್ಯೆಗೆ ತುತ್ತಾದವರು ಅನೇಕ ಮೂಳೆಗಳ ಬಿಗಿತನ, ದೃಷ್ಟಿ ಹೀನತೆ, ಕಿವಿ ಕೇಳದಿರುವಿಕೆ ಮತ್ತು ಅಸ್ಥಿಮಜ್ಜೆ ಸಮಸ್ಯೆಗೆ ಒಳಗಾಗಿ ಅವರ ಜೀವಿತಾವಧಿಯೇ ತಗ್ಗುತ್ತದೆ. ಇಂತಹ ಮಗುವಿಗೆ ಹೊಸ ರೀತಿಯ ಬೋನ್ ಮ್ಯಾರೊ ಟ್ರಾನ್ಸ್ಪ್ಲಾಂಟ್ ಟೆಕ್ನಿಕ್ ಮೂಲಕ ಚಿಕಿತ್ಸೆ ನೀಡಲಾಗಿದೆ.
ದಶಕಗಳ ಬಳಿಕ ಪಾಕಿಸ್ತಾನ ದಂಪತಿಗೆ ಸಮವೀಯ ಎಂಬ ಮಗು ಜನಿಸಿದೆ. ಬೆಂಗಳೂರಿನ ಹೆಲ್ತ್ ಸಿಟಿಗೆ ಕರೆತಂದಾಗ ಆಕೆಗೆ ಕೇವಲ 5 ತಿಂಗಳಾಗಿತ್ತು. ನಾಲ್ಕು ತಿಂಗಳ ಟ್ರಾನ್ಸ್ಪ್ಲಾಂಟೇಶನ್ ಬಳಿಕ ಮಗುವು ಶೇ 100 ರಷ್ಟು ದಾನಿಗಳ ಕೋಶದಿಂದ ರೋಗ ಮುಕ್ತವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಆಕೆಯ ಮೂಳೆಗಳು ಪುನರ್ ಮಾದರಿಯತ್ತ ಸಕಾರಾತ್ಮಕ ಪ್ರತಿಕ್ರಿಯೆ ತೋರುತ್ತಿದೆ.
ಮಗುವಿನ ತಂದೆ ಜುನೈದ್ ಅಲಿ ಮಾತನಾಡಿ, ವೈದ್ಯರಿಗೆ ಮತ್ತು ತಜ್ಙರಿಗೆ ಧನ್ಯವಾದ ತಿಳಿಸಿದ್ದಾರೆ. ಮಗಳನ್ನು ಕಾಳಜಿ ತೋರಿ ಬಹಳ ಪ್ರೀತಿಯಿಂದ ನೋಡಿಕೊಂಡಿದ್ದಾರೆ. ವೈದ್ಯರು ನಮ್ಮ ಕುಟುಂಬದಂತೆ ಎಂದುಯ ಹೇಳಿದ್ದಾರೆ.
ಮಗು ಇದೀಗ ಎಲ್ಲರಂತೆ ಸಾಮಾನ್ಯವಾಗಿರಲಿದ್ದು, ಅಪರೂಪದ ಕಾಯಿಲೆಯಿಂದ ಮುಕ್ತವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.