ಶೀಘ್ರದಲ್ಲಿ 57, 53 ಅರ್ಜಿ ವಿಲೇವಾರಿ

ಮೂಡಿಗೆರೆ: ಜನಸಾಮಾನ್ಯರು ಸ್ವಂತ ಮನೆ, ನಿವೇಶನ ಹೊಂದುವುದು ನನ್ನ ಕನಸಾಗಿದ್ದು, ನನ್ನ ಅವಧಿ ಹಕ್ಕುಪತ್ರ ವಿತರಣೆಗೆ ಕ್ರಮಕೈಗೊಳ್ಳಲಾಗುವುದು ಎಂದು ಶಾಸಕ ಎಂ.ಪಿ.ಕುಮಾರಸ್ವಾಮಿ ಹೇಳಿದರು.

ತಾಲೂಕು ಕಚೇರಿಯ ಆವರಣದಲ್ಲಿ 94ಸಿ ಅರ್ಜಿ ಸಲ್ಲಿಸಿದ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಿ ಮಾತನಾಡಿ, ಕಳೆದ ಎರಡು ವರ್ಷಗಳಿಂದ 94ಸಿ ಯಡಿ ಅರ್ಜಿ ಸಲ್ಲಿಸಿದ್ದು, ಅವರಿಗೆ ಶೀಘ್ರದಲ್ಲಿ ಹಕ್ಕುಪತ್ರ ವಿತರಣೆಗೆ ಕ್ರಮಕೈಗೊಳ್ಳಲಾಗುವುದು ಎಂದರು.

ಈ ಬಾರಿ ಈಗ 70 ಮಂದಿ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಲಾಗಿದೆ. ಉಳಿದ ಅರ್ಜಿಗಳನ್ನು ಹಂತಹಂತವಾಗಿ ಪರಿಶೀಲಿಸಿ ವಿತರಿಸಲಾಗುವುದು. ಕೆಲವು ಕಡೆ ಹಕ್ಕುಪತ್ರ ವಿತರಿಸಲು ಅರಣ್ಯ, ಗೋಮಾಳ, ಕಂದಾಯ ಭೂಮಿ ಎಂಬ ಗೊಂದಲವಿದ್ದು ಇದನ್ನು ಪರಿಶೀಲಿಸಲು ವಿಳಂಬವಾಗುತ್ತಿದೆ. ಶೀಘ್ರವೇ ಈ ಸಮಸ್ಯೆ ಪರಿಹರಿಸಲಾಗುವುದು. ಫಲಾನುಭವಿಗಳು ಸರ್ವೆ ಕಾರ್ಯದ ನಂತರವೇ ಮನೆ ನಿರ್ವಣಕ್ಕೆ ಮುಂದಾಗಬೇಕು ಎಂದರು.

ಮುಂದಿನ ದಿನಗಳಲ್ಲಿ ಫಾರಂ.57, 53 ಅರ್ಜಿದಾರರ ಅರ್ಜಿಗಳನ್ನು ವಿಲೇವಾರಿ ಮಾಡಲಾಗುವುದು. ಕಮಿಟಿ ರಚನೆಯಾದ ಮೇಲೆ ಪ್ರತಿ ಶುಕ್ರವಾರ ಸಭೆ ನಡೆಸಲಾಗುವುದು. ನನ್ನ ಅವಧಿಯಲ್ಲಿ ಬಂದ ಎಲ್ಲಾ ಅರ್ಜಿಗಳನ್ನು ವಿಲೇವಾರಿ ಮಾಡಲಾಗುವುದು. ಫಾರಂ 57ರಲ್ಲಿ ಅರ್ಜಿ ಸಲ್ಲಿಸಲು ಇನ್ನೂ ಅವಕಾಶವಿದೆ. ಅರ್ಜಿ ಸಲ್ಲಿಸಿದ ನೈಜ ಫಲಾನುಭವಿಗಳಿಗೆ ಅನ್ಯಾಯವಾಗದಂತೆ ಅಧಿಕಾರಿಗಳು ಕ್ರಮವಹಿಸಬೇಕು. ಯಾವುದೇ ಹಣ ಪಡೆಯದೆ ಹಕ್ಕುಪತ್ರ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.

Leave a Reply

Your email address will not be published. Required fields are marked *