ವಯಸ್ಸಲ್ಲದ ವಯಸ್ಸಿನಲ್ಲಿ ಪ್ರೀತಿ ಮಾಡಲು ಹೋಗಿ ಬಾಲಕ ನೇಣಿಗೆ ಶರಣು

ಬೆಂಗಳೂರು: ವಯಸ್ಸಲ್ಲದ ವಯಸ್ಸಿನಲ್ಲಿ ಪ್ರೀತಿ ಮಾಡಲು ಹೋಗಿ ಬಾಲಕನೊಬ್ಬ ಬೆಂಗಳೂರು ಉತ್ತರ ತಾಲೂಕಿನ ಕೆಂಗನಹಳ್ಳಿ ಗ್ರಾಮದಲ್ಲಿ ಭಾನುವಾರ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಸರ್ಕಾರಿ ಶಾಲೆಯ 8ನೇ ತರಗತಿ ವಿದ್ಯಾರ್ಥಿ ಸಿದ್ದೇಶ್ (13) ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡವ.

ಸಿದ್ದೇಶ್​ನ ಪಾಲಕರಾದ ಆಂಧ್ರ ಮೂಲದ ಸಿದ್ದರಾಜು ಮತ್ತು ಸಣ್ಣಮಾರಕ್ಕ ಜೀವನ ನಿರ್ವಹಣೆ ಮತ್ತು ಮಕ್ಕಳ ಉನ್ನತ ವಿಧ್ಯಾಭ್ಯಾಸಕ್ಕಾಗಿ ಕಳೆದ ಐದಾರು ವರ್ಷಗಳಿಂದ ಕೆಂಗನಹಳ್ಳಿ ಗ್ರಾಮದಲ್ಲಿ ವಾಸವಾಗಿದ್ದರು.

ಸಿದ್ದೇಶ್​ ಬಾಲಕಿಯೊಬ್ಬಳನ್ನು ಪ್ರೀತಿಸುತ್ತಿದ್ದ. ಪ್ರೇಮಿಗಳ ದಿನದಂದು ಪ್ರೇಮ ನಿವೇದನೆ ಮಾಡಿಕೊಳ್ಳಲು ಆತ ಪ್ರೇಮಪತ್ರ ಬರೆದಿಟ್ಟಕೊಂಡಿದ್ದ. ಅದನ್ನು ಕೊಡುವಷ್ಟರಲ್ಲಿ ಶಿಕ್ಷಕರ​ ಕೈಗೆ ಆತ ಸಿಕ್ಕಿಬಿದಿದ್ದ. ಈ ಹಿನ್ನೆಲೆಯಲ್ಲಿ ಪಾಲಕರನ್ನು ಕರೆತರುವಂತೆ ಶಿಕ್ಷಕರು ಆತನಿಗೆ ತಾಕೀತು ಮಾಡಿದ್ದರು. ತಂದೆಗೆ ವಿಷಯ ತಿಳಿದರೆ ಹೊಡೆಯುತ್ತಾರೆ ಎಂಬ ಭಯದಲ್ಲಿ ಗ್ರಾಮದ ಹೊರವಲಯದಲ್ಲಿರುವ ಮಾವಿನ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಸಂಬಂಧ ಮಾದನಾಯಕನಹಳ್ಳಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ದಿಗ್ವಿಜಯ ನ್ಯೂಸ್​)