ವಿಡಿಯೋ| ಕ್ಯಾಚ್​ ಬಿಟ್ಟು ಹಣೆಗೆ ಪೆಟ್ಟು ಮಾಡಿಕೊಂಡ ಬೆನ್​ ಕಟ್ಟಿಂಗ್​

ಸಿಡ್ನಿ: ಪ್ರಸ್ತುತ ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಬಿಗ್​ ಬ್ಯಾಷ್​ ಲೀಗ್​ನಲ್ಲಿ ಬೆನ್​ ಕಟ್ಟಿಂಗ್ ಅವರು​ ಕ್ಯಾಚ್​ ಹಿಡಿಯಲು ಹೋಗಿ ಅನೀರಿಕ್ಷಿತವಾಗಿ ಬಾಲ್​ ಹಣೆಗೆ ಬಿದ್ದು ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ.

ಶನಿವಾರ ಬ್ರಿಸ್ಬೇನ್​ ಹೀಟ್ಸ್​ ಹಾಗೂ ಮೆಲ್ಬೋರ್ನ್​ ರೆನೆಗೇಡ್ಸ್​ ನಡುವೆ ಲೀಗ್​ ಪಂದ್ಯ ನಡೆಯಿತು. ಈ ವೇಳೆ ರೆನೆಗೇಡ್ಸ್​ ತಂಡದ ಬ್ಯಾಟ್ಸ್​ಮನ್​ ಮಾರ್ಕಸ್​ ಹ್ಯಾರೀಸ್​ ಹೊಡೆದ ಚೆಂಡನ್ನು ಬೆನ್​ ಕಟ್ಟಿಂಗ್ಸ್​​ ಹಿಡಿಯಲು ಹೋದಾಗ ಕ್ಯಾಚ್​ ತಪ್ಪಿಹೋಗಿ ಚೆಂಡು ಮೊದಲು ಬೆರಳಿಗೆ ಬಿದ್ದು ನಂತರ ಎರಡು ಕಣ್ಣಿನ ಮಧ್ಯದ ಹಣೆಯ ಭಾಗಕ್ಕೆ ಬಿದ್ದಿದೆ. ತಕ್ಷಣವೇ ಚಿಮ್ಮಿದ ರಕ್ತ ಬೆನ್​ ಮುಖವನ್ನೆಲ್ಲ ಆವರಿಸಿತ್ತು.

ತಕ್ಷಣ ಅವರಿಗೆ ಚಿಕಿತ್ಸೆ ಸುಮಾರು ಐದು ಹೊಲಿಗೆಯನ್ನು ಹಾಕಲಾಗಿದೆ. ಸದ್ಯ ಬೆನ್​ ಆರೋಗ್ಯವಾಗಿದ್ದಾರೆ.

ಬ್ರಿಸ್ಬೇನ್​​ ತಂಡ 20 ಓವರ್​ಗಳಲ್ಲಿ 8 ವಿಕೆಟ್​ಗೆ 144 ರನ್​ ಗಳಿಸಿತ್ತು. ಗುರಿ ಬೆನ್ನತ್ತಿದ ಮೆಲ್ಬೋರ್ನ್​​ ತಂಡ 15.4 ಓವರ್​ಗಳಲ್ಲಿ 2 ವಿಕೆಟ್​ ನಷ್ಟಕ್ಕೆ 145 ರನ್​ ಗಳಿಸುವ ಮೂಲಕ ವಿಜಯಲಕ್ಷ್ಮಿಯನ್ನು ತಮ್ಮ ಕಡೆಗೆ ಒಲಿಸಿಕೊಂಡರು. (ಏಜೆನ್ಸೀಸ್​)

Leave a Reply

Your email address will not be published. Required fields are marked *