More

  ಬೆಂಗಳೂರು ಕೃಷಿ ವಿವಿ ಘಟಿಕೋತ್ಸವ: 10 ಚಿನ್ನದ ಪದಕ ವಿದ್ಯಾರ್ಥಿನಿ

  ಬೆಂಗಳೂರು ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ 58ನೇ ಘಟಿಕೋತ್ಸವು ಮಾ.4ರಂದು ನಡೆಯುತ್ತಿದ್ದು, 156 ಚಿನ್ನದ ಪದಕ, 83 ಪಿಎಚ್.ಡಿ. 291 ಸ್ನಾತಕೋತ್ತರ ಮತ್ತು 870 ಸ್ನಾತಕ ಪದವಿ ಸೇರಿ ಒಟ್ಟು 1,244 ಪದವಿಗಳನ್ನು ಹಾಗೂ ಹಾಸನ ಜಿಲ್ಲೆ ಅರಕಲಗೂಡು ತಾ. ದೊಡ್ಡಮಗೆ ಗ್ರಾಮದ ಪ್ರಗತಿಪರ ರೈತ ಎಂ.ಸಿ. ರಂಗಸ್ವಾಮಿ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗುತ್ತಿದೆ.

  ಪದವಿ ಮತ್ತು ಚಿನ್ನದ ಪದಕ ಪಡೆಯುವಲ್ಲಿ ವಿದ್ಯಾರ್ಥಿನಿಯರೇ ಮುಂದಿದ್ದು, ಚಿನ್ನದ ಪದಕ ಪಡೆದ 63 ಮಂದಿಯಲ್ಲಿ 49 ವಿದ್ಯಾರ್ಥಿನಿಯರು 130 ಚಿನ್ನದ ಪದಕ ಹಾಗೂ ಒಟ್ಟು ಪದವಿಯಲ್ಲಿ 630 ಮಂದಿ ಮಹಿಳೆಯರಿದ್ದಾರೆ.

  ಈ ಕುರಿತು ಶನಿವಾರ ವಿಶ್ವವಿದ್ಯಾಲಯದ ಕುಲಪತಿ ಡಾ. ಎಸ್.ವಿ. ಸುರೇಶ್ ಪ್ರಸ್‌ಕ್ಲಬ್‌ನಲ್ಲಿ ಪತ್ರಿಕಾಗೋಷ್ಟಿಯಲ್ಲಿ ಅವರು ಮಾತನಾಡಿದರು.

  ಮಾ.4ರಂದು ಬೆಳಗ್ಗೆ 11.30ಕ್ಕೆ ಜಿಕೆವಿಕೆ ಆವರಣದಲ್ಲಿರುವ ಡಾ. ಬಾಬು ರಾಜೇಂದ್ರ ಪ್ರಸಾದ್ ಅಂತಾರಾಷ್ಟ್ರೀಯ ಸಮಾವೇಶ ಕೇಂದ್ರದಲ್ಲಿ ಕಾರ್ಯಕ್ರಮ ನಡೆಯಲಿದೆ. ವಿಶ್ವವಿದ್ಯಾಲಯದ ಕುಲಾಧಿಪತಿಗಳೂ ಆಗಿರುವ ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್ ಅಧ್ಯಕ್ಷತೆ ವಹಿಸಲಿದ್ದಾರೆ. ಕೇಂದ್ರ ಕೃಷಿ ಸಂಶೋಧನೆ ಮತ್ತು ಶಿಕ್ಷಣ ಇಲಾಖೆ ಕಾರ್ಯದರ್ಶಿ ಡಾ. ಹಿಮಾಂಶು ಪಾಠಕ್ ಘಟಿಕೋತ್ಸವ ಭಾಷಣ ಮಾಡಲಿದ್ದಾರೆ. ಕೃಷಿ ಎನ್. ಚಲುವರಾಯಸ್ವಾಮಿ ಉಪಸ್ಥಿತರಿರುವರು ಎಂದು ಮಾಹಿತಿ ನೀಡಿದರು.

  ಪತ್ರಿಕಾಗೋಷ್ಠಿಯಲ್ಲಿ ವಿವಿ ಕುಲಸಚಿವ ಡಾ. ಬಸವೇಗೌಡ ಮತ್ತು ಶಿಕ್ಷಣ ನಿರ್ದೇಶಕ ಡಾ. ಕೆ.ಸಿ. ನಾರಾಯಣಸ್ವಾಮಿ ಸೇರಿ ಹಲವರು ಉಪಸ್ಥಿತರಿದ್ದರು.

  ಚಿನ್ನದ ಪದಕ ವಿಜೇತರು

  ಪಿಎಚ್.ಡಿ. ವಿಭಾಗ:

  ಪಿಎಚ್.ಡಿ. ವಿಭಾಗದಲ್ಲಿ ಜಿಕೆವಿಕೆಯ ಕೃಷಿ ವಿಸ್ತರಣೆ ವಿಭಾಗದ ಸಿ.ಎಂ. ರಾಜೇಶ್ ಕೃಷಿ ವಿವಿಯ ಒಂದು ಚಿನ್ನದ ಪದಕ, ದಾನಿಗಳ 5 ಚಿನ್ನದ ಪದಕ ಪಡೆದಿದ್ದಾರೆ. ಅನುವಂಶೀಯ ಮತ್ತು ಸಸ್ಯತಳಿ ಅಭಿವೃದ್ಧಿಶಾಸ ವಿಭಾಗದ ಕಲ್ಪನಾ ಪುಂಡಲೀಕ ಮುಗಳಿ ಅವರು ಕೃಷಿ ವಿವಿಯ 1 ಮತ್ತು ದಾನಿಗಳ 2 ಚಿನ್ನದ ಪದಕ ಪಡೆದಿದ್ದಾರೆ. ಆಹಾರ ವಿಜ್ಞಾನ ಮತ್ತು ಪೌಷ್ಟಿಕತೆ ವಿಭಾಗದ ವಿ. ನಿಹಾರಿಕಾ ಅವರು ತಲಾ ಒಂದು ಕೃಷಿ ವಿವಿ ಮತ್ತು ದಾನಿಗಳ ಚಿನ್ನದ ಪದಕ ಪಡೆದಿದ್ದಾರೆ ಎಂದರು.

  ಸ್ನಾತಕೋತ್ತರವಿಭಾಗ:

  ಜಿಕೆವಿಕೆಯ ಕೃಷಿ ಅರ್ಥಶಾಸ ವಿಭಾಗದ ಶ್ರೇಯಾ ಜಿ ಹಂಜಿ, ಕೃಷಿ ವಿವಿಯ 1 ಮತ್ತು ದಾನಿಗಳ 6 ಚಿನ್ನದ ಪದಕ ಪಡೆದಿದ್ದಾರೆ. ಬೇಸಾಯ ಸದ ಅರುಣ್‌ಕುಮಾರ್ ಎಂ.ಆರ್. ಕೃಷಿ ವಿವಿ ಒಂದು ಮತ್ತು ದಾನಿಗಳ 2 ಚಿನ್ನದ ಪದಕಗಳನ್ನು ಪಡೆದಿದ್ದಾರೆ.

  ಸ್ನಾತಕ ಪದವಿ (ಬಿಸ್ಸಿ ಆನರ್ಸ್-ಕೃಷಿ ):ಬೆಂಗಳೂರು ಕೃಷಿ ವಿವಿ ಘಟಿಕೋತ್ಸವ: 10 ಚಿನ್ನದ ಪದಕ ವಿದ್ಯಾರ್ಥಿನಿ

  ಶ್ರೇಹಶ್ರೀ ಎಸ್ ಅವರು ವಿವಿ 1 ಮತ್ತು ದಾನಿಗಳ 9 ಚಿನ್ನದ ಪದಕ ಪಡೆದಿದ್ದಾರೆ. ಅಪರ್ಣ ಟಿ.ಎಂ. ಅವರು ಕ್ಯಾಂಪಸ್‌ನ 1 ಮತ್ತು ದಾನಿಗಳ 7,ನಂದಿತ ಎಸ್.- ದಾನಿಗಳ 5 ಚಿನ್ನದ ಪದಕ ಪಡೆದಿದ್ದಾರೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts