ಅಧಿಕೃತ ಫಲಿತಾಂಶ ಘೋಷಣೆಗೂ ಮೊದಲೇ ಸೋಲೊಪ್ಪಿಕೊಂಡ ಕಾಂಗ್ರೆಸ್‌ನ ವಿ ಎಸ್‌ ಉಗ್ರಪ್ಪ

ಬಳ್ಳಾರಿ: ನಾವು ಜನರ ನಾಡಿಮಿಡಿತ ಅರ್ಥ ಮಾಡಿಕೊಳ್ಳುವಲ್ಲಿ ವಿಫಲರಾಗಿದ್ದೇವೆ ಅನ್ನಿಸುತ್ತದೆ. ಜನಾದೇಶಕ್ಕೆ ತಲೆಬಾಗುವೆ ಎಂದು ಕಾಂಗ್ರೆಸ್ ಅಭ್ಯರ್ಥಿ ವಿ.ಎಸ್.ಉಗ್ರಪ್ಪ ಹೇಳಿದ್ದಾರೆ.

ಜನಾದೇಶಕ್ಕೆ ತಲೆಬಾಗುತ್ತೇನೆ. ನನ್ನ ವಿರುದ್ಧ ಬಂದ ಫಲಿತಾಂಶ ಒಪ್ಪುತ್ತೇನೆ. ಜನ ಮೆಚ್ಚುವಂತೆ ಕೆಲಸ ಮಾಡಿದ್ದೇನೆ. ರಾಜ್ಯ ಹಾಗೂ ದೇಶದಲ್ಲಿನ ಫಲಿತಾಂಶ ನೋಡಿದರೆ ಮೋದಿ ಅಲೆ ಕೆಲಸ ಮಾಡಿದೆ ಎಂದು ಅನ್ನಿಸುತ್ತದೆ. ನನ್ನ ಸೋಲಿಗೆ ಯಾರನ್ನೂ ದೂಷಿಸುವುದಿಲ್ಲ. ಯಾರಾದರೂ ದ್ರೋಹ ಎಸಗಿದ್ದರೆ ತಾಯಿಗೆ ದ್ರೋಹ ಬಗೆದಂತೆ. ಅಂತವರಿಗೆ ಮುಂದಿನ ದಿನಗಳಲ್ಲಿ ಜ್ಞಾನೋದಯವಾಗಲಿದೆ. ನಾನು ಬಳ್ಳಾರಿಯಲ್ಲೇ ಇರುತ್ತೇನೆ ಎಂದು ಹೇಳಿದರು.

ನಮ್ಮ ಕಾರ್ಯಕರ್ತರಿಗೆ ಧನ್ಯವಾದಗಳು. ಹಂಪಿ ‌ಉತ್ಸವ, ತುಂಗಭದ್ರಾ ಜಲಾಶಯ ಹೂಳು ಎತ್ತುವ ಪ್ಲ್ಯಾನ್‌ ಮಾಡಿದೆ. ಜನರಿಗೆ ಇದು ಇಷ್ಟ ಆಯ್ತೋ ಇಲ್ಲವೋ ಗೊತ್ತಾಗಲಿಲ್ಲ. ನನಗಿಂತ ಬಿಜೆಪಿ ಹೆಚ್ಚು‌ ಕೆಲಸ‌ ಮಾಡಬಹುದೇನೋ. ಸೋತಾಗ‌ ಕೊಂಕು‌ ನುಡಿಯಾಡುವುದಿಲ್ಲ. ಪಕ್ಷ ತಾಯಿ ಇದ್ದಂತೆ ಯಾರು ಕೂಡ ‌ಪಕ್ಷಕ್ಕೆ ದ್ರೋಹ ಮಾಡಿಲ್ಲ ಎಂದರು.

ರಾಜ್ಯದ ಮೇಲೆ ಪರಿಣಾಮ ಬಿರುವ ವಿಚಾರವಾಗಿ ಪ್ರತಿಕ್ರಿಯಿಸಿ, ಲೋಕಸಭೆ ಚುನಾವಣೆ ಬೇರೆ. ವಿಧಾನಸಭೆ ಚುನಾವಣೆ ವಿಚಾರ ಬೇರೆ. ವಾಮಮಾರ್ಗದ ಮೂಲಕ ಅಧಿಕಾರಕ್ಕೆ ಹೋಗುವುದಾದರೆ ಮತ್ತೊಮ್ಮೆ ಜನಾದೇಶಕ್ಕೆ ಹೋಗುವುದೇ ಒಳಿತು. ಕೇಂದ್ರದಲ್ಲಿ ಅವರ ಸರ್ಕಾರ ಇರುವುದರಿಂದ ವಾಮಮಾರ್ಗಕ್ಕೆ ಬರಬಹುದು ಎಂದು ತಿಳಿಸಿದರು. (ದಿಗ್ವಿಜಯ ನ್ಯೂಸ್)

Leave a Reply

Your email address will not be published. Required fields are marked *