ಕ್ರೀಡಾಪಟುಗಳಿಗೆ ಸನ್ಮಾನ

ಬೇಲೂರು: ಛತ್ತೀಸ್‌ಘಡ ರಾಜ್ಯದ ರಾಯಪುರದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಥ್ರೋಬಾಲ್ ಪಂದ್ಯಾವಳಿಯಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಿ ಕಂಚಿನ ಪದಕ ಪಡೆದಿರುವ ಸರ್ವೋದಯ ಶಾಲೆ ವಿದ್ಯಾರ್ಥಿಗಳಾದ ವಿಭುಪಟೇಲ್, ಸಿ.ಎಂ.ಸಮೀಕ್ಷಾ ಹಾಗೂ ದೈಹಿಕ ಶಿಕ್ಷಣ ಶಿಕ್ಷಕ ಮೆಹಬೂಬ್ ಅವರನ್ನು ಸರ್ವೋದಯ ವಿದ್ಯಾಸಂಸ್ಥೆಯಿಂದ ಅಭಿನಂದಿಸಲಾಯಿತು. ಈ ವೇಳೆ ಸರ್ವೋದಯ ವಿದ್ಯಾಸಂಸ್ಥೆಯ ಅಧ್ಯಕ್ಷ ಪ್ರಕಾಶ್, ನಿರ್ದೇಶಕ ರಂಗನಾಥ್, ಮುಖ್ಯಶಿಕ್ಷಕ ಗಿರೀಶ್ ಹಾಗೂ ವಿದ್ಯಾರ್ಥಿನಿಯರ ಪಾಲಕರಾದ ಮಹೇಶ್, ಕವಿತಾ, ಮಹೇಶ್ ತಾರಾಮಣಿ ಇದ್ದರು.