ಹನಿ ಟ್ರ್ಯಾಪ್‌ಗೆ​ ಬೀಳಿಸಿ ಉದ್ಯಮಿಯಿಂದ ಕೋಟಿಗಟ್ಟಲೆ ಹಣ ಸುಲಿದ ಬಾರ್ ಡ್ಯಾನ್ಸರ್!

ಬೆಂಗಳೂರು: ಚಾಲಾಕಿ ಬಾರ್ ಡ್ಯಾನ್ಸರ್ ರಾಜಸ್ಥಾನ ಮೂಲದ ಉದ್ಯಮಿಯನ್ನು ಹನಿ ಟ್ರ್ಯಾಪ್​ಗೆ ಸಿಲುಕಿಸಿ 2.5 ಕೋಟಿ ರೂ. ಸುಲಿಗೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.

2 ವರ್ಷಗಳಿಂದ ಉದ್ಯಮಿ ಜತೆ ಸ್ನೇಹ ಹೊಂದಿದ್ದ ಬಾರ್ ಡ್ಯಾನ್ಸರ್​ ಬಾಯ್ ಫ್ರೆಂಡ್ ಜತೆ ಸೇರಿ ಪ್ಯ್ಲಾನ್​ ಮಾಡಿ, ಬ್ಲ್ಯಾಕ್​ಮೇಲ್​ ಮಾಡಿ ಹಣ ಸುಲಿಗೆ ಮಾಡಿದ್ದಾಳೆ.

ಹಲವು ಬಾರಿ ನಗದು, ದುಬಾರಿ ಬೆಲೆಯ ವಸ್ತುಗಳನ್ನು ಉದ್ಯಮಿ ಗಿಫ್ಟ್ ನೀಡಿದ್ದರು. ಆಸ್ಟಿನ್ ಟೌನ್​ನಲ್ಲಿದ್ದ ಮನೆಗೆ ಬರುವಂತೆ ಬಾರ್‌ ಡ್ಯಾನ್ಸರ್‌ ಆಹ್ವಾನ ನೀಡಿದ್ದಳು. ಈ ವೇಳೆ ಉದ್ಯಮಿ ಜತೆಗಿನ ಬೆಡ್​ರೂಮ್​ ದೃಶ್ಯಾವಳಿಯನ್ನು ರೆಕಾರ್ಡ್​ ಮಾಡಿಕೊಂಡಿದ್ದಳು. ವಿಡಿಯೋ, ಫೋಟೋಗಳನ್ನು ನಿನ್ನ ಹೆಂಡತಿಗೆ ವಾಟ್ಸ್‌ ಆ್ಯಪ್‌ ಮಾಡುತ್ತೇನೆ ಎಂದು ಬೆದರಿಸಿ ಹಣವನ್ನು ಪಡೆಯುತ್ತಿದ್ದಳು.

ಸುಲಿಗೆಯಿಂದ ಬೇಸತ್ತಿದ್ದ ಉದ್ಯಮಿ ರಾಜಸ್ಥಾನದ MLAಗೆ ಮಾಹಿತಿ ನೀಡಿದ್ದಾರೆ. ಮಹಿಳಾ ಸಹಾಯವಾಣಿ ಕೇಂದ್ರದ ಮೊರೆ ಹೋಗುವಂತೆ MLA ನೀಡಿದ ಸಲಹೆ ಮೇರೆಗೆ ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿರುವ ಮಹಿಳಾ ಸಹಾಯವಾಣಿ ಕೇಂದ್ರಕ್ಕೆ ತೆರಳಿದ್ದಾರೆ. ನಂತರ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ನೀಡುವಂತೆ ನೀಡಿರುವ ಮಹಿಳಾ ಸಹಾಯವಾಣಿ ಅಧ್ಯಕ್ಷೆ ಸೂಚಿಸಿದ್ದಾರೆ. (ದಿಗ್ವಿಜಯ ನ್ಯೂಸ್)