ಮಹಿಳೆ ಎದುರು ಪ್ಯಾಂಟ್​ ಬಿಚ್ತೀನಿ ಎಂದಿದ್ದ ಆಟೋ‌ ಚಾಲಕನ ಬಂಧನ

ಬೆಂಗಳೂರು: ಪ್ಯಾಂಟ್​ ಬಿಚ್ಚುತ್ತೇನೆ ಎಂದು ಹೇಳಿ ಮಹಿಳೆ ಜತೆ ಅಸಭ್ಯವಾಗಿ ವರ್ತಿಸಿದ್ದ ಆಟೋ ಚಾಲಕನನ್ನು ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.

ಬಂಧಿತ ಆರೋಪಿ ಸಯ್ಯದ್ ಮುಹೀಬ್ ಸೆ.30ರಂದು ಮಹಿಳೆಯ ಜತೆ ಅಸಭ್ಯವಾಗಿ ವರ್ತಿಸಿದ್ದ. ಮಹಿಳೆ ಈ ವಿಡಿಯೋ ಮಾಡಿ ಪೊಲೀಸರ ಫೇಸ್​ಬುಕ್ ಖಾತೆಗೆ ಟ್ಯಾಗ್ ಮಾಡಿದ್ದರು. ಪ್ರಕರಣ ಬೆಳಕಿಗೆ ಬಂದ ಮೇಲೆ ಅಶೋಕ್ ನಗರ ಠಾಣೆಯಲ್ಲಿ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದ್ದರು.

ಆರೋಪಿಯನ್ನು ಬಂಧಿಸುವುದರ ಜತೆ ಪೊಲೀಸರು ಆತನ ಆಟೋವನ್ನು ಜಪ್ತಿ ಮಾಡಿದ್ದಾರೆ. (ದಿಗ್ವಿಜಯ ನ್ಯೂಸ್​)