ಮದುವೆಯಾಗುವುದಾಗಿ ನಂಬಿಸಿ 25ರ ಯುವಕನಿಂದ 32ರ ಮಹಿಳೆಗೆ ಲೈಂಗಿಕ ಶೋಷಣೆ

ಬೆಂಗಳೂರು: ಟೆಕ್ಕಿಯೊಬ್ಬಳನ್ನು ಮದುವೆಯಾಗುವುದಾಗಿ ಮ್ಯಾಟ್ರಿಮೊನಿ ವೆಬ್​ಸೈಟ್​ನಲ್ಲಿ ಪರಿಚಯ ಮಾಡಿಕೊಂಡ ಯುವಕ ಲೈಂಗಿಕ ದೌರ್ಜನ್ಯ ನಡೆಸಿ, ವಂಚಿಸಿರುವ ಘಟನೆ ಮಾರತ್ ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ.

ನಾಗಾರ್ಜುನ(25) ವಂಚಕ. ಈತ ತೆಲಂಗಾಣ ಮೂಲದ ಟೆಕ್ಕಿಯಾಗಿದ್ದು, ಕಳೆದ ಹಲವು ವರ್ಷಗಳಿಂದ ಬೆಂಗಳೂರಿನ ಪ್ರತಿಷ್ಠಿತ ಸಾಫ್ಟ್‌ವೇರ್ ಕಂಪನಿಯಲ್ಲಿ ಕೆಲಸ ಮಾಡುತಿದ್ದ. ಹೈದ್ರಾಬಾದ್ ಮೂಲದ ಟೆಕ್ಕಿಯೊಬ್ಬಳನ್ನು ಮ್ಯಾಟ್ರಿಮೋನಿ ಸೈಟ್ ಮೂಲಕ ಪರಿಚಯ ಮಾಡಿಕೊಂಡಿದ್ದ. ನಂತರ ಪ್ರೀತಿಸುತ್ತಿದ್ದೀನಿ, ನಿನ್ನನ್ನೇ ಮದುವೆಯಾಗುತ್ತೆನೆ ಎಂದು ನಂಬಿಸಿದ್ದ.

ನಂತರದ ದಿನಗಳಲ್ಲಿ ಭೇಟಿ ಮಾಡಬೇಕು ಎಂದು ಹೋಟೆಲ್ ಒಂದಕ್ಕೆ ಕರೆಸಿಕೊಂಡು ಬಲವಂತವಾಗಿ ಲೈಂಗಿಕ ಕ್ರಿಯೆ ನಡೆಸಿದ್ದ. ಒಮ್ಮೆ ಹೈದರಾಬಾದ್​ನಲ್ಲಿರುವ ಮಹಿಳಾ ಟೆಕ್ಕಿ ಮನೆಗೆ ಯಾರು ಇಲ್ಲದ ವೇಳೆ ತೆರಳಿ ಬಲವಂತವಾಗಿ ಬಳಸಿಕೊಂಡಿದ್ದ. ಅಲ್ಲದೆ, ವಿಡಿಯೋ ಕೂಡ ಮಾಡಿದ್ದ.

ನಂತರ ಮಹಿಳಾ ಟೆಕ್ಕಿಯನ್ನು ನಿರ್ಲಕ್ಷ್ಯ ಮಾಡುತ್ತಿದ್ದ. ಅಲ್ಲದೆ, ಮದುವೆಯಾಗುವುದಿಲ್ಲಾ ಎಂದು ಹೇಳಿದ್ದ. ಈ ಸಂಬಂಧ ಮಾರತ್ ಹಳ್ಳಿ ಪೊಲೀಸ್ ಠಾಣೆಗೆ ಜನವರಿ 16 ರಂದು ಮಹಿಳೆ ದೂರು ನೀಡಿದ್ದಳು. ತಲೆಮರೆಸಿಕೊಂಡಿದ್ದ ಅರೋಪಿ ನಾಗಾರ್ಜುನನನ್ನು ಫೆಬ್ರವರಿ 5ರಂದು ಬಂಧಿಸಲಾಗಿದೆ. (ದಿಗ್ವಿಜಯ ನ್ಯೂಸ್​) 

Leave a Reply

Your email address will not be published. Required fields are marked *