More

  ಬಳ್ಳಾರಿಯಲ್ಲಿ ನಾಳೆ ಖಾಸಗಿ ಕೋವಿಡ್ ಆಸ್ಪತ್ರೆ ಆರಂಭ, 50 ಹಾಸಿಗೆ ಬಡವರಿಗೆ ಮೀಸಲು

  ಬಳ್ಳಾರಿ: ಕರೊನಾ ಸೋಂಕಿತರಿಗೆ ಚಿಕಿತ್ಸೆ ನೀಡಲು ನಗರದ ಕಪ್ಪಗಲ್ ರಸ್ತೆಯಲ್ಲಿರುವ ಸುಸಜ್ಜಿತ ಶಾವಿ ಖಾಸಗಿ ಆಸ್ಪತ್ರೆ ಸಿದ್ಧವಾಗಿದ್ದು, ಜು.24ರಂದು ಕಾರ್ಯಾರಂಭ ಮಾಡಲಿದೆ.

  ಜಿಲ್ಲೆಯಲ್ಲಿ ಕರೊನಾ ಸೋಂಕಿತರು ಹಾಗೂ ಸಾವಿನ ಸಂಖ್ಯೆ ಏರಿಕೆ ಆಗತ್ತಿದ್ದರಿಂದ ಭಾರತೀಯ ವೈದ್ಯಕೀಯ ಸಂಘವು ಖಾಸಗಿಯಾಗಿ ಸೋಂಕಿತರಿಗೆ ಚಿಕಿತ್ಸೆ ನೆರವು ನೀಡಬೇಕು ಎಂಬ ನಿರ್ಧಾರಕ್ಕೆ ಬಂದಿತ್ತು. ಹೀಗಾಗಿ ಸಂಘದ ಪದಾಧಿಕಾರಿಗಳ ಒಂದು ತಿಂಗಳ ಪ್ರಯತ್ನದಿಂದ ಖಾಸಗಿ ಕೋವಿಡ್ ಆಸ್ಪತ್ರೆ ಕಾರ್ಯರೂಪ ಪಡೆಯುತ್ತಿದೆ. ಆಸ್ಪತ್ರೆಯ 100 ಹಾಸಿಗೆಗಳಲ್ಲಿ 50 ಬಿಪಿಎಲ್ ಸೇರಿ ಇತರ ಆರೋಗ್ಯ ಕಾರ್ಡ್ ಹೊಂದಿರುವ ಸೋಂಕಿತರಿಗೆ ಮೀಸಲಿಡಲಾಗಿದೆ. ಉಳಿದ ಬೆಡ್‌ಗಳನ್ನು ಖಾಸಗಿಯಾಗಿ ಚಿಕಿತ್ಸೆ ಪಡೆಯುವವರಿಗೆ ನಿಗದಿಪಡಿಸಲಾಗಿದೆ. ಸೋಂಕಿತರ ದಾಖಲು ಮಾಡಿಕೊಳ್ಳಲು ಜಿಲ್ಲಾ ಕೋವಿಡ್ ನೋಡಲ್ ಅಧಿಕಾರಿ ಶಿಫಾರಸು ಇರಬೇಕು. ಆಗ ಮಾತ್ರ ಆಸ್ಪತ್ರೆಯಲ್ಲಿ ದಾಖಲಿಸಿಕೊಂಡು ಚಿಕಿತ್ಸೆ ನೀಡಲಾಗುತ್ತದೆ.

  ಆಸ್ಪತ್ರೆ ನಿರ್ಮಾಣಕ್ಕೆ ಜಿಲ್ಲೆಯ ಎಲ್ಲ ವೈದ್ಯರು ತಲಾ 3 ಸಾವಿರ ರೂ.ನೀಡಿದ್ದಾರೆ. ಅಲ್ಲದೆ, ಆಯಾ ಖಾಸಗಿ ಆಸ್ಪತ್ರೆಯ ಹಾಸಿಗೆಗಳ ಅನುಗುಣವಾಗಿ ಪ್ರತಿ ಬೆಡ್‌ಗೆ ಒಂದು ಸಾವಿರ ರೂ. ನೀಡಲಾಗಿದೆ. ಅಲ್ಲದೆ ಕೋವಿಡ್ ಆಸ್ಪತ್ರೆ ಸಮರ್ಪಕ ನಿರ್ವಹಣೆಗೆ ಆಯಾ ಆಸ್ಪತ್ರೆಯಿಂದ ಒಬ್ಬ ನರ್ಸ್ ಹಾಗೂ ಸಹಾಯಕಿಯನ್ನು ನೀಡುವ ನಿರ್ಧಾರ ಕೈಗೊಂಡಿದ್ದು, ಡ್ಯೂಟಿ ವೈದ್ಯರು ಉಚಿತವಾಗಿ ಸೇವೆ ಮಾಡಲು ಮುಂದೆ ಬಂದಿದ್ದಾರೆ.

  ಜನರಿಗೆ ಸೇವೆ ಸಲ್ಲಿಸಬೇಕೆಂಬ ಉದ್ದೇಶದಿಂದ ಬಳ್ಳಾರಿಯಲ್ಲಿ ಖಾಸಗಿ ಕೋವಿಡ್ ಆಸ್ಪತ್ರೆ ಆರಂಭಿಸುತ್ತಿದ್ದೇವೆ. ಉಳ್ಳವರಿಗಾಗಿ ಆಸ್ಪತ್ರೆ ತೆರೆಯುತ್ತಿಲ್ಲ. ಬದಲಾಗಿ ಕರೊನಾ ಸೋಂಕಿತ ಬಡ-ನಿರ್ಗತಿಕರಿಗೆ ಹೆಚ್ಚಿನ ಮುತುವರ್ಜಿ ವಹಿಸಿ ಚಿಕಿತ್ಸೆ ನೀಡಲಾಗುವುದು. ನಮ್ಮ ಈ ಕಾರ್ಯಕ್ಕೆ ಅನಗತ್ಯ ತೊಂದರೆ ನೀಡದೆ ಜನರು ಸಹಕರಿಸಬೇಕು.
  | ಡಾ.ಮಧುಸೂದನ್ ಕಾರಿಗನೂರು ಐಎಂಎ, ಕರ್ನಾಟಕ ಶಾಖೆಯ ಅಧ್ಯಕ್ಷ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts