Wednesday, 21st November 2018  

Vijayavani

ಕಬ್ಬು ಬೆಳೆಗಾರರ ಹೋರಾಟಕ್ಕೆ ಕೇಸರಿ ಬಲ - ರಾಜ್ಯಾದ್ಯಂತ ಇಂದು ಬಿಜೆಪಿ ಬೃಹತ್ ಪ್ರತಿಭಟನೆ        ಗದಗಿನ ಕದಡಿ ಬಳಿ ಒಡೆದ ಕಾಲುವೆ- ಜಮೀನುಗಳಿಗೆ ನುಗ್ಗಿದ ಅಪಾರ ನೀರು - ಅಧಿಕಾರಿಗಳ ವಿರುದ್ಧ ಆಕ್ರೋಶ        ದ್ರಾಕ್ಷಿ ತೋಟದಲ್ಲಿ ಕರೆಂಟೂ, ನೆಲದಲ್ಲೂ ಕರೆಂಟು - ಚಿಕ್ಕಬಳ್ಳಾಪುರದ ಪವರ್​ ಗ್ರಿಡ್ ಕಂಟಕ        ಮದ್ದೂರು ಸಕ್ಕರೆ ಕಾರ್ಖಾನೆಯಲ್ಲಿ ಬಾಯ್ಲರ್ ಸ್ಫೋಟ - ಒಬ್ಬ ಲ್ಯಾಬ್ ಟೆಕ್ನೀಷಿಯನ್ ಸ್ಥಿತಿ ಗಂಭೀರ-        ಸ್ಯಾಂಡಲ್​ವುಡ್​​ನಲ್ಲಿ ಮತ್ತೊಂದು ಗಟ್ಟಿಮೇಳ - ಡಿ.11, 12ರಂದು ಹಸೆಮಣೆ ಏರುತ್ತೆ ಐಂದ್ರಿತಾ, ದಿಗಂತ್ ಜೋಡಿ       
Breaking News

ಬೆಳ್ಳಿತೆರೆಗೆ ಆಯೇಷಾ ಕಮ್​ ಬ್ಯಾಕ್​ 

Monday, 19.06.2017, 3:02 AM       No Comments

2004ರಲ್ಲಿ ‘ಟಾರ್ಜನ್ ದಿ ವಂಡರ್ ಕಾರ್’ ಮೂಲಕ ಬಾಲಿವುಡ್​ಗೆ ಕಾಲಿಟ್ಟಿದ್ದ ಆಯೇಷಾ ಟಾಕಿಯಾ, ಸುದೀರ್ಘ ನಾಲ್ಕು ವರ್ಷದ ಗ್ಯಾಪ್​ನ ಬಳಿಕ ಮತ್ತೆ ಬಿ-ಟೌನ್ ಕಡೆ ಮುಖ ಹೊರಳಿಸಿದ್ದಾರೆ. ಯಾವ ಸಿನಿಮಾ? ಯಾವ ಹೀರೋ ಜತೆ ನಟಿಸುತ್ತಿದ್ದಾರೆ ಎಂಬ ಪ್ರಶ್ನೆ ಮೂಡಬಹುದು. ಆದರೆ, ಅವರು ಸಿನಿಮಾ ಮೂಲಕ ಎಂಟ್ರಿ ನೀಡುತ್ತಿಲ್ಲ! ಬದಲಿಗೆ, ವಿಡಿಯೋ ಹಾಡೊಂದರ ಮೂಲಕ ಯಾರಿಗೂ ಕಮ್ಮಿ ಇಲ್ಲದಂತೆ ಬರಲು ನಿರ್ಧರಿಸಿದ್ದಾರಂತೆ.

ಈವರೆಗೂ 20ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದ ಆಯೇಷಾಗೆ ಖ್ಯಾತಿ ತಂದುಕೊಟ್ಟ ಸಿನಿಮಾ ‘ವಾಟೆಂಡ್’. ಆದರೆ, ಮುಂದಿನ ಸಿನಿಮಾಗಳ ಗೆಲುವಿಗೆ ‘ವಾಟೆಂಡ್’ ಜನಪ್ರಿಯತೆ ಕೈಹಿಡಿಯಲಿಲ್ಲ. ಮದುವೆ ಬಳಿಕವೂ ನಟಿಸಿದ ಹಲವು ಸಿನಿಮಾ ಯಶ ಕಾಣಲಿಲ್ಲ. 2013ರಲ್ಲಿನ ‘ಆಪ್​ಕೇ ಲಿಯೇ ಹಮ್ ಆಯೇಷಾ ನಟಿಸಿದ ಕೊನೆ ಸಿನಿಮಾವಾದರೂ ಸೋಲಿನ ಮೂಲಕವೇ ಇಂಡಸ್ಟ್ರಿಯಿಂದ ದೂರವಾಗಿದ್ದರು. ಇದೀಗ ಲವ್ಲಿ ಸಿಂಗ್ ನಿರ್ದೇಶನದಲ್ಲಿ ತಯಾರಾದ ‘ಜಿಂದಗಿ ಹೇ ಜಿಂದಗಿ’ ಮ್ಯೂಸಿಕ್ ವಿಡಿಯೋ ಹಾಡಿನಲ್ಲಿ ಆಯೇಷಾ ಮತ್ತೆ ರೀ-ಲಾಂಚ್ ಆಗುತ್ತಿದ್ದಾರೆ. ಯಾವ ಕಮರ್ಷಿಯಲ್ ಸಿನಿಮಾಗಿಂತಲೂ ಕಡಿಮೆ ಇಲ್ಲದಂತೆ, ಅದ್ಧೂರಿ ಬಜೆಟ್​ನಲ್ಲಿ ಈ ಹಾಡು ತಯಾರಾಗಿದೆ. ‘ಮಹಿಳಾ ಸಬಲೀಕರಣವೇ ಈ ಹಾಡಿನ ಮುಖ್ಯ ವಿಷಯ. ಹಾಡು ಎಂದರೆ ಬರೀ ಕುಣಿತ, ಗ್ಲಾಮರ್ ಅಷ್ಟೆ ಅಲ್ಲ. ಈ ಹಾಡಿನಲ್ಲಿ ಒಂದು ಕಥೆ ಹೇಳಲು ಹೊರಟಿದ್ದೇವೆ. ಮಕ್ಕಳ ಕಳ್ಳ ಸಾಗಾಣಿಕೆಯಲ್ಲಿ ತನ್ನ ಸಹೋದರಿಯನ್ನು ಮಹಿಳೆಯೊಬ್ಬಳು ಹೇಗೆ ರಕ್ಷಿಸಿಕೊಳ್ಳುತ್ತಾಳೆ ಎಂಬ ಗಂಭೀರ ವಿಷಯವನ್ನು ಆಯ್ದುಕೊಂಡು ಚಿತ್ರೀಕರಿಸಿದ್ದೇವೆ’ ಎಂದು ನಿರ್ದೇಶಕ ಲವ್ಲಿ ಸಿಂಗ್ ಕಥೆ ಬಿಚ್ಚಿಟ್ಟಿದ್ದಾರೆ.

-ಏಜೆನ್ಸೀಸ್

 

Leave a Reply

Your email address will not be published. Required fields are marked *

Back To Top