ಯಳ್ಳೂರಲ್ಲಿ ಲಾಠಿ ಪ್ರಹಾರ ಪ್ರಕರಣ, 61 ಜನರಿಗೆ ವಾರೆಂಟ್ ಜಾರಿ

ಬೆಳಗಾವಿ: ಯಳ್ಳೂರು ಗ್ರಾಮದಲ್ಲಿ ಮರಾಠಿ ನಾಮಲಕ ತೆರವುಗೊಳಿಸುವ ಸಂದರ್ಭ ನಡೆಸಿದ ಲಾಠಿ ಪ್ರಹಾರ ಪ್ರಕರಣಕ್ಕೆ ಸಂಬಂಧಿಸಿ ವಿಚಾರಣೆಗೆ ಹಾಜರಾಗದ 20 ಪೊಲೀಸ್ ಅಧಿಕಾರಿಗಳು ಒಳಗೊಂಡು 61 ಜನರಿಗೆ ಜೆಎಂಎ್ಸಿ 3ನೇ ನ್ಯಾಯಾಲಯ ಶುಕ್ರವಾರ ವಾರಂಟ್ ಜಾರಿಗೊಳಿಸಿದೆ.

‘ಮಹಾರಾಷ್ಟ್ರ ರಾಜ್ಯ ಯಳ್ಳೂರ’ ಎಂಬ ವಿವಾದಿತ ನಾಮಲಕವನ್ನು ಹೈಕೋರ್ಟ್ ಆದೇಶದ ಪ್ರಕಾರ ತೆರವುಗೊಳಿಸುವ ಸಂದರ್ಭ ಎರಡು ಗುಂಪುಗಳು ಘರ್ಷಣೆಗೆ ಇಳಿದಾಗ ಪೊಲೀಸರು ಲಾಠಿ ಪ್ರಹಾರ ನಡೆಸಿದ್ದರು. ಈ ಗಲಾಟೆಗೆ ಸಂಬಂಧಿಸಿ 222 ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.

ಈ ಪ್ರಕರಣದ ವಿಚಾರಣೆ ಮೇಲಿಂದ ಮೇಲೆ ನಡೆಯುತ್ತಿದೆ. ವಿಚಾರಣೆಗೆ ಸತತ ಗೈರು ಹಾಜರಾಗುತ್ತಿರುವ ಹಿನ್ನೆಲೆಯಲ್ಲಿ ಪೊಲೀಸ್ ಅಧಿಕಾರಿಗಳು, ಸಾಕ್ಷಿದಾರರು ಮತ್ತು ದೂರು ನೀಡಿದವರು ಒಳಗೊಂಡು 61 ಜನರಿಗೆ ನ್ಯಾಯಾಲಯ ವಾರಂಟ್ ಜಾರಿಗೊಳಿಸಿದೆ. ನವೆಂಬರ್ 24ರಂದು ವಿಚಾರಣೆ ನಡೆಯಲಿದ್ದು, ಮುಂದಿನ ವಿಚಾರಣೆಗೆ ಹಾಜರಾಗಬೇಕು ಎಂದು ಕೋರ್ಟ್ ಸೂಚನೆ ನೀಡಿದೆ.

ಸಮಾಜಸೇವಕ ಭೀಮಪ್ಪ ಗಡಾದ ಅವರು, ಈ ವಿವಾದಿತ ಲಕ ತೆರವುಗೊಳಿಸಬೇಕು ಎಂದು ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ ಈ ಲಕ ತೆರವುಗೊಳಿಸುವಂತೆ ಆದೇಶ ನೀಡಿತ್ತು. ನಾಮ ಲಕ ತೆರವುಗೊಳಿಸುವ ಸಂದರ್ಭ ಸ್ಥಳೀಯರು ತೀವ್ರವಿರೋಧ ವ್ಯಕ್ತ ಪಡಿಸಿದ್ದರಿಂದ ಪೊಲೀಸರು ಲಾಠಿ ಪ್ರಹಾರ ನಡೆಸಿದ್ದರು. ನಾಮಲಕ ತೆರವುಗೊಳಿಸಲು ಅಡ್ಡಿಪಡಿಸಿದ 222 ಜನರ ವಿರುದ್ಧ ದೂರು ದಾಖಲಿಸಿದ್ದರು. ಜೆಎಂಎ್ಸಿ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ.