ಪ್ಯಾಂಟ್​ ಬಿಚ್ತೀನಿ ಎಂದು ಮಹಿಳೆಯರ ಮುಂದೆ ಆಟೋ ಚಾಲಕನ ಅಸಭ್ಯ ವರ್ತನೆ

ಬೆಂಗಳೂರು: ಆಟೋ ಚಾಲಕನೊಬ್ಬ ಮಹಿಳೆಯರ ಮುಂದೆಯೇ ಪ್ಯಾಂಟ್ ಬಿಚ್ಚುತ್ತೇನೆ ಎಂದು ಅಸಭ್ಯವಾಗಿ ವರ್ತಿಸಿರುವ ಘಟನೆ ಭಾನುವಾರ ಸಂಜೆ 5 ಗಂಟೆ ಸಮಯದಲ್ಲಿ ಗರುಡಾ ಮಾಲ್ ಬಳಿ ನಡೆದಿದೆ.

ಮಹಿಳೆಯರಿಬ್ಬರು ಕಾಫಿ ಕುಡಿಯುತ್ತಿದ್ದಾಗ ಅವಾಚ್ಯ ಶಬ್ದಗಳಿಂದ ನಿಂದಿಸಿರುವ ಚಾಲಕ, ಸಂತ್ರಸ್ತ ಮಹಿಳೆಯ ಜೊತೆ ಅಸಭ್ಯವಾಗಿ ವರ್ತಿಸಿದ್ದಾನೆ. ಮೊದಲಿಗೆ ಮಹಿಳೆಯನ್ನು ಗುರಾಯಿಸಿಕೊಂಡು ನಿಂತಿದ್ದ ಚಾಲಕನನ್ನು ಕಡೆ ನೋಡಿ ಮಹಿಳೆ ಬೈದಿದ್ದಳು.

ಯಾಕೆ ನನ್ನನ್ನೇ ನೋಡುತ್ತಿದ್ದೀರಿ? ನಿಮ್ಮ ಕೆಲಸ ಮಾಡಿ ಎಂದು ಮಹಿಳೆ ಬುದ್ಧಿವಾದ ಹೇಳಿದ್ದಳು. ಆದರೆ, ಆಟೋ ಚಾಲಕ ನನ್ನಿಷ್ಟ ನಾನು ಗುರಿಯಾಸ್ತಿನಿ, ಪ್ಯಾಂಟ್​ನಾದ್ರು ಬಿಚ್ಚುತೇನೆ ಎಂದು ಅಸಭ್ಯವಾಗಿ ಮಾತನಾಡಿದ್ದ. ಇದರಿಂದ ಸಿಟ್ಟಿಗೆದ್ದ ಮಹಿಳೆ ವಿಡಿಯೋ ಮಾಡಲು ಮುಂದಾದಾಗ ಚಾಲಕ ತನ್ನ ದುರ್ವರ್ತನೆಯನ್ನ ನಿಲ್ಲಿಸಿದ್ದ.

ಬೆಂಗಳೂರು ಸಿಟಿ ಪೊಲೀಸ್ ಫೇಸ್ ಬುಕ್ ಪೇಜ್​ನಲ್ಲಿ ವಿಡಿಯೋವನ್ನು ಟ್ಯಾಗ್ ಮಾಡಲಾಗಿದ್ದು, ಬೆಂಗಳೂರು ಪೊಲೀಸರೇ ಬೇಗ ಎಚ್ಚೆತ್ತುಕೊಳ್ಳಿ ಇದಕ್ಕೆ ಸರಿಯಾದ ಕ್ರಮ ತೆಗೆದುಕೊಳ್ಳಿ ಎಂದ ಮಹಿಳೆ ವಿನಂತಿಸಿಕೊಂಡಿದ್ದಾಳೆ. (ದಿಗ್ವಿಜಯ ನ್ಯೂಸ್​)