Friday, 16th November 2018  

Vijayavani

ಜನಾರ್ದನರೆಡ್ಡಿ ಕೇಸ್ ಬೆನ್ನಲ್ಲೇ ಡಿಕೆಶಿಗೆ ಬಂಧನ ಭೀತಿ - ಇಡಿಯಿಂದ 3ನೇ ಬಾರಿ ಇಡಿ ನೋಟಿಸ್ ಜಾರಿ        ಆ್ಯಂಬಿಂಡೆಟ್ ಪ್ರಕರಣದಲ್ಲಿ ಇಡಿ ಹೆಸರಿಗೆ ಆಕ್ಷೇಪ - ಸಿಸಿಬಿ ವಿರುದ್ಧ ಇಡಿ ಜಂಟಿ ನಿರ್ದೇಶಕ ಗರಂ        ಸಚಿವ ಸಂಪುಟ ವಿಸ್ತರಣೆಗೆ ಧನುರ್ಮಾಸದ ಎಫೆಕ್ಟ್ - ಸದ್ಯಕ್ಕಿಲ್ಲ ಆಕಾಂಕ್ಷಿಗಳಿಗೆ ಸಚಿವ ಭಾಗ್ಯ - ಕಾಂಗ್ರೆಸ್ಸಿಗರಲ್ಲಿ ಮತ್ತೆ ಅಸಮಾಧಾನ        ರಾಜ್ಯಾದ್ಯಂತ ಭುಗಿಲೆದ್ದ ರೈತರ ಹೋರಾಟದ ಕಿಚ್ಚು - ರೈತರನ್ನು ಭೇಟಿಯಾಗುವುದಾಗಿ ಹೇಳಿದ ಕುಮಾರಸ್ವಾಮಿ        ಗಾಂಧಿ ಕುಟುಂಬ ಬಿಟ್ಟು ಬೇರೆಯವರು ಎಐಸಿಸಿ 5 ಅಧ್ಯಕ್ಷರಾಗಲಿ - ಕಾಂಗ್ರೆಸ್​ಗೆ ಪ್ರಧಾನಿ ಮೋದಿಯಿಂದ ನೇರ ಸವಾಲು        ತಮಿಳುನಾಡಿನಾದ್ಯಂತ ಗಜ ಚಂಡಮಾರುತದ ಅರ್ಭಟ - 20ಕ್ಕೂ ಹೆಚ್ಚು ಮಂದಿ ದುರ್ಮರಣ - ಅಪಾರ ಆಸ್ತಿ ಪಾಸ್ತಿ, ಬೆಳೆ ನಾಶ       
Breaking News

ದಶಕದಲ್ಲಿ ಸಾಕಷ್ಟು ಬದಲಾದ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರ

Friday, 13.07.2018, 3:04 AM       No Comments

| ವಿಜಯ್ ಮಡಿವಾಳ 

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಅತಿ ಹೆಚ್ಚು ಐಟಿ ಕಂಪನಿಗಳಿರುವ ದೊಡ್ಡ ವಿಧಾನಸಭಾ ಕ್ಷೇತ್ರ ಬೊಮ್ಮನಹಳ್ಳಿ. ಎಚ್​ಎಸ್​ಆರ್ ಲೇಔಟ್, ಬೊಮ್ಮನಹಳ್ಳಿ, ಪುಟ್ಟೇನಹಳ್ಳಿಯಂತಹ ಪ್ರದೇಶಗಳಿರುವ ಕ್ಷೇತ್ರವಿದು. ಅತಿ ಹೆಚ್ಚು ತೆರಿಗೆ ನೀಡುವ ಈ ಪ್ರದೇಶದಲ್ಲಿ ಮೂರನೇ ಬಾರಿಗೆ ಬಿಜೆೆಪಿಯ ಸತೀಶ್ ರೆಡ್ಡಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಕಳೆದ ದಶಕದಲ್ಲಿ ಅನೇಕ ಅಭಿವೃದ್ಧಿ ಕಾರ್ಯ ಕೈಗೊಂಡರೂ ಕ್ಷೇತ್ರವನ್ನು ಮತ್ತಷ್ಟು ಮಾದರಿಯಾಗಿಸಬೇಕು ಎಂಬ ಅಭಿಲಾಷೆಯಲ್ಲಿ ಹತ್ತು ಹಲವು ಯೋಜನೆಗಳನ್ನು ಹೊಂದಿದ್ದಾರೆ. ನೇರವಾಗಿ ಜನರೊಡನೆ ಸಂಪರ್ಕದ ಜತೆಗೆ ಸಾಮಾಜಿಕ ಜಾಲತಾಣಗಳನ್ನೂ ಬಳಸಿ, ಸಾಮಾನ್ಯ ನಾಗರಿಕರಿಂದ ಮೊದಲುಗೊಂಡು ಉದ್ಯಮಿಗಳವರೆಗೆ ಕ್ಷೇತ್ರದ ಎಲ್ಲರಿಗೂ ಅಭಿವೃದ್ಧಿಯ ಫಲ ನೀಡುವ ಕನಸುಗಳನ್ನು ವಿಜಯವಾಣಿ ಜತೆಗೆ ಸತೀಶ್ ರೆಡ್ಡಿ ಹಂಚಿಕೊಂಡಿದ್ದಾರೆ.

# ಮುಂದಿನ 5 ವರ್ಷಗಳಲ್ಲಿ ನಿಮ್ಮ ಕನಸುಗಳೇನು?

ಕಾವೇರಿ ನೀರು, ಸ್ಯಾನಿಟರಿ, ಸುಗಮ ರಸ್ತೆಗಳ ನಿರ್ವಣಕ್ಕೆ ಹೆಚ್ಚು ಆದ್ಯತೆ. ಕ್ಷೇತ್ರದಲ್ಲಿನ ಬಡ ಮಕ್ಕಳು ವಿದ್ಯಾವಂತರಾಗಬೇಕು ಎಂಬುದು ನನ್ನ ಕನಸು. ಈಗಾಗಲೇ ಎಚ್​ಎಸ್​ಆರ್ ಲೇಔಟ್​ನಲ್ಲಿ ಪಿಯು ಮತ್ತು ಡಿಗ್ರಿ ಕಾಲೇಜು ತೆರೆಯಲಾಗಿದೆ. ಶಾಸಕರ ಅನುದಾನದಲ್ಲಿ ಅಂಗನವಾಡಿ ಸೇರಿ ಎಲ್ಲ ಸರ್ಕಾರಿ ಶಾಲೆಗಳನ್ನು ಖಾಸಗಿ ಶಾಲೆಗಳ ಮಾದರಿಯಲ್ಲೇ ಅಭಿವೃದ್ಧಿಪಡಿಸಿ ಗುಣಮಟ್ಟದ ವಿದ್ಯಾಭ್ಯಾಸ ನೀಡುವುದು ನನ್ನ ಗುರಿಯಾಗಿದೆ. ಕ್ಷೇತ್ರದಲ್ಲಿರುವ 9 ಕೆರೆಗಳಲ್ಲಿ ಅಗರ ಕೆರೆಯನ್ನು ಮೈಲ್ಡ್ ಸ್ಟೋನ್ ಮಾದರಿಯಲ್ಲಿ ಅಭಿವೃದ್ಧಿಪಡಿಸಲಾಗಿದೆ. ಉಳಿದ ಕೆರೆಗಳನ್ನೂ ಅಭಿವೃದ್ಧಿ ಪಡಿಸುವ ಯೋಜನೆಯಿದೆ. ಬನ್ನೇರುಘಟ್ಟ ಹಾಗೂ ಹೊಸೂರು ಮುಖ್ಯ ರಸ್ತೆಯಲ್ಲಿ ಮೆಟ್ರೋ ಕಾಮಗಾರಿ ಪೂರ್ಣಗೊಂಡರೆ ಸಾರಿಗೆ ವ್ಯವಸ್ಥೆ ಸುಗಮವಾಗಲಿದೆ. ಬೇಗೂರು ಮುಖ್ಯ ರಸ್ತೆಯನ್ನು 80 ಅಡಿ ರಸ್ತೆಯಾಗಿ ವಿಸ್ತರಿಸಲು ನಮ್ಮ ಒತ್ತಾಯವಿದೆ. ಕಟ್ಟಡ ಮಾಲೀಕರನ್ನು ಖುದ್ದು ಭೇಟಿ ಮಾಡಿ ಮನವೊಲಿಸುತ್ತೇನೆ. ಸರ್ಕಾರ ಟಿಡಿಆರ್ ನೀಡಿದರೆ ಈ ಕಾರ್ಯ ಸಾಕಾರಗೊಳ್ಳುತ್ತದೆ.

# ಹೊಸ ಯೋಜನೆಗಳ ಜಾರಿಗೆ ಹಣ ಹೇಗೆ ಹೊಂದಿಸುವಿರಿ?

ಕೇಂದ್ರ ಸಚಿವ ಅನಂತಕುಮಾರ್ ಹಾಗೂ 8 ಜನ ಪಾಲಿಕೆ ಸದಸ್ಯರ ಸಹಕಾರದಿಂದ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೇವೆ. 10 ವರ್ಷಗಳ ಪರಿಶ್ರಮವನ್ನು ಕ್ಷೇತ್ರದ ಜನತೆ ಪರಿಗಣಿಸಿ ಈ ಬಾರಿಯ ಜಿದ್ದಾಜಿದ್ದಿನ ಚುನಾವಣೆಯಲ್ಲಿ ನನ್ನನ್ನು ಆಶೀರ್ವದಿಸಿ 50 ಸಾವಿರ ಮತಗಳ ಅಂತರದಿಂದ ಗೆಲ್ಲಿಸಿದ್ದಾರೆ ಅವರಿಗೆ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ಬೊಮ್ಮನಹಳ್ಳಿ ಕ್ಷೇತ್ರ ಮಾದರಿ ಕ್ಷೇತ್ರ ಮಾಡುವ ಗುರಿ ನನ್ನದಾಗಿದ್ದು, ಈ ಹಿಂದೆ ಹಲವು ಯೋಜನೆಗಳಿಗೆ ನೀಡಬೇಕಿದ್ದ ಅನುದಾನಕ್ಕೆ ತಡೆ ಹಾಕಿ ತಾರತಮ್ಯ ಮಾಡಿದ್ದರು. ಈ ಬಾರಿಯ ಅನುದಾನದಲ್ಲಿ ತಾರತಮ್ಯ ನಡೆದರೆ ಕ್ಷೇತ್ರದ ಜನತೆಗೆ ಈ ಬಗ್ಗೆ ಅರಿವು ಮೂಡಿಸಿ ತೆರಿಗೆ ಕಟ್ಟುವುದನ್ನು ನಿಲ್ಲಿಸಿ ಹೋರಾಟ ನಡೆಸುತ್ತೇವೆ. ಪ್ರತಿ ವರ್ಷ ಈ ಭಾಗದಿಂದ ಸರ್ಕಾರಕ್ಕೆ 500 ಕೋಟಿ ರೂ. ತೆರಿಗೆ ಕಟ್ಟುತ್ತಿದ್ದೇವೆ. ಹೆಚ್ಚಿನ ಅನುದಾನ ಕೇಳುವುದು ನಮ್ಮ ಹಕ್ಕು. ಸದ್ಯ ಅಧಿಕಾರದಲ್ಲಿರುವ ಸಮ್ಮಿಶ್ರ ಸರ್ಕಾರ ಅತಂತ್ರದಲ್ಲಿರುವುದರಿಂದ ಅವರ ಮೇಲೆಯೂ ನಂಬಿಕೆಯಿಲ್ಲ. ರಾಜ್ಯ ಮತ್ತು ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದರೆ ಹೆಚ್ಚಿನ ಅಭಿವೃದ್ಧಿಯಾಗುತ್ತಿತ್ತು.

# ಸ್ಥಗಿತಗೊಂಡಿರುವ ಈ ಹಿಂದಿನ ಯೋಜನೆಗಳ ಜಾರಿಗೆ ಆದ್ಯತೆ ಕೊಡುವಿರಾ?

ಕ್ಷೇತ್ರದ 10 ವರ್ಷಗಳ ಹಿಂದಿನ ಚಿತ್ರಣಕ್ಕೂ ಈಗಿನದಕ್ಕೂ ಗಮನಿಸಿದರೆ ಸಾಕಷ್ಟು ವ್ಯತ್ಯಾಸವಿದೆ. ಮೊದಲ ಬಾರಿ ಚುನಾವಣೆಗೆ ಸ್ಪರ್ಧಿಸಿದ ಸಮಯದಲ್ಲಿ 2 ಲಕ್ಷ ಮತದಾರರು ಹಾಗೂ 4 ಲಕ್ಷ ಜನರಿದ್ದರು. ಸದ್ಯ 4.5 ಲಕ್ಷ ಮತದಾರರು ಹಾಗೂ 8.5 ಲಕ್ಷ ಜನ ವಾಸವಿದ್ದಾರೆ. ಕಳೆದ 10 ವರ್ಷಗಳಿಂದ ಕ್ಷೇತ್ರ ಸಾಕಷ್ಟು ಬದಲಾವಣೆ ಕಂಡಿದ್ದು, ಅದೇ ಮಾದರಿಯಲ್ಲಿ ಮುಂದುವರಿಸಿಕೊಂಡು ಹೋಗಬೇಕಿದೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ನಗರದಲ್ಲಿ ಮೊದಲ ಬಾರಿಗೆ 350 ಕೋಟಿ ರೂ. ವೆಚ್ಚದಲ್ಲಿ ಸ್ಯಾನಿಟರಿ ಪಂಪಿಂಗ್ ಪದ್ಧತಿಯನ್ನು ಕ್ಷೇತ್ರದಲ್ಲಿ ಪ್ರಾರಂಭಿಸಲಾಗಿದ್ದು, ಕಳೆದ ವಾರವಷ್ಟೇ ಪೂರ್ಣಗೊಂಡಿದೆ.

# ಮಹಿಳೆಯರು, ಮಕ್ಕಳ ರಕ್ಷಣೆಗೆ ಯಾವ ಕ್ರಮಗಳನ್ನು ಕೈಗೊಳ್ಳುವಿರಿ?

ನನ್ನ ಕ್ಷೇತ್ರದಲ್ಲಿ 60 ಸಾವಿರ ಗಾರ್ವೆಂಟ್ ಕಾರ್ವಿುಕರಿದ್ದಾರೆ. ಅದರಲ್ಲೂ ಮಹಿಳೆಯರ ಸಂಖ್ಯೆ ಹೆಚ್ಚಿದೆ. ರಾತ್ರಿ ವೇಳೆ ಕೆಲಸದಿಂದ ತಡವಾಗಿ ಬರುವ ಸಮಯದಲ್ಲಿ ಅಪರಾಧ ಕೃತ್ಯಗಳನ್ನು ನಡೆಸುವವರ ಮೇಲೆ ಕಣ್ಗಾವಲಿಗಾಗಿ 6 ವಾರ್ಡ್​ಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಲಾಗಿದೆ. ಇವುಗಳನ್ನು ಸ್ಥಳೀಯ ಪೊಲೀಸ್ ಠಾಣೆಗೆ ನೇರ ಸಂಪರ್ಕ ಕಲ್ಪಿಸಲಾಗಿದೆ. ಕೆಲವೇ ದಿನಗಳಲ್ಲಿ ಉಳಿದೆರಡು ವಾರ್ಡ್​ನಲ್ಲಿ ಸಿಸಿ ಕ್ಯಾಮರಾ ಅಳವಡಿಕೆ ಕಾರ್ಯ ಮುಕ್ತಾಯವಾಗಲಿದೆ. ಬೊಮ್ಮನಹಳ್ಳಿ, ಬಂಡೇಪಾಳ್ಯ, ಪುಟ್ಟೇನಹಳ್ಳಿಯಲ್ಲಿ 3 ನೂತನ ಪೊಲೀಸ್ ಠಾಣೆಗಳನ್ನು ತೆರೆಯಲಾಗಿದೆ. ಜನರ ನಿರಂತರ ಸೇವೆಗಾಗಿ ವಾಟ್ಸ್​ಆಪ್​ನಲ್ಲಿ 200 ಗ್ರೂಪ್​ಗಳನ್ನು ಮಾಡಲಾಗಿದ್ದು, ತಕ್ಷಣ ಸ್ಪಂದಿಸಲು ನೆರವಾಗುತ್ತಿದೆ. ಫೇಸ್​ಬುಕ್​ನಲ್ಲಿ 1.5 ಲಕ್ಷಕ್ಕೂ ಅಧಿಕ ಮಂದಿ ನನ್ನ ಸಂಪರ್ಕದಲ್ಲಿದ್ದಾರೆ. ಯಾವುದೇ ಸಂದರ್ಭದಲ್ಲೂ ನನ್ನನ್ನು ಸಂರ್ಪಸಬಹುದು. ಎಚ್​ಎಸ್​ಆರ್ ಲೇಔಟ್ ಈಗಾಗಲೇ ಪ್ಲಾಸ್ಟಿಕ್​ವುುಕ್ತವಾಗಿದೆ.

# ರಸ್ತೆಗುಂಡಿ, ಮಳೆ ಅನಾಹುತಗಳ ತಡೆಗೆ ಪರಿಹಾರ ಸೂತ್ರಗಳೇನು?

ಪ್ರತಿ ತಿಂಗಳು ಬಿಬಿಎಂಪಿ ಅಧಿಕಾರಿಗಳ ಸಭೆ ಕರೆದು ಕ್ಷೇತ್ರದಲ್ಲಿ ಸಮಸ್ಯೆಗಳ ಬಗ್ಗೆ ನಿರಂತರವಾಗಿ ಚರ್ಚೆ ನಡೆಸುತ್ತಿದ್ದೇನೆ. ಕೆಲ ದಿನಗಳ ಹಿಂದೆ ನಡೆದ ಸಭೆಯಲ್ಲಿ ಅಧಿಕಾರಿಗಳಿಗೆ ಗುಂಡಿಗಳನ್ನು ಮುಚ್ಚುವುದಕ್ಕೆ ಜು.30ರವರೆಗೆ ಗಡುವು ನೀಡಿದ್ದೇನೆ. ವಾರ್ಡ್​ನ ಸ್ಥಿತಿಗತಿ ಬಗ್ಗೆ ಮಾಹಿತಿ ಪಡೆದಿದ್ದೇನೆ. ಅಲ್ಲದೆ ಖುದ್ದು ಭೇಟಿ ನೀಡಿ ಪರಿಶೀಲಿಸುತ್ತಿದ್ದೇನೆ. ಎಚ್​ಎಸ್​ಆರ್ ಲೇಔಟ್​ನ 4,5 ಮತ್ತು 6ನೇ ಸೆಕ್ಟರ್​ನಲ್ಲಿ 40 ಕೋಟಿ ರೂ. ವೆಚ್ಚದಲ್ಲಿ ನೂತನ ಚರಂಡಿಗಳ ಕಾಮಗಾರಿ ನಡೆಸಲಾಗುತ್ತಿದ್ದು, ಶೇ.80 ಪೂರ್ಣಗೊಂಡಿವೆ.

# ತುರ್ತ ಜಾರಿಗೆ ತರಬೇಕೆಂದಿರುವ ಯೋಜನೆಗಳಾವುವು?

ಕ್ಷೇತ್ರದಲ್ಲಿನ ಕೆಲ ಸ್ಲಂಗಳಲ್ಲಿ ಒಳಚರಂಡಿ ಹಾಗೂ ನೀರಿನ ಸಮಸ್ಯೆಗಳಿಗೆ ಪೂರ್ಣಪ್ರಮಾಣದ ಪರಿಹಾರ ದೊರೆತಿಲ್ಲ. ಈ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ವಿವಿಧ ಯೋಜನೆಗಳಿಗೆ ರೂಪುರೇಷೆ ಸಿದ್ಧವಾಗಿದ್ದು ಶೀಘ್ರ ಜಾರಿಗೆ ತರಲಾಗುವುದು. ಸದ್ಯ ರಾಜ ಕಾಲುವೆಗಳಲ್ಲಿನ ಹೂಳು ತೆಗೆಯುವ ಕಾರ್ಯ ಕೂಡಲೇ ಆಗಬೇಕೆಂದು ಈಗಾಗಲೇ ಅಧಿಕಾರಿಗಳ ಸಭೆ ಕರೆದು ಸೂಚನೆ ನೀಡಿದ್ದೇನೆ.

# ಚುನಾವಣಾ ಪೂರ್ವದಲ್ಲಿ ನೀಡಿರುವ ಭರವಸೆಗಳ ಈಡೇರಿಕೆಗೆ ನಿಮ್ಮ ಆದ್ಯತೆ ಹೇಗೆ?

ಚುನಾವಣೆಗೂ ಮೊದಲೇ ನಮ್ಮ ಕ್ಷೇತ್ರದಲ್ಲಿ ಪ್ರಥಮ ಬಾರಿಗೆ ಗೇಲ್ ಗ್ಯಾಸ್ ಯೋಜನೆ ಜಾರಿಗೆ ತರಲಾಗಿದೆ. 600 ರೂ. ವೆಚ್ಚದ ಗ್ಯಾಸ್​ನ್ನು 450 ರೂ.ಗೆ ಮನೆಮನೆಗೆ ಪೈಪ್​ಲೈನ್ ಮೂಲಕ ಸರಬರಾಜು ಮಾಡುವ ವ್ಯವಸ್ಥೆ ಮಾಡಲಾಗಿದೆ. ಸದ್ಯ ಎಚ್​ಎಸ್​ಆರ್ ಲೇಔಟ್, ಮಂಗಮ್ಮನ ಪಾಳ್ಯ, ಸಿಂಗಸಂದ್ರ ಭಾಗದ ಜನತೆ ಇದರ ಸೌಲಭ್ಯ ಪಡೆಯಲಿದ್ದಾರೆ. ಇದನ್ನು ಕ್ಷೇತ್ರಾದ್ಯಂತ ವಿಸ್ತರಣೆ ಮಾಡುವ ಉದ್ದೇಶವಿದೆ.

Leave a Reply

Your email address will not be published. Required fields are marked *

Back To Top