ಬೇಲೂರಿನಲ್ಲಿ ಕಾಮಣ್ಣ ದಹನ

ಬೇಲೂರು: ಹೋಳಿ ಹುಣ್ಣಿಮೆ ಆಚರಣೆ ಅಂಗವಾಗಿ ಇಲ್ಲಿನ ಶ್ರೀ ಚನ್ನಕೇಶವಸ್ವಾಮಿ ದೇಗುಲದ ಹಿಂಭಾಗದ ಭಸ್ಮಾಸುರ ಮೂಲೆಯಲ್ಲಿ ಸಾವಿರಾರು ಜನರ ನಡುವೆ ಕಾಮಣ್ಣ ದಹನವನ್ನು ಸಂಭ್ರಮದಿಂದ ಆಚರಿಸಲಾಯಿತು.

ಸಾಂಪ್ರದಾಯಿಕವಾಗಿ ವಿಶೇಷ ಆಚರಣೆಗಳು ಹಾಗೂ ಪೂಜಾ ವಿಧಿವಿಧಾನಗಳನ್ನು ನಡೆಸಿ, ಭಸ್ಮಾಸುರ ಮೂಲೆಯಲ್ಲಿ ಕಾಮಣ್ಣ ದಹನಕ್ಕೆ ಸಿದ್ಧಪಡಿಸಿದ್ದ ಅಗ್ನಿ ಕುಂಡಕ್ಕೆ ಕರ್ಪೂರದ ಮೂಲಕ ಬೆಂಕಿ ಹಚ್ಚಲಾಯಿತು. ನಂತರ ಪ್ರಜ್ವಲಿಸಿದ ಬೆಳಕಿಗೆ ಸಾವಿರಾರು ಜನ ಸಂಭ್ರಮಿಸಿದರು.

ನಂತರ ಭಕ್ತಾದಿಗಳಿಗೆ ಪ್ರಸಾದ ವಿನಿಯೋಗ ಮಾಡಲಾಯಿತು. ಶ್ರೀ ರಾಘವೇಂದ್ರ ಸ್ವಾಮಿ ಬೃಂದಾವನ ಮಠದ ಅರ್ಚಕ ಸುಧೀಂದ್ರಾಚಾರ್, ಪ್ರಮುಖರಾದ ಲಕ್ಷ್ಮೀಕಾಂತ್, ನಂದ್‌ಕುಮಾರ್, ಹಿತೇಶ್ (ಟೀನು), ಪ್ರಸನ್ನಾಚಾರ್, ನರಸಿಂಹಮೂರ್ತಿ ಮತ್ತಿತರರು ಹಾಜರಿದ್ದರು.