ಸಾಸ್ವೆಹಳ್ಳಿ: ದಾವಣಗೆರೆಯಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಜಿಲ್ಲಾ ಮಟ್ಟದ 17 ವರ್ಷ ವಯೋಮಿತಿಯ ಕುಸ್ತಿ ಪಂದ್ಯದಲ್ಲಿ ಸಾಸ್ವೆಹಳ್ಳಿ ಹೋಬಳಿಯ ಬೆನಕನಹಳ್ಳಿ ಗ್ರಾಮದ ಶ್ರೀ ವಿನಾಯಕ ಪ್ರೌಢಶಾಲೆಯ ವಿದ್ಯಾರ್ಥಿಗಳು ಉತ್ತಮ ಪ್ರದರ್ಶನ ತೋರಿ, ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಫ್ರೀ ಸ್ಟೈಲ್ ಮಾದರಿಯ 55 ಕೆಜಿ ದೇಹ ತೂಕದ ಕುಸ್ತಿ ವಿಭಾಗದಲ್ಲಿ ವಿದ್ಯಾರ್ಥಿ ಸತ್ಯರಾಜು ಪ್ರಥಮ, 65 ಕೆಜಿ ದೇಹ ತೂಕ ವಿಭಾಗದಲ್ಲಿ ಯುವರಾಜು ಪ್ರಥಮ ಸ್ಥಾನ ಪಡದಿದ್ದಾರೆ.
ರಾಮನಗರದಲ್ಲಿ ಸೆ. 29ರಿಂದ 31ರ ವರೆಗೆ ಏರ್ಪಡಿಸಿರುವ ರಾಜ್ಯಮಟ್ಟದ ಪ್ರೌಢಶಾಲಾ ವಿಭಾಗದ ಕುಸ್ತಿ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ. ಡಾ.ವಿನೋದ್ ಮತ್ತು ಡಾ.ಜಿ. ಸುಧಾಕರ ಅವರ ಬಳಿ ತರಬೇತಿ ಪಡೆದಿದ್ದರು.