Friday, 16th November 2018  

Vijayavani

ಕೋರ್​​ ಕಮಿಟಿ ಸ್ಥಾನಕ್ಕಾಗಿ ಬಿಜೆಪಿಯಲ್ಲಿ ಫೈಟ್- ಶೋಭಾಗೆ ಸ್ಥಾನ ನೀಡಲು ಹೆಗಡೆ ಜತೆ ಬಿಎಸ್​ವೈ ಪೈಪೋಟಿ        ಮೈಸೂರು ಪಾಲಿಕೆ ಮೇಯರ್​, ಉಪ ಮೇಯರ್​ ಸ್ಥಾನಕ್ಕಿಂದು ಚುನಾವಣೆ: ಮೇಯರ್​ ಗಾದಿಗಾಗಿ ದೋಸ್ತಿಗಳ ಫೈಟ್​        ಅಯ್ಯಪ್ಪನ ದರ್ಶನಕ್ಕಾಗಿ ಕೇರಳದ ಕೊಚ್ಚಿಗೆ ಬಂದಿಳಿದ ಹೋರಾಟಗಾರ್ತಿ ತೃಪ್ತಿ ದೇಸಾಯಿಗೆ ಪ್ರತಿಭಟನೆ ಬಿಸಿ        ಗಜ ಚಂಡಮಾರುತ ಅಬ್ಬರ: ತಮಿಳುನಾಡಿನ ಕರಾವಳಿವಳಿಯಲ್ಲಿ ಜನ ತತ್ತರ, ರಾಜ್ಯದ ದಕ್ಷಿಣ ಒಳನಾಡಿನಲ್ಲೂ ಮಳೆ ಸಾಧ್ಯತೆ        ಕಬ್ಬಿಗೆ ಸಮರ್ಪಕ ಬೆಲೆ ನೀಡುವಂತೆ ಆಗ್ರಹಿಸಿ ಮುಧೋಳದಲ್ಲಿ ರೈತರ ಬೃಹತ್​ ಹೋರಾಟ       
Breaking News

ಎಳನೀರಲ್ಲಿ ಮತ್ತು ಬರುವ ಔಷಧ ಬೆರೆಸಿ ಪ್ರಿಯಕರನಿಂದ ಲೈಂಗಿಕ ದೌರ್ಜನ್ಯ?

Sunday, 21.01.2018, 10:02 AM       No Comments

ಬೆಂಗಳೂರು: ಟ್ರಿಪ್​ಗೆಂದು ಕರೆದೊಯ್ದು ಎಳನೀರಿನಲ್ಲಿ ಮತ್ತು ಬರುವ ಔಷಧ ಬೆರೆಸಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆಂದು ಯುವತಿಯೊಬ್ಬಳು ಪ್ರಿಯಕರನ ವಿರುದ್ಧ ದೂರು ನೀಡಿರುವ ಘಟನೆ ಭಾನುವಾರ ನಡೆದಿದೆ.

ಆರೋಪಿ ದಿನೇಶ್​ ವಿರುದ್ಧ ಎಚ್​ಎಎಲ್​ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ದೂರಿನಲ್ಲಿ ಉಲ್ಲೇಖಿಸಿರುವಂತೆ ಪ್ರಿಯಕರ ದಿನೇಶ್​ ಯುವತಿಯನ್ನು ಟ್ರಿಪ್​ಗೆಂದು ಮುರುಡೇಶ್ವರಕ್ಕೆ ಕರೆದೊಯ್ದಿದ್ದ. ನಂತರ ರಾತ್ರಿ ಬಸ್​ ಮಿಸ್​ ಆಯ್ತು ಅಂತ ಅಲ್ಲೇ ಉಳಿಸಿಕೊಂಡು ಎಳನೀರಿನಲ್ಲಿ ಮತ್ತು ಬರುವ ಔಷಧಿ ಹಾಕಿ ದೌರ್ಜನ್ಯ ನಡೆಸಿದ್ದಾನೆ.

ವಿವಾಹವಾಗುವುದಾಗಿ ಭರವಸೆ ನೀಡಿದ್ದ ಆತ ಸ್ವಲ್ಪ ದಿನದ ಬಳಿಕ ಬೇರೆ ಯುವತಿಯೊಂದಿಗೆ ವಿವಾಹಕ್ಕೆ ಸಿದ್ಧತೆ ಮಾಡಿಕೊಂಡಿದ್ದಾನೆ. ಇದನ್ನು ಪ್ರಶ್ನಿಸಿದ್ದಕ್ಕೆ ಯುವತಿಗೆ ಬಣ್ಣದ ವಿಷಯ ಹೇಳಿ ನಿರಾಕರಿಸಿದ್ದಾನೆ. ನಮ್ಮ ಕುಟುಂಬದವರಿಗೆ ಕಪ್ಪು ಬಣ್ಣ ಅಂದರೆ ಅಸಹ್ಯ, ನನ್ನ ಅಮ್ಮ ಕಪ್ಪು ಬಣ್ಣ ಅಂದರೆ ಟಚ್​ ಕೂಡ ಮಾಡಲ್ಲ ಎಂದಿದ್ದಾನೆ.

ನಂತರ ಮಾತುಕತೆಗೆಂದು ಮತ್ತೆ ಮಡಿಕೇರಿಗೆ ಕರೆದೊಯ್ದು ದೌರ್ಜನ್ಯ ಎಸಗಿದ್ದಾನೆ. ಸುಮ್ಮನಿರದಿದ್ರೆ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕ್ತೀನಿ, ಅಪ್ಪ ಅಮ್ಮನಿಗೆ ಈ ವಿಡಿಯೋವನ್ನು ಕಳುಹಿಸುತ್ತೇನೆಂದು ಬೆದರಿಕೆ ಹಾಕಿದ್ದಾನೆ.

ಈ ಬಗ್ಗೆ ದೂರು ದಾಖಲಿಸಿಕೊಂಡಿರುವ ಎಚ್​ಎಎಲ್​ ಪೊಲೀಸರು ಮಹಜರ್​ ಮಾಡಿ ಪ್ರಕರಣವನ್ನು ಕೊಡಗು ಜಿಲ್ಲೆಗೆ ವರ್ಗಾಯಿಸಿದ್ದಾರೆ. (ದಿಗ್ವಿಜಯ ನ್ಯೂಸ್​​)

Leave a Reply

Your email address will not be published. Required fields are marked *

Back To Top