ತುರ್ತು ಸಮಯದಲ್ಲಿ ಉಚಿತ ಆಟೋ ಸೇವೆ: ಚಾಲಕ ಮಹದೇವ್​ರ ಮಾನವೀಯ ಕಾರ್ಯಕ್ಕೆ ಸಲಾಂ

ಬೆಂಗಳೂರು: ಭಾರತ್​ ಬಂದ್​ ಹಿನ್ನೆಲೆಯಲ್ಲಿ ನಗರದೆಲ್ಲಡೆ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿದ್ದು, ಇಂತಹ ತುರ್ತು ಸಮಯದಲ್ಲಿ ರೋಗಿಗಳಿಗೆ, ಅಂಗವಿಕಲರಿಗೆ ಹಾಗೂ ಮಹಿಳೆಯರಿಗೆ ಉಚಿತ ಸೇವೆ ನೀಡುವ ಮೂಲಕ ಆಟೋ ಚಾಲಕನೊಬ್ಬ ಮಾನವಿಯತೆ ಮೆರೆದಿದ್ದಾರೆ.

ಚಾಲಕ ಮಹದೇವರಿಂದ ನಗರದಲ್ಲಿ ಉಚಿತ ಆಟೋ ಸೇವೆ ದೊರೆಯುತ್ತಿದ್ದು, ಉಚಿತ ಸೇವೆ ಎಂಬ ನಾಮಫಲಕವನ್ನು ಹಾಕಿಕೊಂಡು ವಿಕ್ಟೋರಿಯಾ, ಮೋದಿ ಆಸ್ಪತ್ರೆ ಹಾಗೂ ಇಎಸ್​ಐ ಸೇರಿದಂತೆ ಹಲವು ಆಸ್ಪತ್ರೆಗಳಿಗೆ ಪ್ರದಕ್ಷಿಣೆ ಹಾಕುತ್ತಿದ್ದಾರೆ. 50 ಕಿ.ಮೀ ವ್ಯಾಪ್ತಿ ಒಳಗೆ ಉಚಿತ ಸೇವೆ ನೀಡುತ್ತಿದ್ದಾರೆ.

ಬಂದ್​ನಿಂದ ಯಾರಿಗೂ ತೊಂದರೆಯಾಗಬಾರದು ಎಂದು ಬಂದ್ ಸಮಯ ಬಂದಾಗಲೆಲ್ಲ ಮಹದೇವ್​ ಅವರು ಉಚಿತ ಆಟೋ ಸೇವೆ ನೀಡುತ್ತಾರಂತೆ. ಇವರ ಈ ಮಾನವೀಯ ಕಾರ್ಯಕ್ಕೆ ಎಲ್ಲರೂ ಅಭಿನಂದನೆಗಳನ್ನು ಸಲ್ಲಿಸಲೇಬೇಕು. (ದಿಗ್ವಿಜಯ ನ್ಯೂಸ್)