ಕೇಂದ್ರ ಸಚಿವ ಅನಂತ್‌ಕುಮಾರ್‌ ಹೆಗಡೆ ಮುಖ್ಯಮಂತ್ರಿಯಂತೆ!?

ಬೆಂಗಳೂರು: ಕೇಂದ್ರ ಕೌಶಲ್ಯಾಭಿವೃದ್ಧಿ ಇಲಾಖೆಯಿಂದ ಆಯೋಜಿಸಿದ್ದ ಉದ್ಯೋಗ ಮೇಳ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಅನಂತ್‌ ಕುಮಾರ್‌ ಹೆಗಡೆ ಅವರನ್ನು ನಿರೂಪಕಿ ಬಾಯ್ತಪ್ಪಿ ಎರಡೆರಡೂ ಬಾರಿ ಮುಖ್ಯಮಂತ್ರಿ ಎಂದು ಕರೆದಿದ್ದಾರೆ.

ಬೆಂಗಳೂರಿನ ಖಾಸಗಿ ಹೋಟೆಲ್​ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಚಿವರನ್ನು ವೇದಿಕೆಗೆ ಸ್ವಾಗತಿಸುವ ವೇಳೆ ಚೀಫ್‌ ಮಿನಿಸ್ಟರ್‌ ಅನಂತ್‌ ಕುಮಾರ್‌ ಹೆಗಡೆ ಎಂದು ಸಂಬೋಧಿಸಿದ್ದಾರೆ. ಇದರಿಂದ ಕ್ಷಣಕಾಲ ತಬ್ಬಿಬ್ಬಾದ ಕೇಂದ್ರ ಸಚಿವರನ್ನು ಮತ್ತೊಮ್ಮೆಯೂ ಚೀಫ್‌ ಮಿನಿಸ್ಟರ್‌ ಎಂದೇ ಕಿರುತೆರೆ ನಟಿ ಮತ್ತು ನಿರೂಪಕಿ ಸಂಧ್ಯಾ ಕರೆದು ಎಡವಟ್ಟು ಮಾಡಿದ್ದಾರೆ.

ಬಳಿಕ ಕ್ಷಮೆ ಕೋರಿ ನಿರೂಪಕಿ ಸಂಧ್ಯಾ ತಪ್ಪು ಸರಿಪಡಿಸಿಕೊಂಡಿದ್ದಾರೆ. ಗ್ರಾಮೀಣ ಯುವ ಸಮೂಹಕ್ಕಾಗಿ ಆಯೋಜಿಸಲಾಗಿದ್ದ ಉದ್ಯೋಗ ಮೇಳಕ್ಕೆ ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಚಾಲನೆ ನೀಡಿದರು.

ಕಾರ್ಯಕ್ರಮದಲ್ಲಿ ಕ್ವಿಕರ್ ಸಂಸ್ಥೆಯ ಸಿಎಂಒ ವಿನೀತ್ ಸೇಗಲ್, ಬಿಗ್ ಬ್ಯಾಸ್ಕೆಟ್ ಹೆಡ್.ಹೆಚ್.ಆರ್. ಹರಿ, ಒನ್ ಬ್ರಿಡ್ಜ್ ಸಿಇಒ ಮದನ್ ಪದಕಿ ಸೇರಿದಂತೆ ಹಲವರು ಭಾಗಿಯಾಗಿದ್ದರು. (ದಿಗ್ವಿಜಯ ನ್ಯೂಸ್‌)

Leave a Reply

Your email address will not be published. Required fields are marked *