More

    ಪ್ರೊ ಕಬಡ್ಡಿ ಲೀಗ್: ಬೆಂಗಾಲ್ ಎದುರು ಹರಿಯಾಣ ಜಯಭೇರಿ

    ಬೆಂಗಳೂರು: ರೈಡರ್ ಮಂಜೀತ್ (19 ಅಂಕ) ತೋರಿದ ಅಮೋಘ ನಿರ್ವಹಣೆಯ ಬಲದಿಂದ ಹರಿಯಾಣ ಸ್ಟೀಲರ್ ತಂಡ ಪ್ರೊ ಕಬಡ್ಡಿ ಲೀಗ್ 9ನೇ ಆವೃತ್ತಿಯ ತನ್ನ ಮೊದಲ ಪಂದ್ಯದಲ್ಲಿ ಮಾಜಿ ಚಾಂಪಿಯನ್ ಬೆಂಗಾಲ್ ವಾರಿಯರ್ ವಿರುದ್ಧ 41-33 ಅಂಕಗಳಿಂದ ಗೆದ್ದು ಶುಭಾರಂಭ ಕಂಡಿತು. ಟೂರ್ನಿಯ ಎರಡನೇ ದಿನದ ಮೊದಲ ಎರಡು ಪಂದ್ಯಗಳು ರೋಚಕ ಟೈನಲ್ಲಿ ಅಂತ್ಯಗೊಂಡವು.

    ಶ್ರೀ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಶನಿವಾರದ 3ನೇ ಹಾಗೂ ಅಂತಿಮ ಪಂದ್ಯದಲ್ಲಿ ಹರಿಯಾಣ ಮೊದಲಾರ್ಧದಲ್ಲಿ 12-13ರಿಂದ ಅಲ್ಪ ಹಿನ್ನಡೆಯಲ್ಲಿತ್ತು. ಆದರೆ ದ್ವಿತೀಯಾರ್ಧದಲ್ಲಿ ಭರ್ಜರಿ ರೈಡಿಂಗ್ ಸಂಘಟಿಸುವ ಮೂಲಕ ಗೆಲುವು ಸಾಧಿಸಿ ಬೀಗಿತು. ಬೆಂಗಾಲ್ ಪರ ಕನ್ನಡಿಗ ಮನೋಜ್ ಗೌಡ (8) ಮತ್ತು ನಾಯಕ ಮಣಿಂದರ್ ಸಿಂಗ್ (7) ಹೋರಾಟ ವ್ಯರ್ಥಗೊಂಡಿತು.

    ಪ್ರೊ ಕಬಡ್ಡಿ ಲೀಗ್: ಬೆಂಗಾಲ್ ಎದುರು ಹರಿಯಾಣ ಜಯಭೇರಿಗುಜರಾತ್-ತಲೈವಾಸ್ ರೋಚಕ ಟೈ: ಮೊದಲಾರ್ಧದ 2 ಅಂಕಗಳ ಹಿನ್ನಡೆ ನಡುವೆಯೂ ಪುಟಿದೆದ್ದ ಟೂರ್ನಿಯ ದುಬಾರಿ ಆಟಗಾರ ಪವನ್‌ ಕುಮಾರ್‌ ಶೆರಾವತ್ ನೇತೃತ್ವದ ತಮಿಳ್ ತಲೈವಾಸ್ ತಂಡ ಗುಜರಾತ್ ಜೈಂಟ್ಸ್ ವಿರುದ್ಧ 31-31 ಅಂಕಗಳಿಂದ ಟೈ ಸಾಧಿಸಿತು. ಬೆಂಗಳೂರು ಬುಲ್ಸ್ ತಂಡದ ಮಾಜಿ ಆಟಗಾರ ಪವನ್ 10ನೇ ನಿಮಿಷದಲ್ಲಿ ಬಲ ಮೊಣಕಾಲಿಗೆ ಆದ ಗಾಯದಿಂದಾಗಿ ಹೊರನಡೆದರು.

    ಬಳಿಕ ಅವರ ಅನುಪಸ್ಥಿತಿಯಲ್ಲೂ ತಲೈವಾಸ್ ತಂಡ ಗಮರ್ನಾಹ ಪ್ರದರ್ಶನ ನೀಡಿತು. ಗುಜರಾತ್ ಜೈಂಟ್ಸ್ ತಂಡ ಮೊದಲಾರ್ಧದಲ್ಲಿ 18-16ರಿಂದ ಮುನ್ನಡೆ ಸಾಧಿಸಿತು. ಆದರೆ ದ್ವಿತೀಯಾರ್ಧದ ಆರಂಭದಲ್ಲೇ ಗುಜರಾತ್ ಜೈಂಟ್ಸ್ ತಂಡವನ್ನು ಆಲೌಟ್ ಬಲೆಗೆ ಬೀಳಿಸಿ ತಿರುಗೇಟು ನೀಡಿದ ತಮಿಳ್ ತಲೈವಾಸ್ ತಂಡ ಸಮಬಲ ಸಾಧಿಸುವಲ್ಲಿ ಸಫಲವಾಯಿತು.

    ಪೈರೇಟ್ಸ್- ಪಲ್ಟಾನ್ ಸಮಬಲ: ಮೊದಲಾರ್ಧದ 7 ಅಂಕಗಳ ಮುನ್ನಡೆ ಕಾಯ್ದುಕೊಳ್ಳು ವಲ್ಲಿ ವಿಫಲವಾದ ಪುಣೇರಿ ಪಲ್ಟಾನ್ ತಂಡ ದಿನದ ಮೊದಲ ಪಂದ್ಯದಲ್ಲಿ 3 ಬಾರಿಯ ಚಾಂಪಿಯನ್ ಪಟನಾ ಪೈರೇಟ್ಸ್ ಎದುರು 34-34 ಅಂಕಗಳಿಂದ ಟೈ ಸಾಧಿಸಿತು. ಪೈರೇಟ್ಸ್ 26ನೇ ನಿಮಿಷದಲ್ಲಿ ಪುಣಿ ತರವನ್ನು ಆಲೌಟ್ ಮಾಡಿ ತಿರುಗೇಟು ನೀಡಿತು. ಕಡೇ ಕ್ಷಣದಲ್ಲಿ ರಕ್ಷಣಾತ್ಮಕ ಆಟಕ್ಕೆ ಮೊರೆಹೋದ ಇತ್ತಂಡಗಳು ಟೈ ಸಾಧಿಸಿದವು.

    ಮುಂಬೈನಲ್ಲಿ ಈ 2 ಪ್ರಥಮಗಳನ್ನು ಸಾಧಿಸಿದ ಮೊದಲ ಕನ್ನಡ ಸಿನಿಮಾ ‘ಕಾಂತಾರ’!

    ವಾಹನ ಸವಾರರಿಗೆ ವಿಶೇಷ ಸೂಚನೆ, ನಿಮ್ಮ ಜೀವಕ್ಕೆ ನೀವೇ ಹೊಣೆ: ಆಸ್ಪತ್ರೆಗಾಗಿ ಹೀಗೊಂದು ಹೊಸ ಥರದ ಫಲಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts