ವರ್ಷದ ನ್ಯೂಜಿಲೆಂಡರ್’ ಪ್ರಶಸ್ತಿಗೆ ಬೆನ್​​ ಸ್ಟೋಕ್ಸ್​​​​​ ನಾಮ ನಿರ್ದೇಶನ, ಇಂಗ್ಲೆಂಡ್​​ ಕ್ರಿಕೆಟರ್​ಗೆ ನ್ಯೂಜಿಲೆಂಡರ್ ಪ್ರಶಸ್ತಿ ಏನಿದರ ಸತ್ಯ?

ವಿಲ್ಲಿಂಗ್ಟನ್​: 12ನೇ ಆವೃತ್ತಿಯ ಐಸಿಸಿ ವಿಶ್ವಕಪ್​​​​​ನಲ್ಲಿ ನ್ಯೂಜಿಲೆಂಡ್​​​​​​​​​​ ಕಪ್​​ ಗೆಲ್ಲುವ ಕನಸಿಗೆ ತಣ್ಣೀರೆರೆಚಿದ ಇಂಗ್ಲೆಂಡ್​​ ತಂಡದ ಆಲ್​​ರೌಂಡರ್​​​​​ ಬೆನ್​​ ಸ್ಟೋಕ್ಸ್​​ ಅವರ ಹೆಸರನ್ನು ವರ್ಷದ ನ್ಯೂಜಿಲೆಂಡರ್’ ಪ್ರಶಸ್ತಿಗೆ ನಾಮ ನಿರ್ದೇಶನ ಮಾಡಲಾಗಿದೆ.

ಜುಲೈ 14 ರಂದು ಲಂಡನ್​ನ ಲಾರ್ಡ್ಸ್ ಕ್ರೀಡಾಂಗಣದಲ್ಲಿ ನಡೆದ ಫೈನಲ್​​ನಲ್ಲಿ ಸ್ಟೋಕ್ಸ್​​ ಅದ್ಭುತ ಪ್ರದರ್ಶನ ತೋರುವ ಮೂಲಕ ಇಂಗ್ಲೆಂಡ್​ನ ಗೆಲುವಿನ ರೂವಾರಿಗಳಾಗಿ ನ್ಯೂಜಿಲೆಂಡ್​​​​​​ ಅಭಿಮಾನಿಗಳ ಪಾಲಿಗೆ ವಿಲನ್​​ ಆಗಿದ್ದರು. ಆದರೆ ಸದ್ಯ ಅವರ ಹೆಸರನ್ನು ‘ವರ್ಷದ ನ್ಯೂಜಿಲೆಂಡರ್’ ಪ್ರಶಸ್ತಿಗೆ ನಾಮನಿರ್ದೇಶನ ಮಾಡಲಾಗಿದ್ದು, ಅನೇಕ ಕಿವೀಸ್​ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ.

ಕಿವೀಸ್​​ ತಂಡ ನಾಯಕ ಕೇನ್​​ ವಿಲಿಯಮ್ಸನ್​​ ಅವರ ಹೆಸರನ್ನು ನಾಮನಿರ್ದೇಶನ ಮಾಡಲಾಗಿದೆ. ಬೆನ್​​ ಸ್ಟೋಕ್ಸ್​​ ತಂದೆ ಗೆರಾರ್ಡ್​ ಸ್ಟೋಕ್ಸ್​​​​​ ಮೂಲತಃ ನ್ಯೂಜಿಲೆಂಡ್​​​​​​ನವರಾಗಿದ್ದಾರೆ. ಅವರು ರಗ್ಬಿ ಕೋಚ್​​​​​ ಹುದ್ದೆಗಾಗಿ ಹಲವು ವರ್ಷಗಳ ಹಿಂದೆ ಇಂಗ್ಲೆಂಡ್​​​ಗೆ ಬಂದು ನೆಲೆಸಿದ್ದರು. ಆಗ ಬೆನ್​​ ಸ್ಟೋಕ್ಸ್​ ಅವರು ಕೇವಲ 14 ವರ್ಷದ ಬಾಲಕರಾಗಿದ್ದರು. ಬಳಿಕ ಅವರು ಅಲ್ಲಿಯೇ ವಿದ್ಯಾಭ್ಯಾಸ ಮಾಡುವ ಮೂಲಕ ಕ್ರಿಕೆಟ್​​ನಲ್ಲಿ ಒಲವು ಮೂಡಿಸಿಕೊಂಡರು. ಬಳಿಕ ಕ್ಲಬ್​​​​​ ಕ್ರಿಕೆಟ್​​ನಲ್ಲಿ ಆಡುವ ಮೂಲಕ ಉತ್ತಮ ಆಟಗಾರನಾಗಿ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಿದ್ದರು. ಆತನ ತಂದೆ ನ್ಯೂಜಿಲೆಂಡ್​​​​​ರವರಾಗಿದ್ದರಿಂದ ಮಗನನ್ನು ‘ವರ್ಷದ ನ್ಯೂಜಿಲೆಂಡರ್’ ಪ್ರಶಸ್ತಿಗೆ ನಾಮನಿರ್ದೇಶನ ಮಾಡಲಾಗಿದೆ ಎಂದು ತಿಳಿದು ಬಂದಿದೆ. (ಏಜೆನ್ಸೀಸ್​)