18.1 C
Bangalore
Saturday, December 7, 2019

ಜಿಎಸ್​ಟಿ ವಂಚಕ ಜಾಲ ಪತ್ತೆ

Latest News

ಅಂಗನವಾಡಿಗಳಲ್ಲೇ ಪೂರ್ವ ಪ್ರಾಥಮಿಕ ಶಿಕ್ಷಣ ಪ್ರಾರಂಭಿಸಿ

ಕಾರವಾರ: ಅಂಗನವಾಡಿ ಕೇಂದ್ರಗಳಲ್ಲಿ ಪೂರ್ವ ಪ್ರಾಥಮಿಕ ಶಿಕ್ಷಣ ಪ್ರಾರಂಭಿಸಬೇಕು ಎಂದು ಆಗ್ರಹಿಸಿ ಅಂಗನವಾಡಿ ಕಾರ್ಯಕರ್ತೆಯರು ನಗದಲ್ಲಿ ಶುಕ್ರವಾರ ಬೃಹತ್ ಪ್ರತಿಭಟನೆ ನಡೆಸಿದರು.

ಖರೀದಿ ಕೇಂದ್ರ ತೆರೆಯಲು ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ ಕೃಷಿ ಮಾರಾಟ ಇಲಾಖೆ

ಚಿತ್ರದುರ್ಗ: ಬೆಂಬಲ ಬೆಲೆ ಯೋಜನೆಯಡಿ ಶೇಂಗಾ, ಮೆಕ್ಕೆಜೋಳ ಮತ್ತಿತರ ಬೆಳೆಗಳ ಖರೀದಿ ಕೇಂದ್ರ ತೆರೆಯಲು ಹಾಗೂ ಏಜೆನ್ಸಿ ನಿಗದಿಪಡಿಸಲು ಕೋರಿ ಕೃಷಿ ಮಾರಾಟ...

ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ

ಮೈಸೂರು: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಜಿಲ್ಲೆಯ ನೂರಾರು ಅಂಗನವಾಡಿ ಕಾರ್ಯಕರ್ತೆಯರು ಶುಕ್ರವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು. ಕರ್ನಾಟಕ ರಾಜ್ಯ ಅಂಗವನಾಡಿ ನೌಕರರ ಸಂಘದ...

ಅಂಬೇಡ್ಕರ್ ಸಂವಿಧಾನದ ಗುಮಾಸ್ತರಲ್ಲ

ಮೈಸೂರು: ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರನ್ನು ಇತ್ತೀಚೆಗೆ ಕೆಲವರು ಸಂವಿಧಾನದ ಗುಮಾಸ್ತನ ರೀತಿ ನೋಡುತ್ತಿರುವುದು ಮನಸ್ಸಿಗೆ ತೀವ್ರ ನೋವು ಉಂಟುಮಾಡುತ್ತಿದೆ ಎಂದು...

ಅಂಬೇಡ್ಕರ್ ಚಿಂತನೆಗಳೇ ದೇಶಕ್ಕೆ ಸಂಪತ್ತು

ಮೈಸೂರು: ಶಿಕ್ಷಣದ ಏಕಸ್ವಾಮ್ಯ ಮುರಿದು, ಶಿಕ್ಷಣದ ಮೂಲಕ ಎಲ್ಲರಿಗೂ ಬಿಡುಗಡೆಯ ಕ್ರಾಂತಿ ಮೊಳಗಿಸಿದ ಅಂಬೇಡ್ಕರ್ ಅವರ ಶ್ರಮ, ಹೋರಾಟ ಮತ್ತು ವ್ಯಕ್ತಿತ್ವ ವಿದ್ಯಾರ್ಥಿಗಳಿಗೆ...

ಬೆಂಗಳೂರು: ನಕಲಿ ಬಿಲ್ ಸೃಷ್ಟಿಸಿ ಸಾವಿರಾರು ಕೋಟಿ ರೂ. ಜಿಎಸ್​ಟಿ ವಂಚನೆ ಮಾಡುತ್ತಿದ್ದ ಬೃಹತ್ ಜಾಲ ಪತ್ತೆಯಾಗಿದೆ. ಮಂಗಳವಾರ ರಾತ್ರಿ ಬೆಂಗಳೂರಿನ ಟಿ.ದಾಸರಹಳ್ಳಿ ಮತ್ತು ಚಿಕ್ಕಬಾಣಾವರದಲ್ಲಿರುವ ನಕಲಿ ಕಂಪನಿಗಳ ಮೇಲೆ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಮೂವರನ್ನು ಬಂಧಿಸಿದ್ದಾರೆ.

ಪಂಜಾಬ್ ಮೂಲದ ವಿಕ್ರಂ ಜಿತ್ ದುಗ್ಗಲ್ ಹಾಗೂ ಸಹಚರರಾದ ಅಶ್ಪಾಕ್ ಅಹ್ಮದ್, ನಯಾಜ್ ಅಹ್ಮದ್ ಬಂಧಿತರು. 14 ನಕಲಿ ಕಂಪನಿಗಳ ಹೆಸರಿನಲ್ಲಿ ಬೋಗಸ್ ಬಿಲ್ ಸೃಷ್ಟಿಸಿ -ಠಿ;203 ಕೋಟಿ ಜಿಎಸ್​ಟಿ ವಂಚಿಸಿರುವುದು ಬೆಳಕಿಗೆ ಬಂದಿದೆ ಎಂದು ವಾಣಿಜ್ಯ ತೆರಿಗೆ ಇಲಾಖೆ (ಜಾರಿ) ಹೆಚ್ಚುವರಿ ಆಯುಕ್ತ ನಿತೀಶ್ ಪಟೇಲ್ ‘ವಿಜಯವಾಣಿ’ಗೆ ತಿಳಿಸಿದ್ದಾರೆ.

ಇತ್ತೀಚೆಗೆ 3 ಕಡೆ ದಾಳಿ ನಡೆಸಿ ಕೆಲವರನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಜಿಎಸ್​ಟಿ ವಂಚನೆ ಕಿಂಗ್​ಪಿನ್ ವಿಕ್ರಂನ ಸುಳಿವು ಸಿಕ್ಕಿತು. ಈತ ಸಹಚರರ ಜತೆ ಸೇರಿ ಪರಿಚಯಸ್ಥರ, ಸಂಬಂಧಿಕರ, ಮೃತಪಟ್ಟ ವರ ಹೆಸರಿನಲ್ಲಿ ಇ-ಸುಗಮ ಸೇವೆಯಲ್ಲಿ 14 ಕಂಪನಿಗಳನ್ನು ಜಿಎಸ್​ಟಿ ನೋಂದಣಿ ಮಾಡಿಸಿಕೊಂಡಿದ್ದ. ಸರಕು ಮತ್ತು ಸೇವೆ ನೀಡದೆ ಈ ನಕಲಿ ಕಂಪನಿಗಳ ಹೆಸರಿನಲ್ಲಿ ಬೋಗಸ್ ಜಿಎಸ್​ಟಿ ಬಿಲ್ ಮತ್ತು ಇನ್​ವೈಸ್​ಗಳನ್ನು ಸೃಷ್ಟಿಸಿ ರಾಜ್ಯದ ವಿವಿಧೆಡೆ ಇರುವ ನೂರಾರು ವ್ಯಾಪಾರಸ್ಥರಿಗೆ ಕೊಟ್ಟು ಕಮಿಷನ್ ಹಣ ಪಡೆಯುತ್ತಿದ್ದ. ಇದರಿಂದ ಸರ್ಕಾರಕ್ಕೂ ಜಿಎಸ್​ಟಿ ಹಣ ಬರುತ್ತಿರಲಿಲ್ಲ. ಅಂದಾಜು -ಠಿ;203 ಕೋಟಿ ತೆರಿಗೆ ವಂಚನೆ ಆಗಿರುವುದು ಗೊತ್ತಾಗಿದೆ. ಬಂಧಿತರಿಂದ 2 ಲ್ಯಾಪ್​ಟಾಪ್, 1 ಮೊಬೈಲ್, ಡೈರಿ ಸೇರಿ ಹಲವು ದಾಖಲೆಗಳನ್ನು ವಶಕ್ಕೆ ಪಡೆದು ತನಿಖೆ ಮುಂದುವರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜಿಎಸ್​ಟಿ, ಆದಾಯ ತೆರಿಗೆ ವಂಚನೆ ಅಪರಾಧ. ಅಕ್ರಮದಲ್ಲಿ ತೊಡಗದೆ ವ್ಯಾಪಾರಸ್ಥರು ಕಾನೂನು ಪ್ರಕಾರ ಜಿಎಸ್​ಟಿ ಪಾವತಿಸಬೇಕು.

| ನಿತೀಶ್ ಪಟೇಲ್, ಹೆಚ್ಚುವರಿ ಆಯುಕ್ತ, ವಾಣಿಜ್ಯ ತೆರಿಗೆ ಇಲಾಖೆ (ಜಾರಿ)

 

2 ಸಾವಿರ ಕೋಟಿ ವಂಚನೆ

ಬಂಧಿತರ ವಿಚಾರಣೆ ಮತ್ತು ಸಿಕ್ಕ ದಾಖಲೆಗಳ ಪರಿಶೀಲನೆ ನಡೆಸಿದಾಗ 2 ಸಾವಿರ ಕೋಟಿ ರೂ.ಗೂ ಅಧಿಕ ಜಿಎಸ್​ಟಿ ವಂಚನೆ ಆಗಿರುವ ಅನುಮಾನ ಮೂಡಿದೆ. ಬೆಂಗಳೂರು, ಗದಗ, ಮೈಸೂರು, ಇಳಕಲ್, ಬೆಳಗಾವಿ ಸೇರಿ 50 ಕಡೆ ವಂಚನೆ ನಡೆದಿರುವುದು ಪತ್ತೆಹಚ್ಚಲಾಗಿದೆ. ಕೆಲವೆಡೆ ದಾಳಿ ನಡೆಸಿದಾಗ ನಕಲಿ ಬಿಲ್​ಗಳ ಫಲಾನುಭವಿಗಳು ಅಂಗಡಿ ಮುಚ್ಚಿ ಪರಾರಿಯಾಗಿದ್ದಾರೆ. ಬೋಗಸ್ ಬಿಲ್ ನಿಂದ ಜಿಎಸ್​ಟಿ ಮತ್ತು ಐಟಿ ವಂಚಿಸುವ ವ್ಯಾಪಾರಸ್ಥರ ಮೇಲೆ ನಿಗಾ ವಹಿಸಲಾಗಿದೆ. ಸಾಕ್ಷ್ಯ ಸಂಗ್ರಹಿಸಿ ದಾಳಿ ನಡೆಸಿ ಜೈಲಿಗೆ ತಳ್ಳುವುದಾಗಿ ಎಚ್ಚರಿಕೆ ನೀಡಲಾಗಿದೆ.

ಶೇ.5 ರಿಂದ 7 ಕಮಿಷನ್

ಉದ್ಯೋಗ ಅರಸಿ ಬೆಂಗಳೂರಿಗೆ ಬಂದಿದ್ದ ವಿಕ್ರಂ, ತೆರಿಗೆ ವಂಚನೆ ದಂಧೆಯಲ್ಲಿ ತೊಡಗಿದ್ದ. ಮತ್ತಿಬ್ಬರು ಮೆಕಾನಿಕ್​ಗಳಾಗಿದ್ದಾರೆ. ವ್ಯಾಟ್ ಜಾರಿ ಇದ್ದಾಗ ವಿಕ್ರಂ, ವ್ಯಾಪಾರಸ್ಥರಿಗೆ ವ್ಯಾಟ್ ವಂಚನೆಗೆ ಸಹಾಯ ಮಾಡಿ ಕಮಿಷನ್ ಪಡೆಯುತ್ತಿದ್ದ. ಆದರೆ, ಆಗ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸುವ ಅಧಿಕಾರ ಇರಲಿಲ್ಲ. ಇದನ್ನೇ ದುರುಪಯೋಗಪಡಿಸಿಕೊಂಡ ವಿಕ್ರಂ, ತನ್ನ ಸಹಚರರ ಜತೆ ಸೇರಿ ಜಿಎಸ್​ಟಿ ವಂಚನೆ ಮುಂದುವರಿಸಿದ್ದ. ಬೋಗಸ್ ಬಿಲ್ ಕೊಟ್ಟು ವ್ಯಾಪಾರಸ್ಥರಿಂದ ಶೇ.5ರಿಂದ ಶೇ.7 ಕಮಿಷನ್ ಪಡೆಯುತ್ತಿದ್ದ. ಅಂದರೆ 100 ಕೋಟಿ ರೂ.ಗೆ ಕನಿಷ್ಠ 6 ಕೋಟಿ ರೂ. ಕಮಿಷನ್ ಸಿಗುತ್ತಿತ್ತು.

ಜಿಎಸ್​ಟಿ, ಐಟಿಗೆ ಧೋಖಾ

ಬೋಗಸ್ ಬಿಲ್​ನಿಂದ ಸರ್ಕಾರಕ್ಕೆ ಎರಡು ರೀತಿ ವಂಚನೆ ನಡೆಯುತ್ತದೆ. ಸರಕು ಮತ್ತು ಸೇವೆ ನೀಡದೆ ಬೋಗಸ್ ಜಿಎಸ್​ಟಿ ಬಿಲ್​ಗಳ ಸೃಷ್ಟಿಯಿಂದ ಸರ್ಕಾರಕ್ಕೆ ಆದಾಯ ಬರುತ್ತಿರಲಿಲ್ಲ. ಬದಲಿಗೆ ಇ-ಸುಗಮದಲ್ಲಿ ಜಿಎಸ್​ಟಿ ಬಿಲ್ ಪಡೆದಾಗ ಆನ್​ಲೈನ್​ನಲ್ಲಿ ಇನ್​ಪುಟ್ ಟ್ಯಾಕ್ಸ್ ಕ್ರೆಡಿಟ್ (ಐಟಿಸಿ) ಶೇ.18 ವಿನಾಯಿತಿ ಸೌಲಭ್ಯ ಸಿಗುತ್ತದೆ. ಈ ಲಾಭವನ್ನು ವ್ಯಾಪಾರಸ್ಥರು ತಾವು ಆದಾಯ ತೆರಿಗೆ ಸಲ್ಲಿಸುವ ವೇಳೆ ಐಟಿಸಿ ದಾಖಲೆ ತೋರಿಸಿ ವಿನಾಯಿತಿ ಅಥವಾ ರಿಫಂಡ್ ಮಾಡಿಸಿಕೊಳ್ಳುತ್ತಿದ್ದಾರೆ. ಈ ಮೂಲಕ ಆದಾಯ ತೆರಿಗೆಗೂ ವಂಚನೆ ಮಾಡುತ್ತಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Stay connected

278,740FansLike
581FollowersFollow
620,000SubscribersSubscribe

ವಿಡಿಯೋ ನ್ಯೂಸ್

VIDEO| ಎಕ್ಸ್​ಪ್ರೆಸ್​ ರೈಲಿಗೆ ಸಿಲುಕುತ್ತಿದ್ದ ವ್ಯಕ್ತಿಯ ಜೀವ ಉಳಿಸಿದ ಯೋಧ:...

ಥಾಣೆ: ರೈಲ್ವೆ ರಕ್ಷಣಾ ಪಡೆಯ ಯೋಧರೊಬ್ಬರು ಎಕ್ಸ್​ಪ್ರೆಸ್​ ರೈಲಿಗೆ ಸಿಲುಕುತ್ತಿದ್ದ ವ್ಯಕ್ತಿಯೊಬ್ಬನನ್ನು ರಕ್ಷಣೆ ಮಾಡುವ ಮೂಲಕ ಸಮಯಪ್ರಜ್ಞೆ ಮರೆದಿರುವ ಘಟನೆ ಮಹಾರಾಷ್ಟ್ರದ ಥಾಣೆ ರೈಲ್ವೆ ನಿಲ್ದಾಣದಲ್ಲಿ ಬುಧವಾರ ನಡೆದಿದ್ದು, ಇದಕ್ಕೆ...

VIDEO| ನನ್ನನ್ನು ಯಾರೂ ಮುಟ್ಟಲಾರರು; ಸ್ವಯಂಘೋಷಿತ ದೇವಮಾನವ ನಿತ್ಯಾನಂದ ಹೇಳಿಕೆ

ನವದೆಹಲಿ: "ನನ್ನನ್ನು ಯಾರೂ ಮುಟ್ಟಲಾರರು, ನಿಮಗೊಂದು ಸತ್ಯ ಹೇಳುತ್ತೇನೆ. ನಾನೂ ಪರಮ ಶಿವ, ಅರ್ಥವಾಯ್ತ...?" ಎಂದು ಅತ್ಯಾಚಾರದ ಆರೋಪಿ ನಿತ್ಯಾನಂದ ವಿಡಿಯೋಂದರಲ್ಲಿ ಹೇಳಿದ್ದಾನೆ. ಯಾವ ಕೋರ್ಟ್​ ಕೂಡ ನನ್ನ ಬಗ್ಗೆ ತೀರ್ಪು ನೀಡಲಾರದು. ಯಾರೂ...

VIDEO| ಮದುವೆ ಸಮಾರಂಭದಲ್ಲಿ ಡ್ಯಾನ್ಸ್​ ನಿಲ್ಲಿಸುತ್ತಿದ್ದಂತೆ ಯುವತಿ ಮೇಲೆ ಫೈರಿಂಗ್​:...

ಲಖನೌ: ಮದುವೆ ಸಂಭ್ರಮದಲ್ಲಿ ಡ್ಯಾನ್ಸ್​ ಮಾಡುವುದನ್ನು ನಿಲ್ಲಿಸುತ್ತಿದ್ದಂತೆ ನೃತ್ಯಗಾರ್ತಿಯ ಮುಖಕ್ಕೆ ಫೈರಿಂಗ್​ ಮಾಡಿರುವ ಘಟನೆ ಉತ್ತರ ಪ್ರದೇಶದ ಚಿತ್ರಕೂಟದಲ್ಲಿ ಕಳೆದ ವಾರ ನಡೆದಿರುವುದಾಗಿ ವರದಿಯಾಗಿದೆ. ಘಟನೆಯಲ್ಲಿ ಗಾಯಗೊಂಡ ಯುವತಿಯನ್ನು ಕಾನ್ಪುರ ಆಸ್ಪತ್ರೆಗೆ...

VIDEO: ಎನ್​ಕೌಂಟರ್ ನಡೆಸಿದ ಪೊಲೀಸರನ್ನು ಹೆಗಲ ಮೇಲೆ ಹೊತ್ತು ಸಂಭ್ರಮಿಸಿದ...

ಹೈದರಾಬಾದ್​​: ಪಶುವೈದ್ಯೆ ದಿಶಾ ಅತ್ಯಾಚಾರ ಮತ್ತು ಕೊಲೆ ಆರೋಪಿಗಳನ್ನು ಎನ್​ಕೌಂಟರ್​​ನಲ್ಲಿ ಹತ್ಯೆಗೈದ ಪೊಲೀಸರನ್ನು ಹೈದರಾಬಾದ್​​ ಜನತೆ ಹೆಗಲ ಮೇಲೆ ಹೊತ್ತು ಜಯಘೊಷ ಕೂಗಿ ಸಂಭ್ರಮಿಸಿದ್ದಾರೆ. ಶುಕ್ರವಾರ ಬೆಳಗ್ಗೆ ಆರೋಪಿಗಳ ಎನ್​ಕೌಂಟರ್​ ಸುದ್ಧಿ...

ಉಪಚುನಾವಣೆ ಮತದಾನ ಅಂತ್ಯ: ಮತಗಟ್ಟೆ ಸಮೀಕ್ಷೆಯಲ್ಲಿ ಬಿಜೆಪಿಯದ್ದೇ ಮೇಲುಗೈ

ಬೆಂಗಳೂರು: ರಾಜ್ಯದ 15 ಕ್ಷೇತ್ರಗಳ ಉಪಚುನಾವಣೆಯ ಮತದಾನ ಪ್ರಕ್ರಿಯೆ ಗುರುವಾರ ಸಂಜೆ 6 ಗಂಟೆಗೆ ಪೂರ್ಣಗೊಂಡಿತು. ಸಣ್ಣಪುಟ್ಟ ಗಲಾಟೆಗಳು ಹಾಗೂ ಅಲ್ಲಲ್ಲಿ ಕೆಲ ಇವಿಎಂಗಳ ದೋಷ ಹೊರತುಪಡಿಸಿದರೆ ಉಪಚುನಾವಣೆಯ ಮತದಾನ...

VIDEO| ವಿಕೆಟ್​ ಕಿತ್ತ ಖುಷಿಯಲ್ಲಿ ಕರವಸ್ತ್ರವನ್ನು ಕಡ್ಡಿಯನ್ನಾಗಿಸಿ ಸಂಭ್ರಮ: ಬೌಲರ್​ನ...

ನವದೆಹಲಿ: ಯಾವುದೇ ಆಟವಾಗಿರಲಿ ಆಟಗಾರರಿಗೆ ತಮ್ಮ ಸಂಭ್ರಮದ ಕ್ಷಣ ಸ್ಮರಣೀಯವಾಗಿರುತ್ತದೆ. ಹಲವರು ವಿಭಿನ್ನ ರೀತಿಯಲ್ಲಿ ಸಂಭ್ರಮಿಸುವ ಪ್ರಯತ್ನವನ್ನು ಮೈದಾನದಲ್ಲಿ ಮಾಡುತ್ತಿರುತ್ತಾರೆ. ಇದೀಗ ದಕ್ಷಿಣ ಆಫ್ರಿಕಾ ಬೌಲರ್​ ಒಬ್ಬರು ವಿಕೆಟ್​ ಪಡೆದ...