ತೆರಿಗೆ ಮಾರ್ಪಾಡು ಜಾಗೃತಿ ಶಿಬಿರ ತುಂಬಾ ಅವಶ್ಯ

blank

ಬಳ್ಳಾರಿ: ವರ್ತಕರು, ವ್ಯಾಪಾರಸ್ಥರು ಮತ್ತು ಉದ್ಯಮಿಗಳಿಗೆ ಆಹಾರ ಪದಾರ್ಥಗಳ ಮೇಲೆ ಆಗಿರುವ ತೆರಿಗೆ ಮಾರ್ಪಾಡು ಜಾಗೃತಿ ಶಿಬಿರ ಹಮ್ಮಿಕೊಳ್ಳುವುದು ತುಂಬಾ ಅವಶ್ಯಕವಾಗಿದ್ದು, ಈ ಕಾರ್ಯಾಗಾರದಲ್ಲಿ ಬರುವ ಸಂಶಯದ ಪ್ರಶ್ನೆಗಳನ್ನು ಮುಕ್ತವಾಗಿ ಕೇಳಿ ತಿಳಿದುಕೊಳ್ಳಬಹುದು ಎಂದು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಸಿ.ಶ್ರೀನಿವಾಸ್‌ರಾವ್ ಹೇಳಿದರು.

ನಗರದ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಿದ್ದ ಆಹಾರ ಪದಾರ್ಥಗಳ ಮೇಲೆ ಆಗಿರುವ ತೆರಿಗೆ ಮಾರ್ಪಾಡು ಜಾಗೃತಿ ಶಿಬಿರದಲ್ಲಿ ಮಾತನಾಡಿದರು.

ದಾವಣಗೆರೆಯ ಐಸಿಟಿಪಿಐ ಟಿ.ಸಿ.ಚೇರ್ಮನ್ ಎಚ್.ಟಿ.ಸುಧೀಂದ್ರರಾವ್, ಬಳ್ಳಾರಿ ಎನ್‌ಐಸಿಟಿಪಿಐ ಚೇರ್ಮನ್ ಶ್ರೀಧರ ಪಾರ್ಥಸಾರಥಿ, ತೂಕ ಮತ್ತು ಮಾಪನ ಇಲಾಖೆ ಸಹಾಯಕ ನಿಯಂತ್ರಕಿ ಅಮೃತಾ ಪಿ.ಚವ್ಹಾಣ್ ಅವರು ಸಭಿಕರು ಕೇಳಿದ ಎಲ್ಲ ಪ್ರಶ್ನೆಗಳಿಗೆ ಉತ್ತರಿಸಿದರು. ಇನ್ನು ಕೆಲವು ಬಗೆಹರಿಯದ ಪ್ರಶ್ನೆಗಳಿಗೆ ಜಿಎಸ್‌ಟಿ ಪರಿಷತ್‌ಗೆ ಪತ್ರ ಬರೆಯುವುದಾಗಿ ಚೇಂಬರ್ ಆಫ್ ಕಾಮರ್ಸ್‌ನ ಗೌರವ ಕಾರ್ಯದಶಿ ಯಶವಂತರಾಜ್ ನಾಗಿರೆಡ್ಡಿ ತಿಳಿಸಿದರು.

ಸಂಸ್ಥೆಯ ಪದಾಧಿಕಾರಿಗಳಾದ ಮಹಾರುದ್ರಗೌಡ, ಎ.ಮಂಜುನಾಥ, ಕೆ.ರಮೇಶ್ ಬುಜ್ಜಿ, ವಿ.ರಾಮಚಂದ್ರ, ಟಿ.ಶ್ರೀನಿವಾಸ್‌ರಾವ್, ಎ.ಚನ್ನಪ್ಪ, ಯು.ಗೋವಿಂದರೆಡ್ಡಿ ಸೇರಿ ರೈಸ್‌ಮಿಲ್ ಅಸೋಸಿಯೇಷನ್, ಎಪಿಎಂಸಿ ವರ್ತಕರು, ಸಗಟು ವ್ಯಾಪಾರಸ್ಥರು, ಕಿರಾಣಿ ವರ್ತಕರು, ರಿಟೇಲ್ ವ್ಯಾಪಾರಸ್ಥರು, ಎಲ್ಲ ಸಂಘ ಸಂಸ್ಥೆಯ ಸದಸ್ಯರು ಇದ್ದರು.

Share This Article

ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದು ಚಮಚ ತೆಂಗಿನೆಣ್ಣೆ ಕುಡಿದರೆ ಏನಾಗುತ್ತೆ ಗೊತ್ತಾ? Coconut Oil Benefits

Coconut Oil Benefits:  ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ತಿನ್ನುವ ಆಹಾರವೇ ನಮ್ಮ ಆರೋಗ್ಯವನ್ನು ನಿರ್ಧರಿಸುತ್ತದೆ.…

ಕಣ್ಣಿಗೊಂದು ಸವಾಲ್…ಈ ಫೋಟೋದಲ್ಲಿರುವ ಹಾವನ್ನು ಗುರುತಿಸಬಲ್ಲಿರಾ? Optical Illusion..

Optical Illusion: ನಮ್ಮ ಕಣ್ಣುಗಳಿಗೆ ಸವಾಲು ಎಸೆಯುವಂತಹ ಚಿತ್ರಗಳು ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ…

Tea….ಒಂದು ತಿಂಗಳು ಟೀ ಕುಡಿಯುವುದನ್ನು ಬಿಟ್ಟರೆ ಏನಾಗುತ್ತೆ ಗೊತ್ತಾ?

Tea: ಬೆಳಗ್ಗೆ ಎದ್ದ ತಕ್ಷಣ ಬಿಸಿ ಬಿಸಿ ಟೀ ಕುಡಿದರೆ ಸಿಗುವ ಸಂತೋಷ ಅಷ್ಟಿಷ್ಟಲ್ಲ. ಹಾಗಿದ್ದರೂ,…