10 ರೂ. ಟೀ ಕುಡಿಯಲು ಹೋಗಿ 15 ಲಕ್ಷ ರೂ. ಕಳೆದುಕೊಂಡ ಬೆಸ್ಕಾಂ ಸಿಬ್ಬಂದಿ

ಬೆಂಗಳೂರು: ಬೆಸ್ಕಾಂ ಸಿಬ್ಬಂದಿ ಹತ್ತು ರೂಪಾಯಿ ಟೀ ಕುಡಿಯಲು ಹೋಗಿ ಹದಿನೈದು ಲಕ್ಷ ರೂಪಾಯಿಗಳನ್ನು ಬುಧವಾರ ಕಳೆದುಕೊಂಡಿದ್ದಾರೆ.

ಹೌದು, ಆನೆಪಾಳ್ಯದ ಬೆಸ್ಕಾಂ ಕಚೇರಿಯಲ್ಲಿ ಅಧಿಕಾರಿಗಳು ಹಣ ಸಂಗ್ರಹ ಮಾಡಿ ಕಬೋರ್ಡ್​ನಲ್ಲಿ ಇಟ್ಟಿದ್ದರು. ಈ ವೇಳೆ ಟೀ ಕುಡಿಯಲು ಹೊರಗಡೆ ಹೋಗಿದ್ದ ಅಧಿಕಾರಿಗಳು ವಾಪಸು ಬಂದು ನೋಡುವಷ್ಟರಲ್ಲಿ ಖದೀಮರು ಹಣ ಎಗರಿಸಿಕೊಂಡು ನಾಪತ್ತೆಯಾಗಿದ್ದಾರೆ.

ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ಆಗಮಿಸಿದ ಅಶೋಕನಗರ ಪೊಲೀಸರು ಪರಿಶೀಲನೆ ನೆಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಗಳ ಪತ್ತೆಗಾಗಿ ಬಲೆ ಬೀಸಿದ್ದಾರೆ. (ದಿಗ್ವಿಜಯ ನ್ಯೂಸ್​)

Leave a Reply

Your email address will not be published. Required fields are marked *